ಸಾರ್ವಜನಿಕರ ಕುಂದುಕೊರತೆ ಪರಿಹರಿಸಲು ಬಿಬಿಎಂಪಿ ಸಿಬ್ಬಂದಿಗೆ ಕೌಶಲ್ಯ ತರಬೇತಿ
ಸಾರ್ವಜನಿಕರ ಕುಂದುಕೊರತೆ ಪರಿಹರಿಸಲು ಮತ್ತು ಉತ್ತಮ ವೃತ್ತಿಪರ ವರ್ತನೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿಗೆ ಶೀಘ್ರದಲ್ಲೇ ಪ್ರೇರಣೆ ಹಾಗೂ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಆಯೋಜಿಸಲಾಗುತ್ತಿದೆ.
Published: 13th June 2022 01:03 PM | Last Updated: 13th June 2022 01:55 PM | A+A A-

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು: ಸಾರ್ವಜನಿಕರ ಕುಂದುಕೊರತೆ ಪರಿಹರಿಸಲು ಮತ್ತು ಉತ್ತಮ ವೃತ್ತಿಪರ ವರ್ತನೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿಗೆ ಶೀಘ್ರದಲ್ಲೇ ಪ್ರೇರಣೆ ಹಾಗೂ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಆಯೋಜಿಸಲಾಗುತ್ತಿದೆ.
ಕಾರ್ಪೋರೇಟ್ ವಲಯದಲ್ಲಿನ ಉದ್ಯೋಗಿಗಳಿಗೆ ಆಗಾಗ್ಗೆ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಐಎಎಸ್ ಅಧಿಕಾರಿಗಳಲ್ಲಿಯೂ ಗುಣಮಟ್ಟದ ಕೆಲಸ ಮತ್ತು ಉತ್ತಮ ಬೆಳವಣಿಗೆ ಖಾತ್ರಿಪಡಿಸಬೇಕಾಗಿದ್ದು, ಇದೇ ಮೊದಲ ಬಾರಿಗೆ ಬಿಬಿಎಂಪಿ ಸಿಬ್ಬಂದಿಗೆ ಇಂತಹ ತರಬೇತಿ ನೀಡಲಾಗುತ್ತಿದೆ.
ಸಾಮಾನ್ಯವಾಗಿ ಅನೇಕ ಐಎಎಸ್ ಅಫೀಸರ್ ಗಳು ಡೆಹ್ರಾಡೂನ್ ನಲ್ಲಿ ತರಬೇತಿ ಪಡೆದಿರುತ್ತಾರೆ. ಆದ್ದರಿಂದ ಅವರು, ಹೆಚ್ಚಿನ ವೃತ್ತಿಪರ ಕೌಶಲ ಕಲಿಯಬಹುದಾಗಿದೆ ಅಲ್ಲದೇ ಯಾವುದೇ ಹಿಂಜರಿಕೆಯಿಲ್ಲದೆ ಮಾತನಾಡಬಹುದಾಗಿದೆ. ಬಿಬಿಎಂಪಿ ನೂತನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಇದೇ ಹಾದಿಯಲ್ಲಿ ಬೆಂಗಳೂರಿನಲ್ಲಿ ತನ್ನ ಸಿಬ್ಬಂದಿಗೆ ತರಬೇತಿ ನೀಡಲು ಕಾರ್ಯೋನ್ಮುಖರಾಗಿದ್ದಾರೆ.
ಇದನ್ನೂ ಓದಿ: The New Indian Express ವರದಿ ಇಂಪ್ಯಾಕ್ಟ್: 24 ಗಂಟೆಗಳಲ್ಲೇ ಬಿಬಿಎಂಪಿಯಿಂದ 'ನೈಸ್' ಜಂಕ್ಷನ್ ರಸ್ತೆ ದುರಸ್ತಿ ಕಾರ್ಯ!!
ಬೆಸ್ಕಾಂನಲ್ಲಿದ್ದಾಗ ಇದೇ ರೀತಿಯ ತರಬೇತಿ ನೀಡಲಾಗಿತ್ತು. ಲೈನ್ ಮ್ಯಾನ್ ಗಳು ಹೆಚ್ಚಿನ ಪ್ರೇರಿತರಾಗಿದ್ದರು. ಬಿಡಬ್ಲ್ಯೂಎಸ್ ಎಸ್ ಬಿಯಲ್ಲೂ ಅದೇ ರೀತಿ ತರಬೇತಿ ನೀಡಲು ಪ್ರಯತ್ನಿಸಲಾಯಿತು, ಆದರೆ, ಅದು ಸಂಪೂರ್ಣವಾಗಲಿಲ್ಲ, ಕಾಲೇಜು ಇಲಾಖೆಯ ಸಿಬ್ಬಂದಿಗೂ ಇದೇ ರೀತಿಯಲ್ಲಿ ತರಬೇತಿ ನೀಡಲಾಗಿತ್ತು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತುಷಾರ್ ಗಿರಿನಾಥ್ ತಿಳಿಸಿದರು.