ಬೆಂಗಳೂರು: ಯಶವಂತಪುರ ಲಾಡ್ಜ್ ನಲ್ಲಿ ಮಹಿಳೆಯ ಹತ್ಯೆ

22 ವರ್ಷದ ಮಹಿಳೆಯೊಬ್ಬರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಲಾಡ್ಜ್ ವೊಂದರಲ್ಲಿ ಪತ್ತೆಯಾಗಿರುವ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 22 ವರ್ಷದ ಮಹಿಳೆಯೊಬ್ಬರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಲಾಡ್ಜ್ ವೊಂದರಲ್ಲಿ ಪತ್ತೆಯಾಗಿರುವ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ದೀಪಾ ಪದನ್ ಎಂದು ಗುರ್ತಿಸಲಾಗಿದೆ. ಪಾದರಕ್ಷೆಗಳ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಅನ್ಮೋಲ್ ಎಂಬಾತನೊಂದಿಗೆ ದೀಪಾ ಜೂನ್ 9 ಸಂಜೆ ಯಶವಂತಪುರ ರೈಲು ನಿಲ್ದಾಣದ ಬಳಿ ಇರುವ ಬೆಂಗಳೂರು ರೆಸಿಡೆನ್ಸಿಯ ರೂಮಿಗೆ ಬಂದಿದ್ದಾರೆ. ಮರುದಿನ ಮಹಿಳೆಯೊಬ್ಬರು ಹೋಟೆಲ್'ಗೆ ಬಂದಿದ್ದು, ದೀಪಾ ಅವರನ್ನು ಭೇಟಿಯಾಗಬೇಕೆಂದು ಹೇಳಿದ್ದಾರೆ. ಈ ವೇಳೆ ದೀಪಾ ಅವರಿದ್ದ ಕೊಠಡಿಗೆ ಹೋಟೆಲ್ ಸಿಬ್ಬಂದಿ ಕರೆದುಕೊಂಡು ಹೋಗಿದ್ದಾರೆ. ಬೆಲ್ ಹೊಡೆದರೂ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಬಾಗಿಲು ಲಾಕ್ ಆಗಿರದ ಕಾರಣ ತಳ್ಳಿ ನೋಡಿದಾಗ ಹಾಸಿಗೆ ಮೇಲೆ ದೀಪಾ ಮೃತದೇಹ ಬಿದ್ದಿರುವುದು ಕಂಡು ಬಂದಿದೆ.

ತನಿಖೆ ವೇಳೆ ದೀಪಾ ಅವರನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಇದೀಗ ದೀಪಾ ಜೊತೆಗೆ ಬಂದಿದ್ದ ಅನ್ಮೋಲ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಅನ್ಮೋಲ್ ಹಾಗೂ ದೀಪಾ ವಿವಾಹಿತರಾಗಿದ್ದು, ಪತ್ನಿ ಅಕ್ರಮ ಸಂಬಂಧ ಹೊಂದಿದ್ದರು. ದೀಪಾ ಮತ್ತೊಬ್ಬ ಯುವಕನೊಂದಿಗ ಸಂಬಂಧ ಹೊಂದಿದ್ದಾಳೆಂದು ತಿಳಿದ ಅನ್ಮೋಲ್, ಆಕೆಯನ್ನು ಲಾಡ್ಜ್ ವೊಂದಕ್ಕೆ ಕರೆತಂದು ಈ ವಿಚಾರ ಪ್ರಸ್ತಾಪಿಸಿ ಜಗಳ ಮಾಡಿದ್ದಾನೆ. ಬಳಿಕ ತಲೆದಿಂಬಿನಿಂದ ಆಕೆಯ ಉಸಿರುಗಟ್ಟಿಸಿ ಹತ್ಯೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಆರೋಪಿಗಾಗಿ ಯಶವಂತಪುರ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com