ಕೊಡಗು: ಅಂಗನವಾಡಿಗೆ ಈ ವರ್ಷ ಒಬ್ಬಳೇ ವಿದ್ಯಾರ್ಥಿ ಪ್ರವೇಶ; ಆದರೂ ಕಾರ್ಯನಿರ್ವಹಣೆ ನಿಂತಿಲ್ಲ!

ಕೊಡಗು ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿರುವ ಅಂಗನವಾಡಿಗೆ ಈ ವರ್ಷ ಒಂದೇ ಒಂದು ವಿದ್ಯಾರ್ಥಿ ಪ್ರವೇಶ ಪಡೆದಿದ್ದರೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಆರಂಭಿಕ ಶಿಕ್ಷಣ ಸಂಸ್ಥೆಗೆ ಇತ್ತೀಚೆಗೆ ಜಿಲ್ಲಾ ಪಂಚಾಯತ್ ಸಿಇಒ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿ ಶಾಲೆ
ಅಂಗನವಾಡಿ ಶಾಲೆ

ಮಡಿಕೇರಿ: ಕೊಡಗು ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿರುವ ಅಂಗನವಾಡಿಗೆ ಈ ವರ್ಷ ಒಂದೇ ಒಂದು ವಿದ್ಯಾರ್ಥಿ ಪ್ರವೇಶ ಪಡೆದಿದ್ದರೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಆರಂಭಿಕ ಶಿಕ್ಷಣ ಸಂಸ್ಥೆಗೆ ಇತ್ತೀಚೆಗೆ ಜಿಲ್ಲಾ ಪಂಚಾಯತ್ ಸಿಇಒ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಾಳಿಬೀಡು ಸಮೀಪದ ವನಚಲ ಗ್ರಾಮವು ಜಿಲ್ಲಾ ಕೇಂದ್ರ ಮಡಿಕೇರಿಯಿಂದ 13 ಕಿ.ಮೀ ದೂರದಲ್ಲಿದ್ದು ಇಲ್ಲಿ ಕೇವಲ 115 ಗ್ರಾಮಸ್ಥರು ನೆಲೆಸಿದ್ದಾರೆ. ಚುನಾವಣಾ ಸಮಯದಲ್ಲಿ ಈ ಗ್ರಾಮವನ್ನು ನಕ್ಸಲ್ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಡುತ್ತದೆ. ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಇದ್ದರೂ ಪ್ರವೇಶಾತಿ ಇಲ್ಲದ ಕಾರಣ ಮುಚ್ಚಲಾಗಿತ್ತು. ಅದೇನೇ ಇದ್ದರೂ, ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ ಮತ್ತು ಕೇಂದ್ರದಲ್ಲಿ ನಾಲ್ಕು ವಿದ್ಯಾರ್ಥಿಗಳು ತಮ್ಮ ಆರಂಭಿಕ ಶಿಕ್ಷಣವನ್ನು ಪಡೆಯುತ್ತಿದ್ದರು.

ಆದರೆ ಈ ವರ್ಷ, ಕೇಂದ್ರವು ಕೇವಲ ಒಬ್ಬ ವಿದ್ಯಾರ್ಥಿಯನ್ನು ಹೊಂದಿದ್ದು ಆದರೂ, ಕ್ರಿಯಾತ್ಮಕವಾಗಿ ಉಳಿದಿದೆ ಹಾಗೂ ಗುಣಮಟ್ಟದ ಕಲಿಕೆಯನ್ನು ನೀಡುತ್ತಿದೆ. ಶಿಕ್ಷಕಿ ಧರಣಿ ಗಾಳಿಬೀಡಿನಿಂದ ಪ್ರಯಾಣಿಸಿ ನಾಲ್ಕು ವರ್ಷದ ವಿದ್ಯಾರ್ಥಿನಿ ಯೋಗಿತಾ (ಹೆಸರು ಬದಲಾಯಿಸಲಾಗಿದೆ)ಗೆ ಕಲಿಸುತ್ತಿದ್ದಾರೆ.

'ಪ್ರಾರಂಭಿಕ ಶಿಕ್ಷಣದಲ್ಲಿ ಅಂಗನವಾಡಿ ಪ್ರಮುಖ ಪಾತ್ರ ವಹಿಸುತ್ತದೆ. ವನಚಲದಲ್ಲಿರುವ ಕೇಂದ್ರದ ಪ್ರಯತ್ನವು ಹೆಚ್ಚು ಶ್ಲಾಘನೀಯವಾಗಿದೆ. ಕೇಂದ್ರದಲ್ಲಿರುವ ಏಕೈಕ ವಿದ್ಯಾರ್ಥಿನಿ ಕನ್ನಡ ಮತ್ತು ಇಂಗ್ಲಿಷ್ ವರ್ಣಮಾಲೆಯನ್ನು ಚೆನ್ನಾಗಿ ಕಲಿತಿದ್ದಾಳೆ. ಸಂಖ್ಯೆಗಳನ್ನು ಸಹ ಕಲಿಯುತ್ತಿದ್ದಾಳೆ. ಪ್ರತಿ ವಿದ್ಯಾರ್ಥಿಗೆ ಶಿಕ್ಷಣ ನೀಡುವ ಕೇಂದ್ರದ ಗುರಿಯನ್ನು ವನಚಲ ಕೇಂದ್ರದಲ್ಲಿ ಯಶಸ್ವಿಯಾಗಿ ಸಾಧಿಸಲಾಗಿದೆ ಎಂದು ಇತ್ತೀಚೆಗೆ ಕೇಂದ್ರಕ್ಕೆ ಭೇಟಿ ನೀಡಿ ಏಕೈಕ ವಿದ್ಯಾರ್ಥಿಯೊಂದಿಗೆ ಸಂವಾದ ನಡೆಸಿದ ಜಿಲ್ಲಾ ಪಂಚಾಯಿತಿ ಸಿಇಒ ಭನ್ವರ್ ಸಿಂಗ್ ಮೀನಾ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com