ಬೀದರ್: ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ರೈತ ಸಂಘಗಳ ಪ್ರತಿಭಟನೆ

ರೈತರಿಗೆ ಅಗೌರವ ತೋರಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ವಜಾಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕಗಳು ಶುಕ್ರವಾರ ಬೀದರ್‌ನಲ್ಲಿ ಪ್ರತಿಭಟನೆ ನಡೆಸಿದವು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀದರ್: ರೈತರಿಗೆ ಅಗೌರವ ತೋರಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ವಜಾಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕಗಳು ಶುಕ್ರವಾರ ಬೀದರ್‌ನಲ್ಲಿ ಪ್ರತಿಭಟನೆ ನಡೆಸಿದವು.

ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ಪ್ರಧಾನಿ ಮೋದಿಯವರಿಗೆ ಬರೆದ ಮನವಿ ಪತ್ರ ಸಲ್ಲಿಸಿ, ಭಗವಂತ ಖೂಬಾ ಅವರು ಸಂಸದರಾದಾಗಿನಿಂದಲೂ ರೈತರ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದು, ರೈತರನ್ನು ಅವಮಾನಿಸುತ್ತಿದ್ದಾರೆಂದು ಆರೋಪಿಸಿದರು.

ಔರಾದ್ ತಾಲೂಕಿನ ಹೆಡಗಾಪುರ ಗ್ರಾಮದ ರೈತ ಮತ್ತು ಖೂಬಾ ನಡುವೆ ಇತ್ತೀಚೆಗೆ ನಡೆದ ಸಂಭಾಷಣೆಯನ್ನು ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಪ್ರಸ್ತಾಪಿಸಿದರು.

ಆಡಿಯೋ ಕ್ಲಿಪ್‌ನಲ್ಲಿ, ರಸಗೊಬ್ಬರ ಕೊರತೆಯ ಬಗ್ಗೆ ಕೇಳಿದ ರೈತನನ್ನು ಖೂಬಾ ಲೇವಡಿ ಮಾಡಿದ್ದಾರೆ ಎಂದು ಕೆಆರ್‌ಆರ್‌ಎಸ್ ಸದಸ್ಯರು ಹೇಳಿದರು.

ರೈತನಿಗೆ ಉತ್ತರಿಸಿದ ಖೂಬಾ, “ನಾನು ಕೇಂದ್ರ ಮಂತ್ರಿ. ರಾಜ್ಯಕ್ಕೆ ರಸಗೊಬ್ಬರ ನೀಡುವುದು ನನ್ನ ಕೆಲಸವಲ್ಲ. ನಿಮ್ಮ ಎಂಎಲ್ ಎ ಮತ್ತು ಅಧಿಕಾರಿಗಳನ್ನು ಕೇಳಿ ಎಂದು ಸಚಿವರು ತಮ್ಮ ಅಹಂಕಾರವನ್ನು ಪ್ರದರ್ಶಿಸಿದ್ದಾರೆಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com