
ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಗದಗ: ಮುಂದಿನ ವರ್ಷ ಮೇ ತಿಂಗಳಲ್ಲಿ ಚುನಾವಣೆ ಆಗುತ್ತೆ, ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಬಂದಿರೋದು ಚುನಾವಣೆಗೆ ಅನುಕೂಲವಾಗುತ್ತದೆ, ಮೋದಿ ಬಂದು ಯೋಗ ಮಾಡೋದು ನಮ್ಮ ರಾಜ್ಯದ ಅಭಿವೃದ್ಧಿಯ ಮುನ್ಸೂಚನೆಯಾಗಿದೆ ಎಂದು ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಮಿಲಿಟರಿ ಸೇರಬೇಕು ಎನ್ನುವವರು ದೇಶ ಭಕ್ತರು ಅಲ್ವಾ ಎಂದು ಪ್ರಶ್ನಿಸಿದ ಅವರು, ಅವರಿಗೆ ದೇಶದ ಬಗ್ಗೆ ಪ್ರೀತಿ, ಪ್ರೇಮ, ಸ್ವಾಭಿಮಾನ ಇರಬೇಕು. ಲಾರಿ, ರೈಲು ಸುಡುತ್ತಾರೆ. ಇಂತವರು ಆರ್ಮಿಗೆ ಸೇರಿ ಏನು ಕೆಲಸ ಮಾಡ್ತಾರೆ ಎಂದು ಪ್ರತಿಭಟನಾಕಾರರ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ಕರ್ನಾಟಕ ಪ್ರವಾಸಕ್ಕೆ ಪ್ರಧಾನಿ ಮೋದಿ ಆಗಮನ: ಸಾಲು ಸಾಲು ಪ್ರಶ್ನೆ ಮುಂದಿಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ
ಇವರು ಯಾವ ದೇಶವನ್ನು ಉದ್ಧಾರ ಮಾಡ್ತಾರೆ, ಅವರನ್ನು ಯಾವುದೋ ಒಂದು ಶಕ್ತಿ ಪ್ರಚೋದನೆ ಮಾಡುತ್ತಿದೆ ಎಂದ ಪಾಟೀಲ್, ಅಷ್ಟೊಂದು ಯುವಕರು ಸಡನ್ ಆಗಿ ಹೇಗೆ ಸೇರುತ್ತಾರೆ. ಪಟ್ಟಭದ್ರ ಹಿತಾಸಕ್ತಿಗಳು ಇವರನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಮೋದಿಯವರ ವರ್ಚಸ್ಸು ಕುಗ್ಗಿಸಲು ಯುವಕರನ್ನು ಪ್ರಚೋದನೆ ಮಾಡಿ ತಪ್ಪುದಾರಿಗೆ ಎಳೆಯುತ್ತಿದ್ದಾರೆ. ದಯಮಾಡಿ ಯುವಕರು ಇದಕ್ಕೆ ಕಿವಿಗೊಡಬಾರದು ಎಂದು ಸಲಹೆ ನೀಡಿದ್ದಾರೆ.