ಬೆಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಮಾಣ 5 ಪಟ್ಟು ಹೆಚ್ಚಳ!

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು ಬರೊಬ್ಬರಿ 5ಪಟ್ಟು ಹೆಚ್ಚಳವಾಗಿದೆ.
ಬೆಂಗಳೂರು ವಿಮಾನ ನಿಲ್ದಾಣ
ಬೆಂಗಳೂರು ವಿಮಾನ ನಿಲ್ದಾಣ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು ಬರೊಬ್ಬರಿ 5ಪಟ್ಟು ಹೆಚ್ಚಳವಾಗಿದೆ.

ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಕರ್ನಾಟಕದಾದ್ಯಂತ ವಿಮಾನ ಪ್ರಯಾಣದ ಏರಿಕೆಯತ್ತ ಸ್ಪಷ್ಟ ಪ್ರವೃತ್ತಿ ಕಂಡುಬಂದಿದೆ. 2022-2023 ರ ಏಪ್ರಿಲ್-ಸೆಪ್ಟೆಂಬರ್ ವರೆಗೆ, ಒಟ್ಟು 15 ಕೋಟಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು (15,00,44,013) ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಭಾರತದಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಿಂದ ಪ್ರಯಾಣ ಮಾಡಿದವರ ಸಂಖ್ಯೆ 6.36 ಕೋಟಿ (6,36,62,702)ಯಷ್ಟಿದೆ ಎಂದು ಅಂಕಿಅಂಶಗಳು ಬಹಿರಂಗಪಡಿಸುತ್ತವೆ. 

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಪ್ರಯಾಣಿಕರ ಪಾಲು 2021-2022ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 55,60,468 ಕ್ಕೆ ಹೋಲಿಸಿದರೆ 1,39,93,742 ಆಗಿದೆ. ಬೆಂಗಳೂರಿನಲ್ಲಿ ಕಂಡುಬರುವ ಸ್ಪಷ್ಟ ಪ್ರವೃತ್ತಿಯೆಂದರೆ ಜಾಗತಿಕ ಪ್ರಯಾಣವು ಹಿಂದಿನ ಹಣಕಾಸು ವರ್ಷದಲ್ಲಿ ಅದರ ಅಂಕಿಅಂಶಗಳಿಗಿಂತ ಸುಮಾರು ಐದು ಪಟ್ಟು ಹೆಚ್ಚಳ ಎಂಬುದನ್ನು ಈ ಅಂಕಿ-ಅಂಶಗಳು ತೋರಿಸಿದೆ. ಈ ಹಿಂದೆ ಕೇವಲ 3,26,535ರಷ್ಟಿದ್ದ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ 16,77,541 ಅಂತಾರಾಷ್ಟ್ರೀಯ ಪ್ರಯಾಣಿಕರನ್ನು KAI ದಾಖಲಿಸಿದೆ. ದೇಶೀಯ ರಂಗದಲ್ಲಿಯೂ, KIA ಹಿಂದಿನ ಹಣಕಾಸು ವರ್ಷದ ದ್ವಿಗುಣ ಸಂಖ್ಯೆಯನ್ನು ದಾಖಲಿಸಿದ್ದು, ಏಪ್ರಿಲ್ ಆರಂಭದ ಆರು ತಿಂಗಳಲ್ಲಿ ಬೆಂಗಳೂರಿನಿಂದ ಭಾರತದ ವಿವಿಧ ಭಾಗಗಳಿಗೆ 1,23,16,201 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಪ್ರಯಾಣಿಕರ ಅಂಕಿಅಂಶಗಳು ತಿಳಿಸುತ್ತವೆ, ಕಳೆದ ವರ್ಷದ ತಿಂಗಳುಗಳಲ್ಲಿ ಈ ಸಂಖ್ಯೆ 52,33,933 ರಷ್ಟಿತ್ತು.

ಸಾಂಕ್ರಾಮಿಕ ರೋಗದಿಂದ ಪ್ರಭಾವಿತವಾದ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಮೈಸೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳು ಸುಮಾರು ಮೂರು ಪಟ್ಟು ಹೆಚ್ಚಿನ ಹಾರಾಟವನ್ನು ದಾಖಲಿಸಿವೆ. ಈ ಪಟ್ಟಿಯಲ್ಲಿ ದೆಹಲಿ, ಮುಂಬೈ, ಗೋವಾ ಮತ್ತು ಚೆನ್ನೈ ವಿಮಾನ ನಿಲ್ದಾಣಗಳು ಮೊದಲ ನಾಲ್ಕು ಸ್ಥಾನಗಳನ್ನು ಹೊಂದಿವೆ. ರಾಜ್ಯದಲ್ಲಿ ವಿಮಾನ ಪ್ರಯಾಣಕ್ಕೆ ಸೆಪ್ಟೆಂಬರ್ ತಿಂಗಳು ಅತ್ಯಂತ ಉತ್ತಮವಾಗಿದ್ದು, KIA 24,06,879 ಪ್ರಯಾಣಿಕರನ್ನು ಕಂಡಿದ್ದು, ಕಳೆದ ವರ್ಷ ಇದೇ ತಿಂಗಳಿನಲ್ಲಿ ಕೇವಲ 13,07,562 ಪ್ರಯಾಣಿಕರು ಪ್ರಯಾಣಿಸಿದ್ದರು. 

ವಿಮಾನಯಾನ ತಜ್ಞ ಕ್ಯಾಪ್ಟನ್ ಮೋಹನ್ ರಂಗನಾಥನ್ ಈ ಪ್ರವೃತ್ತಿಯ ಬಗ್ಗೆ ಎಚ್ಚರಿಕೆಯ ಮಾತುಗಳನ್ನಾಡಿದ್ದು, “ಪ್ರಯಾಣದಲ್ಲಿನ ಈ ಉತ್ಕರ್ಷವು ಸುಮಾರು 2.5 ವರ್ಷಗಳವರೆಗೆ ಲಾಕ್‌ಡೌನ್ ಸಿಂಡ್ರೋಮ್‌ನ ಪರಿಣಾಮವಾಗಿದೆ. ಎಲ್ಲರೂ ಹೊರಗೆ ಹೋಗಿ ಪ್ರಯಾಣಿಸಲು ಬಯಸುತ್ತಾರೆ. ಹೆಚ್ಚಿನ ಪ್ರಯಾಣಿಕರು ವ್ಯಾಪಾರ ವರ್ಗದವರು ಮತ್ತು ದೀರ್ಘಕಾಲದವರೆಗೆ ಮನೆಯಿಂದ ಕೆಲಸ ಮಾಡುತ್ತಿರುವವರಾಗಿದ್ದಾರೆ (WFH). ಅಲ್ಲದೆ ವಿಮಾನ ಪ್ರಯಾಣವು ಈಗ ದುಬಾರಿಯಾಗಿದೆ ಮತ್ತು ಕುಟುಂಬ ಪ್ರಯಾಣ ಪ್ರಮಾಣ ವಾಸ್ತವವಾಗಿ ಕುಸಿದಿದೆ. ಬೆಂಗಳೂರು ಮತ್ತು ಗೋವಾ ನಡುವೆ ಈ ಹಿಂದೆ ಕೇವಲ 3,000 ರೂ. ಪ್ರಯಾಣದ ಅವಕಾಶವಿತ್ತು. ಆದರೆ ಇಂದು 15,000 ರೂ.ಗೆ ಏರಿಕೆಯಾಗಿದೆ. ಅಂತಹ ದರದಲ್ಲಿ ಕುಟುಂಬ ಪ್ರಯಾಣ ಮಾಡುವುದು ಅಸಾಧ್ಯ ಮತ್ತು ಭವಿಷ್ಯದಲ್ಲಿ ವೆಚ್ಚ ಕೂಡ ಕಡಿಮೆಯಾಗುವುದಿಲ್ಲ. ಇದು ವಹಿವಾಟಿನ ಮೇಲೆ ಪರಿಣಾಮ ಬೇರುತ್ತದೆ ಎಂದು ಅವರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com