ಬೆಂಗಳೂರು: ಕೆಂಪೇಗೌಡ ಲೇಔಟ್‌ನಲ್ಲಿ ರಸ್ತೆಗೆ ಬೇಲಿ ಹಾಕಿ ವೃದ್ಧ ದಂಪತಿ ಪ್ರತಿಭಟನೆ, ಬಿಡಿಎ ವಿರುದ್ಧ ಕಿಡಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನ್ಯಾಯಕ್ಕಾಗಿ ಒತ್ತಾಯಿಸಿ ಹಿರಿಯ ನಾಗರಿಕ ದಂಪತಿಗಳು ನಾಗರಿಕ ಸಂಸ್ಥೆ ನಿರ್ಮಿಸಿರುವ ವಿಸ್ತಾರವಾದ ನಾಡಪ್ರಭು ಕೆಂಪೇಗೌಡ ಲೇಔಟ್ ಮೂಲಕ ಹಾದುಹೋಗುವ ಮೇಜರ್ ಆರ್ಟಿರಿಯಲ್ ರಸ್ತೆಗೆ (ಎಂಎಆರ್) 100 ಮೀಟರ್‌ಗೂ ಹೆಚ್ಚು ಉದ್ದ ಬೇಲಿ ಹಾಕಿದ್ದಾರೆ.
ಚಿಕ್ಕ ಬೆಟ್ಟಯ್ಯ ಮತ್ತು ಪತ್ನಿ ಲಕ್ಷ್ಮಿ ನರಸಮ್ಮ
ಚಿಕ್ಕ ಬೆಟ್ಟಯ್ಯ ಮತ್ತು ಪತ್ನಿ ಲಕ್ಷ್ಮಿ ನರಸಮ್ಮ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನ್ಯಾಯಕ್ಕಾಗಿ ಒತ್ತಾಯಿಸಿ ಹಿರಿಯ ನಾಗರಿಕ ದಂಪತಿಗಳು ನಾಗರಿಕ ಸಂಸ್ಥೆ ನಿರ್ಮಿಸಿರುವ ವಿಸ್ತಾರವಾದ ನಾಡಪ್ರಭು ಕೆಂಪೇಗೌಡ ಲೇಔಟ್ ಮೂಲಕ ಹಾದುಹೋಗುವ ಮೇಜರ್ ಆರ್ಟಿರಿಯಲ್ ರಸ್ತೆಗೆ (ಎಂಎಆರ್) 100 ಮೀಟರ್‌ಗೂ ಹೆಚ್ಚು ಉದ್ದ ಬೇಲಿ ಹಾಕಿದ್ದಾರೆ.

ಬಡಾವಣೆ ರಚನೆಗೆ ತಮ್ಮ ಜಮೀನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಿರುವ ದಂಪತಿ, ಕಳೆದ ಎರಡು ವರ್ಷಗಳಿಂದ ಕಚೇರಿಯಿಂದ ಕಚೇರಿಗೆ ಅಲೆಯುತ್ತಲೇ ಇದ್ದಾರೆ. ಬಿಡಿಎಯಿಂದ ಬದಲಿಯಾಗಿ ನೀಡಿರುವ ಆಸ್ತಿಯನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿದ ನಂತರವೇ ರಸ್ತೆಯ ಇಕ್ಕೆಲಗಳಲ್ಲಿ ನಿರ್ಮಿಸಿರುವ ಬೇಲಿಯನ್ನು ತೆಗೆದುಹಾಕುತ್ತೇವೆ ಎಂದು ಹೇಳಿದ್ದಾರೆ.

ಚಿಕ್ಕ ಬೆಟ್ಟಯ್ಯ (75) ಎಡಗಾಲು ಮತ್ತು ಎಡಗೈ ಪಾರ್ಶ್ವವಾಯುವಿಗೆ ಒಳಗಾಗಿದ್ದು, ಅವರ ಪತ್ನಿ ಲಕ್ಷ್ಮಿ ನರಸಮ್ಮ (70) ಲೇಔಟ್‌ನ ನಾಲ್ಕನೇ ಬ್ಲಾಕ್‌ನ ಕೊಮ್ಮಘಟ್ಟ ಗ್ರಾಮದ ನಿವಾಸಿಗಳು. ಲೇಔಟ್‌ನ ಒಂಬತ್ತು ಬ್ಲಾಕ್‌ಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಬಳಸುತ್ತಿದ್ದ ಇತರೆ ಸೈಟ್ ಮಾಲೀಕರು ಮುಖ್ಯರಸ್ತೆಗೆ ಯಾರೊಬ್ಬರು ನುಸುಳಲು ಸಾಧ್ಯವಾಗದಂತೆ ಹಾಕಿರುವ ಬೇಲಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮಾಗಡಿ ರಸ್ತೆಯ ಮೂಲಕ ಮೈಸೂರು ರಸ್ತೆಯನ್ನು ಮತ್ತು 26,000 ಸೈಟುಗಳಿರುವ ಲೇಔಟ್‌ನ ಎಲ್ಲಾ ಒಂಬತ್ತು ಬ್ಲಾಕ್‌ಗಳನ್ನು ಸಂಪರ್ಕಿಸುವ 10.76 ಕಿಮೀ ರಸ್ತೆಯಲ್ಲಿ 5.7 ಕಿಮೀ ಕಾಮಗಾರಿಯನ್ನು ಬಿಡಿಎ ಪೂರ್ಣಗೊಳಿಸಿದೆ.

<strong>ರಸ್ತೆಗೆ ಬೇಲಿ ಹಾಕಿರುವ ದಂಪತಿ</strong>
ರಸ್ತೆಗೆ ಬೇಲಿ ಹಾಕಿರುವ ದಂಪತಿ

ನಿವೃತ್ತ ಕೆಎಸ್‌ಆರ್‌ಟಿಸಿ ಚಾಲಕರಾಗಿರುವ ಬೆಟ್ಟಯ್ಯ ಟಿಎನ್‌ಐಇ ಜೊತೆ ಮಾತನಾಡಿ, 'ಲೇಔಟ್‌ಗಾಗಿ ನಾವು ನಮ್ಮ 14 ಗುಂಟೆ ಭೂಮಿಯನ್ನು ಹಂಚಿಕೊಂಡಿದ್ದೇವೆ. ನಮ್ಮ ಪೂರ್ವಜರು ರೈತರಾಗಿದ್ದು, ಕಳೆದ 60 ವರ್ಷಗಳಿಂದ ಈ ಭೂಮಿ ನಮ್ಮ ಕುಟುಂಬದ ಒಡೆತನದಲ್ಲಿದೆ. ಈ ಭೂಮಿಗೆ ಬದಲಾಗಿ ನಮಗೆ 4,150 ಚದರ ಅಡಿ ಅಭಿವೃದ್ಧಿ ಪಡಿಸಿದ ಭೂಮಿಯನ್ನು ನೀಡಲಾಗಿದೆ. ಪರಿಹಾರದ ಮೊತ್ತವನ್ನು ನಮಗೆ ಹಸ್ತಾಂತರಿಸಲಾಗಿದೆ. ಆದರೆ, ಭೂಮಿಯನ್ನು ಇನ್ನೂ ನಮ್ಮ ಹೆಸರಿಗೆ ನೋಂದಾಯಿಸಿಲ್ಲ ಎಂದು ದೂರಿದ್ದಾರೆ.

ಬಿಡಿಎ ಅಧಿಕಾರಿಗಳು ಅವರೊಂದಿಗೆ ನಡೆದುಕೊಂಡ ರೀತಿಗೆ ಕೋಪಗೊಳ್ಳುವ ಬೆಟ್ಟಯ್ಯ, 'ನನ್ನ ಪಾರ್ಶ್ವವಾಯು ಸ್ಥಿತಿಯಲ್ಲಿ ನಾನು ಕಳೆದ ಎರಡು ವರ್ಷಗಳಲ್ಲಿ ಎಂಟು ಬಾರಿ ಬಿಡಿಎ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದೇನೆ. ಪ್ರತಿ ಬಾರಿ ಭೇಟಿ ನೀಡುವಾಗಲೆಲ್ಲಾ ಓಲಾ ಅಥವಾ ಉಬರ್‌ಗೆ 800 ರೂ.ಗಳನ್ನು ನೀಡಿದ್ದೇನೆ. ಫೈಲ್‌ಗಳು ಒಬ್ಬ ಅಧಿಕಾರಿಯಿಂದ ಇನ್ನೊಬ್ಬರಿಗೆ ಚಲಿಸುತ್ತಲೇ ಇರುತ್ತವೆ, ಆದರೆ ಭೂಮಿ ಎಂದಿಗೂ ನಮ್ಮ ಹೆಸರಿಗೆ ನೋಂದಣಿಯಾಗಿಲ್ಲ' ಎಂದು ಆರೋಪಿಸಿದ್ದಾರೆ.

ಅವರ ಪತ್ನಿ ಮಾತನಾಡಿ, 'ನಾವು ಒಪ್ಪಿಸಿದ ಜಮೀನಿನಲ್ಲಿ ವಿದ್ಯುತ್ ಸಂಪರ್ಕದೊಂದಿಗೆ ಒಂದು ಮನೆಯೂ ಇತ್ತು. ನಾವು ಸಾರ್ವಜನಿಕ ಉದ್ದೇಶಕ್ಕಾಗಿ ಎಲ್ಲವನ್ನೂ ತ್ಯಜಿಸಿದ್ದೇವೆ ಮತ್ತು ಇಂದು ನಾವು ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಜಮೀನನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಲು ಈಗಾಗಲೇ 1.5 ಲಕ್ಷ ರೂಪಾಯಿ ಲಂಚ ನೀಡಲಾಗಿದೆ ಎಂದು ದಂಪತಿ ಆರೋಪಿಸಿದ್ದಾರೆ.

'ನಾವು ಅದಕ್ಕೆ ಹೆಚ್ಚಿನ ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲ' ಎಂದು ಬೆಟ್ಟಯ್ಯ ಆರೋಪಿಸಿದರು. ಈ ಕುರಿತು ಬಿಡಿಎ ಅಧಿಕಾರಿಗಳ ಗಮನಕ್ಕೆ ತಂದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com