ಬೆಂಗಳೂರಿನ ರಸ್ತೆಗುಂಡಿಗೆ ಮತ್ತೊಂದು ಅವಘಡ: ಬೈಕ್ ನಿಂದ ಬಿದ್ದು ತಲೆಗೆ ತೀವ್ರ ಪೆಟ್ಟು, ಕೋಮಾಕ್ಕೆ ಜಾರಿದ ಸಂದೀಪ್

ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ವಾಹನ ಸವಾರರು ಬಿದ್ದು ನಡೆಯುತ್ತಿರುವ ಅವಾಂತರಗಳು ಮುಂದುವರಿದಿದೆ. ಬೆಂಗಳೂರಿನ ಗಂಗಮ್ಮ ಸರ್ಕಲ್ ಹತ್ತಿರ ರಸ್ತೆಗುಂಡಿಗೆ ಬಿದ್ದು ಬೈಕ್ ಸವಾರ ಸಂದೀಪ್ ಎಂಬುವವರ ತಲೆಗೆ ತೀವ್ರ ಪೆಟ್ಟಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ವಾಹನ ಸವಾರರು ಬಿದ್ದು ನಡೆಯುತ್ತಿರುವ ಅವಾಂತರಗಳು ಮುಂದುವರಿದಿದೆ. ಬೆಂಗಳೂರಿನ ಜಾಲಹಳ್ಳಿಯ ಗಂಗಮ್ಮ ಸರ್ಕಲ್ ಹತ್ತಿರ ರಸ್ತೆಗುಂಡಿಗೆ ಬಿದ್ದು ಬೈಕ್ ಸವಾರ ಸಂದೀಪ್ ಎಂಬುವವರ ತಲೆಗೆ ತೀವ್ರ ಪೆಟ್ಟಾಗಿದೆ.

ಬೈಕ್ ನಿಂದ ಬಿದ್ದ ಸಂದೀಪ್ ರನ್ನು ಕೂಡಲೇ ಹೆಚ್ ಎಂಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯುುವಂತೆ ವೈದ್ಯರು ಸೂಚಿಸಿದರು. ಬೈಕ್ ನಿಂದ ಬಿದ್ದ ರಭಸಕ್ಕೆ ತಲೆಗೆ ತೀವ್ರ ಏಟು ಬಿದ್ದು ಕೋಮಾಕ್ಕೆ ಜಾರಿರುವ ಸಂದೀಪ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. 

ತಮ್ಮ ಪತಿಯ ಚಿಕಿತ್ಸೆಗೆ 8-10 ಲಕ್ಷ ರೂಪಾಯಿ ಬೇಕಾಗಿದ್ದು ಇದಕ್ಕೆ ಬಿಬಿಎಂಪಿಯವರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಸಂದೀಪ್ ಪತ್ನಿ ಆರೋಪಿಸಿದ್ದಾರೆ. ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದಷ್ಟೇ ಸಂದೀಪ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com