ಬೆಂಗಳೂರು: ಉಪ ನೋಂದಣಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ; 9.7 ಲಕ್ಷ ರೂ. ನಗದು ವಶಕ್ಕೆ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ 21 ಕಚೇರಿಗಳಲ್ಲಿ ಏಕಕಾಲಕ್ಕೆ ಹಠಾತ್ ತಪಾಸಣೆ ನಡೆಸಿದ ಲೋಕಾಯುಕ್ತ ಪೊಲೀಸರಿಗೆ 14 ಉಪ ನೋಂದಣಿ ಕಚೇರಿಗಳಲ್ಲಿ ಲೆಕ್ಕವಿಲ್ಲದ 9,72,294 ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ 21 ಕಚೇರಿಗಳಲ್ಲಿ ಏಕಕಾಲಕ್ಕೆ ಹಠಾತ್ ತಪಾಸಣೆ ನಡೆಸಿದ ಲೋಕಾಯುಕ್ತ ಪೊಲೀಸರಿಗೆ 14 ಉಪ ನೋಂದಣಿ ಕಚೇರಿಗಳಲ್ಲಿ ಲೆಕ್ಕವಿಲ್ಲದ 9,72,294 ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.

ದಿಢೀರ್ ಭೇಟಿ ವೇಳೆ ಉಪ ನೋಂದಾವಣಿ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹಾಜರಾತಿ ಕಡತ, ನೋಂದಣಿಯಾಗಿರುವ ದಾಖಲೆಗಳು, ನೋಂದಣಿಗೆ ಬಾಕಿ ಇದ್ದ ದಾಖಲೆಗಳು, ವಿತರಣೆಯಾದ ದಾಖಲೆಗಳ ವಿವರ, ಚಲನ್‌ಗಳು, ನಗದು ಘೋಷಣಾ ರಿಜಿಸ್ಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

‘ಈ ಎಲ್ಲ ಕಚೇರಿಗಳಲ್ಲೂ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹಾಜರಾತಿ ಕಡತ, ನೋಂದಣಿಯಾಗಿರುವ ದಾಖಲೆಗಳು, ನೋಂದಣಿಗೆ ಬಾಕಿ ಇದ್ದ ದಾಖಲೆಗಳು, ವಿತರಣೆಯಾದ ದಾಖಲೆಗಳ ವಿವರ, ಚಲನ್‌ಗಳು, ನಗದು ಘೋಷಣಾ ರಿಜಿಸ್ಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮಧ್ಯವರ್ತಿಗಳನ್ನು ಮತ್ತಷ್ಟು ವಿಚಾರಣೆ ನಡೆಸಿದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯ 14, ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಐದು ಮತ್ತು ರಾಮನಗರ ಜಿಲ್ಲೆಯ ರಾಮನಗರ ಹಾಗೂ ಕನಕಪುರ ಉಪ ನೋಂದಣಿ ಕಚೇರಿಗಳ ಮೇಲೆ ಗುರುವಾರ ದಾಳಿ ಮಾಡಿದ್ದ ಲೋಕಾಯುಕ್ತ ಪೊಲೀಸರು, ತಡರಾತ್ರಿವರೆಗೂ ಶೋಧ ನಡೆಸಿದ್ದರು.

ವರ್ತೂರು ಉಪ ನೋಂದಣಿ ಕಚೇರಿಯಲ್ಲಿ ರೂ.3.17 ಲಕ್ಷ, ಬನಶಂಕರಿ ಕಚೇರಿಯಲ್ಲಿ ರೂ.1.18 ಲಕ್ಷ, ಹೊಸಕೋಟೆ ಕಚೇರಿಯಲ್ಲಿ ರೂ.1.04 ಲಕ್ಷ, ಆನೇಕಲ್ ಕಚೇರಿಯಲ್ಲಿ ರೂ. 95,630, ಬೇಗೂರು ಕಚೇರಿಯಲ್ಲಿ ರೂ.93,406, ಕೆಂಗೇರಿಯಲ್ಲಿ ರೂ.42,000 ನಗದು ಮಧ್ಯವರ್ತಿಗಳ ಬಳಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಬಿ.ಎಸ್‌. ಪಾಟೀಲ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com