ಬೆಂಗಳೂರು: ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿ ಅನುಮಾನಾಸ್ಪದ ರೀತಿ ಸಾವು, ಪೋಷಕರಿಂದ ದೂರು ದಾಖಲು

ನಗರದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಶಿಕ್ಷಕಿ ಹೊಡೆದಿದ್ದರಿಂದ ಮೃತಪಟ್ಟಿದ್ದಾಳೆ ಎಂದು ಬಾಲಕಿಯ ಪೋಷಕರು ಆರೋಪಿಸುತ್ತಿದ್ದಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ನಗರದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಶಿಕ್ಷಕಿ ಹೊಡೆದಿದ್ದರಿಂದ ಮೃತಪಟ್ಟಿದ್ದಾಳೆ ಎಂದು ಬಾಲಕಿಯ ಪೋಷಕರು ಆರೋಪಿಸುತ್ತಿದ್ದಾರೆ.

ಜಾಲಹಳ್ಳಿ ವ್ಯಾಪ್ತಿಯ ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಚಂದ್ರಾಪುರದಲ್ಲಿರುವ ಖಾಸಗಿ ಶಾಲೆಯಲ್ಲಿ ದುರಂತ ನಡೆದಿದೆ. 11 ವರ್ಷದ ನಿಶಿತಾ ಮೃತ ಬಾಲಕಿ. ಈಕೆ ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆಗೆ ಮೃತಪಟ್ಟಿದ್ದು, ಶಾಲೆಯಿಂದ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಬಿದ್ದ ಬಾಲಕಿಯನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಪೋಷಕರು ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ನಿಶಿತಾ ಅಜ್ಜಿ ನರ್ಸಮ್ಮ, ಶಾಲೆಯಲ್ಲಿ ಶಿಕ್ಷಕಿ ಹೊಡೆದು ಮೊಮ್ಮಗಳು ಮೃತಪಟ್ಟಿದ್ದಾಳೆ. ನಮ್ಮ ಮಗುವಿನ ಮೇಲೆ ಶಿಕ್ಷಕಿಯೊಬ್ಬರು ಹಲ್ಲೆ ಮಾಡಿದ್ದಾರೆ. ಆಗ ಮಗು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದೆ. ಈ ಹಿಂದೆ ಕೂಡ ಡೆಸ್ಟರ್‌ನಿಂದ ಕಣ್ಣಿಗೆ ಹೊಡೆದಿದ್ದರು. ನಿನ್ನೆ ಕೂಡ ಹೊಡೆದಿದ್ದಾರೆ, ಅದೇ ಕಾರಣಕ್ಕೆ ಮಗು ಮೃತಪಟ್ಟಿದೆ. ನಮಗೆ ವಿಚಾರ ತಿಳಿದು ಸ್ಕೂಲ್ ಬಳಿ ಹೋದಾಗ ಮಗುಗೆ ಪ್ರಜ್ಞೆ ಇರಲಿಲ್ಲ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ವಿ, ಅಷ್ಟರಲ್ಲಿ ಮಗು ಮೃತಪಟ್ಟಿತು. ಈಗ ಸ್ಕೂಲ್‍ನವರು, 4 ಲಕ್ಷ ಪರಿಹಾರ ಕೊಡ್ತೀವಿ ಅಂತಿದ್ದಾರೆ. ನಮಗೆ ಹಣ ಬೇಡ, ನಮಗೆ ನ್ಯಾಯಬೇಕು. ಹಲ್ಲೆ ಮಾಡಿದ ಶಿಕ್ಷಕಿ ಬಂಧಿಸಬೇಕು ಎಂದು ಒತ್ತಾಯಿಸಿದರು. 

ನಿಶಿತಾಳ ಕೊನೆ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯದಲ್ಲಿ ನಿಶಿತಾ ತನ್ನ ಸ್ಕೂಲ್‍ನಲ್ಲೇ ಓದುತ್ತಿದ್ದ ತಮ್ಮನನ್ನು ಮಧ್ಯಾಹ್ನ 1:30ರ ವೇಳೆ ಹೊರಗೆ ಕರೆದುಕೊಂಡು ಬಂದು ಅಜ್ಜಿ ಜೊತೆಗೆ ಬಿಟ್ಟು ಹೋಗಿದ್ದಳು. ಆದರೆ ಆಕೆಯನ್ನು 1:50ರ ವೇಳೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಸ್ಕೂಲ್‍ನ ಹೊರಗೆ ತಂದಿದ್ದಾರೆ. ಸಿಬ್ಬಂದಿಯೇ ಬೈಕ್‍ವೊಂದರಲ್ಲಿ ಕೂರಿಸಿಕೊಂಡು, ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿಂದ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ನಿಶಿತಾ ಮೃತಪಟ್ಟಿರುವ ವಿಚಾರ ತಿಳಿಸಿದ ನಂತರ ಪೋಷಕರಿಗೆ ವಿಚಾರ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆಸ್ಪತ್ರೆಗೆ ಹೋಗುವ ಮೊದಲೇ ವಿದ್ಯಾರ್ಥಿನಿ ಮೃತಪಟ್ಟಿರುವುದು ದೃಢವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com