ಬೆಂಗಳೂರು: ಹೆಚ್ಚು ಸಾಗು ಕೇಳಿದ್ದು ಅಲ್ಲದೆ, ಹೋಟೆಲ್ ಮಾಲೀಕ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು!

ರೊಟ್ಟಿ ತಿನ್ನುವ ವೇಳೆ ಹೆಚ್ಚು ಸಾಗು ಕೇಳಿದ್ದೂ ಅಲ್ಲದೆ, ಹೋಟೆಲ್ ಸಿಬ್ಬಂದಿ ಹಾಗೂ ಮಾಲೀಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ವೈಟ್'ಫೀಲ್ಡ್'ನ ಇಮ್ಮಡಿಹಳ್ಳಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರೊಟ್ಟಿ ತಿನ್ನುವ ವೇಳೆ ಹೆಚ್ಚು ಸಾಗು ಕೇಳಿದ್ದೂ ಅಲ್ಲದೆ, ಹೋಟೆಲ್ ಸಿಬ್ಬಂದಿ ಹಾಗೂ ಮಾಲೀಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ವೈಟ್'ಫೀಲ್ಡ್'ನ ಇಮ್ಮಡಿಹಳ್ಳಿಯಲ್ಲಿ ನಡೆದಿದೆ.

ಇಮ್ಮಡಿಯಲ್ಲಿರುವ ಎಸ್ಎಲ್'ವಿ ಹೋಟೆಲ್ ಮಾಲೀಕ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಹೋಟೆಲ್ ಸೆಲ್ಫ್ ಸರ್ವೀಸ್ ಹೋಟೆಲ್ ಆಗಿದ್ದು, ಬುಧವಾರ ರಾತ್ರಿ 9.30-10.30ರ ಸುಮಾರಿಗೆ ಘಟನೆ ನಡೆದಿದೆ.

ಬುಧವಾರ ರಾತ್ರಿ ಮೂವರಿದ್ದ ಗುಂಪೊಂದು ಹೋಟೆಲ್ ಬಂದಿದ್ದು, ರೊಟ್ಟಿ ಪಡೆದುಕೊಂಡು ತಿಂದಿದ್ದಾರೆ. ಈ ವೇಳೆ ಮೂವರಲ್ಲಿ ಒಬ್ಬ ವ್ಯಕ್ತಿ ಹೋಟೆಲ್ ಸಿಬ್ಬಂದಿಯ ಬಳಿ ಹೆಚ್ಚು ಸಾಗು ಕೇಳಿದ್ದಾನೆ. ಈ ವೇಳೆ ಸಿಬ್ಬಂದಿ ಜೊತೆಗೆ ಜಗಳಕ್ಕಿಳಿದಿದ್ದಾನೆ. ಬಳಿಕ ಹೋಟೆಲ್ ಮಾಲೀಕ ಡಿ ವೆಂಕಟ ಸುಬ್ಬಯ್ಯ (39) ಅವರು ಮಧ್ಯೆ ಪ್ರವೇಶಿಸಿದ್ದು, ಮೂವರೂ ಸೇರಿಕೊಂಡು ಪ್ಲಾಸ್ಟಿಕ್ ಬಕೆಟ್, ಸ್ಟೂಲ್ ಹಾಗೂ ಇತರೆ ವಸ್ತುಗಳ ಬಳಸಿಕೊಂಡು ಥಳಿಸಿದ್ದಾರೆ. ಈ ಸಂಬಂಧ ಹೋಟೆಲ್ ಮಾಲೀಕ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದುಷ್ಕರ್ಮಿಗಳ ಹಲ್ಲೆಯಿಂದಾಗಿ ನಾನು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದ ಬಳಿಕ ಇದೀಗ ಮನೆಯಲ್ಲಿದ್ದೇನೆ. ಮೂವರ ಪೈಕಿ ಓರ್ವನನ್ನು ಜೀವನ್ ಎಂದು ಗುರ್ತಿಸಲಾಗಿದ್ದು, ಸ್ಥಳೀಯನಾಗಿರುವ ಈತನೊಂದಿಗೆ ಇಬ್ಬರು ಹೋಟೆಲ್'ಗೆ ಬಂದಿದ್ದರು. ಮೊದಲಿಗೆ ಹೋಟೆಲ್ ಸಿಬ್ಬಂದಿಯಾಗಿರುವ ಶರಪತ್ ಜೊತೆಗೆ ಮೂವರು ಜಗಳಕ್ಕಿಳಿದಿದ್ದರು. ಈ ವೇಳೆ ನಾನು ಮಧ್ಯೆ ಪ್ರವೇಶಿಸಿದಾಗ ಹಲ್ಲೆ ನಡೆಸಿ, ಪರಾರಿಯಾದರು. ಹೋಟೆಲ್'ಗೆ ಸೇರಿದ ವಾಹನವನ್ನು ನಾಶಪಡಿಸಿದ್ದಾರೆಂದು ಸುಬ್ಬಯ್ಯ ಅವರು ಹೇಳಿದ್ದಾರೆ.

ಮೂವರ ವಿರುದ್ಧ ಇದೇ ರೀತಿಯ ಪ್ರಕರಣಗಳು ಈ ಹಿಂದೆ ಕೂಡ ದಾಖಲಾಗಿದೆ. ಮೂವರಿಗಾಗಿ ಹುಡುಕಾಟ ಆರಂಭವಾಗಿದೆ. ಮೂವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಇತರ ಸೆಕ್ಷನ್‌ಗಳ ಜೊತೆಗೆ ಅಪಾಯಕಾರಿ ಆಯುಧಗಳು ಅಥವಾ ವಸ್ತುಗಳಿಂದ ನೋವುಂಟು ಮಾಡಿದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com