ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಎಡಿಜಿಪಿ ಮಟ್ಟದ ಅಧಿಕಾರಿ ನಿಯೋಜನೆ

ಮಹಾನಗರದಲ್ಲಿನ ಸಂಚಾರ ದಟ್ಟಣೆಯನ್ನು ಇನ್ನೂ ಉತ್ತಮ ರೀತಿಯಲ್ಲಿ ನಿರ್ವಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಂಟಿ ಪೊಲೀಸ್ ಆಯುಕ್ತರ  (ಸಂಚಾರ) ಹುದ್ದೆಯನ್ನು ವಿಶೇಷ ಆಯುಕ್ತರನ್ನಾಗಿ ಮೇಲ್ದರ್ಜೇಗೇರಿಸಿದೆ. ಇದಕ್ಕೆ ಎಡಿಜಿಪಿ ಮಟ್ಟದ ಅಧಿಕಾರಿಯನ್ನು ನಿಯೋಜಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಹಾನಗರದಲ್ಲಿನ ಸಂಚಾರ ದಟ್ಟಣೆಯನ್ನು ಇನ್ನೂ ಉತ್ತಮ ರೀತಿಯಲ್ಲಿ ನಿರ್ವಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಂಟಿ ಪೊಲೀಸ್ ಆಯುಕ್ತರ  (ಸಂಚಾರ) ಹುದ್ದೆಯನ್ನು ವಿಶೇಷ ಆಯುಕ್ತರನ್ನಾಗಿ ಮೇಲ್ದರ್ಜೇಗೇರಿಸಿದೆ. ಇದಕ್ಕೆ ಎಡಿಜಿಪಿ ಮಟ್ಟದ ಅಧಿಕಾರಿಯನ್ನು ನಿಯೋಜಿಸಿದೆ.

ಎಡಿಜಿಪಿ ಎಂ ಅಬ್ದುಲ್ಲಾ ಸಲೀಂ ಅವರನ್ನು ವಿಶೇಷ ಆಯುಕ್ತರನ್ನಾಗಿ (ಸಂಚಾರ) ವರ್ಗಾಯಿಸಲಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರು ಸಂಚಾರ ಪೊಲೀಸರು ಎಡಿಜಿಪಿ ಮಟ್ಟದ ಅಧಿಕಾರಿಯನ್ನು ತನ್ನ ಮುಖ್ಯಸ್ಥರನ್ನಾಗಿ ಪಡೆಯಲಿದೆ. ಇದೀಗ ನಗರದಲ್ಲಿ ಇದೇ ಶ್ರೇಯಾಂಕದ ಇಬ್ಬರು ಅಧಿಕಾರಿಗಳು ಇರಲಿದ್ದಾರೆ. ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕೂಡಾ ಎಡಿಜಿಪಿ ಮಟ್ಟದ ಅಧಿಕಾರಿಯಾಗಿದ್ದಾರೆ. 

ಸಲೀಂ ನಗರದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಐಜಿಪಿ ಅಥವಾ ಡಿಐಜಿ ಮಟ್ಟದ ಅಧಿಕಾರಿಗೆ ನಗರದಲ್ಲಿನ ಸಂಚಾರ ನಿರ್ವಹಣೆ ಜವಾಬ್ದಾರಿಯನ್ನು ನೀಡಲಾಗಿತ್ತು. ನಗರದಲ್ಲಿನ ಸಂಚಾರಿ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಯನ್ನು ನಿಯೋಜಿಸಲು  ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಸಲೀಂ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಸೇರಿದಂತೆ ನಗರದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಜಂಟಿ ಪೊಲೀಸ್ ಕಮೀಷನರ್ (ಸಂಚಾರ) ಡಿಐಜಿ ಬಿಆರ್ ರವಿಕಾಂತೇಗೌಡ ಅವರನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಇನ್ನೂ ಅನೇಕ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾಯಿಸಿದೆ.

 ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ಸಲೀಂ ಅವರಿಂದ ತೆರವಾಗಿರುವ ಎಡಿಜಿಪಿ ( ಆಡಳಿತ)  ಹುದ್ದೆ ವಹಿಸಿಕೊಳ್ಳಲಿದ್ದಾರೆ.  ಬೆಂಗಳೂರು ನಗರ (ಅಪರಾಧ) ಜಂಟಿ ಪೊಲೀಸ್ ಆಯುಕ್ತ ಡಿಐಜಿ ರಮಣ್ ಗುಪ್ತಾ ಅವರನ್ನು ಗುಪ್ತಚರ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಡಿಐಜಿ ಲೋಕೇಶ್ ಕುಮಾರ್ ಅವರನ್ನು ಬಳ್ಳಾರಿ ವಲಯದ ಡಿಐಜಿ ಆಗಿ ವರ್ಗಾಯಿಸಲಾಗಿದೆ. ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರನ್ನು ವೆಸ್ಟರ್ನ್ ರೇಂಜ್ ಡಿಐಜಿಯಾಗಿ ವರ್ಗಾಯಿಸಲಾಗಿದೆ. ಸಿಐಡಿಯಲ್ಲಿದ್ದ ಎಸ್ ಪಿ ರವಿ ಡಿ ಚೆನ್ನಣ್ಣನವರ್ ಅವರನ್ನು ಕಿಯೋನಿಕ್ಸ್ ಎಂಡಿ ಆಗಿ ನಿಯೋಜಿಸಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com