ಭಾರತೀಯ ಕೋಸ್ಟ್ ಗಾರ್ಡ್‌ಗೆ ಕೊನೆಯ ಎಎಲ್‌ಎಚ್‌ ಎಂಕೆ– III ಹೆಲಿಕಾಪ್ಟರ್‌ ಹಸ್ತಾಂತರಿಸಿದ ಎಚ್ಎಎಲ್

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ಭಾರತೀಯ ಕಡಲು ಕಾವಲು ಪಡೆಯೊಂದಿಗೆ (ಇಂಡಿಯನ್‌ ಕೋಸ್ಟ್‌ ಗಾರ್ಡ್‌) ಮಾಡಿಕೊಂಡಿದ್ದ ಒಪ್ಪಂದದ ಅನುಸಾರ 16 ಎಎಲ್‌ಎಚ್‌ (ಎಂಕೆ-III, ಮೆರಿಟೈಮ್ ರೋಲ್) ಹೆಲಿಕಾಪ್ಟರ್‌ಗಳ ಪೂರೈಕೆ ಸರಣಿಯ ಕೊನೆಯ ಹೆಲಿಕಾಪ್ಟರ್‌ ಅನ್ನು ಹಸ್ತಾಂತರಿಸಿತು.
ಎಚ್‌ಎಎಲ್ ಸಿಎಂಡಿ ಸಿಬಿ ಅನಂತಕೃಷ್ಣನ್ ಅವರು ಮಂಗಳವಾರ ಬೆಂಗಳೂರಿನಲ್ಲಿ ಕೋಸ್ಟ್ ಗಾರ್ಡ್ ಡಿಜಿ ವಿ.ಎಸ್. ಪಠಾನಿಯಾ ಅವರಿಗೆ ಎಎಲ್‌ಹೆಚ್ ಎಂಕೆ-III ಮಾದರಿಯನ್ನು ಹಸ್ತಾಂತರಿಸಿದರು.
ಎಚ್‌ಎಎಲ್ ಸಿಎಂಡಿ ಸಿಬಿ ಅನಂತಕೃಷ್ಣನ್ ಅವರು ಮಂಗಳವಾರ ಬೆಂಗಳೂರಿನಲ್ಲಿ ಕೋಸ್ಟ್ ಗಾರ್ಡ್ ಡಿಜಿ ವಿ.ಎಸ್. ಪಠಾನಿಯಾ ಅವರಿಗೆ ಎಎಲ್‌ಹೆಚ್ ಎಂಕೆ-III ಮಾದರಿಯನ್ನು ಹಸ್ತಾಂತರಿಸಿದರು.
Updated on

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ಭಾರತೀಯ ಕಡಲು ಕಾವಲು ಪಡೆಯೊಂದಿಗೆ (ಇಂಡಿಯನ್‌ ಕೋಸ್ಟ್‌ ಗಾರ್ಡ್‌) ಮಾಡಿಕೊಂಡಿದ್ದ ಒಪ್ಪಂದದ ಅನುಸಾರ 16 ಎಎಲ್‌ಎಚ್‌ (ಎಂಕೆ-III, ಮೆರಿಟೈಮ್ ರೋಲ್) ಹೆಲಿಕಾಪ್ಟರ್‌ಗಳ ಪೂರೈಕೆ ಸರಣಿಯ ಕೊನೆಯ ಹೆಲಿಕಾಪ್ಟರ್‌ ಅನ್ನು ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿತು.

ಕೋವಿಡ್-19 ಸಂದರ್ಭದಲ್ಲಿಯೂ ತಡೆರಹಿತ ಉತ್ಪಾದನಾ ಚಟುವಟಿಕೆಗಳೊಂದಿಗೆ ಎಚ್‌ಎಎಲ್ ಎಲ್ಲಾ ಹೆಲಿಕಾಪ್ಟರ್‌ಗಳನ್ನು ಅತಿ ಕಡಿಮೆ ಅವಧಿಯಲ್ಲಿ ಹಸ್ತಾಂತರಿಸಿದೆ. ಇದು ಭಾರತದ ಕಡಲು ತೀರದಲ್ಲಿನ ಭದ್ರತೆಯನ್ನು ಹೆಚ್ಚಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಕೋಸ್ಟ್‌ ಗಾರ್ಡ್‌ನ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್‌. ಪಠಾನಿಯಾ ತಿಳಿಸಿದರು.

ಕೋಸ್ಟ್ ಗಾರ್ಡ್ 2017ರ ಮಾರ್ಚ್ ತಿಂಗಳಲ್ಲಿ 16 ALH Mk III ಹೆಲಿಕಾಪ್ಟರ್‌ಗಳ ಪೂರೈಕೆಗೆ ಎಚ್ಎಎಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

ಎಚ್‌ಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್‌ ಮಾತನಾಡಿ, ಈ ಒಪ್ಪಂದದ ವಿಶಿಷ್ಟ ಲಕ್ಷಣವೆಂದರೆ, ಕಾರ್ಯಕ್ಷಮತೆ ಆಧಾರಿತ ಲಾಜಿಸ್ಟಿಕ್ಸ್ (ಪಿಬಿಎಲ್) - ಎಚ್ಎಎಲ್‌ನಿಂದ ಈ ಹೆಲಿಕಾಪ್ಟರ್‌ಗಳ ನಿರ್ವಹಣೆಗೆ ಒಂದು ಉತ್ತಮ ಪರಿಹಾರವಾಗಿದೆ ಎಂದರು.

'ಇದು ನಮ್ಮ ಎಲ್ಲಾ ಭವಿಷ್ಯದ ಒಪ್ಪಂದಗಳಿಗೆ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಮ್ಮ ಎಲ್ಲಾ ಗ್ರಾಹಕರ ಹಿತದೃಷ್ಟಿಯಿಂದ ಇಂತಹ ಕೆಲಸವನ್ನು ವೇಗಗೊಳಿಸಲು ಮತ್ತು ರಕ್ಷಣಾ ಪರಿಸರ ವ್ಯವಸ್ಥೆಯಲ್ಲಿ ಮೇಕ್-ಇನ್-ಇಂಡಿಯಾ ಚಟುವಟಿಕೆಗಳನ್ನು ಬಲಪಡಿಸಲು ಖಾಸಗಿ ಪಾಲುದಾರರೊಂದಿಗೆ ಕೆಲಸ ಮಾಡುವ ನಮ್ಮ ಸಂಕಲ್ಪವನ್ನು ಹೆಚ್ಚಿಸುತ್ತದೆ' ಎಂದು ಅವರು ಹೇಳಿದರು.

ಸುಧಾರಿತ ಹಗುರ ಹೆಲಿಕಾಪ್ಟರ್‌ (ಎಎಲ್ಎಚ್) ಎಂಕೆ 3 ಅನ್ನು ಎಚ್‌ಎಎಲ್‌ ದೇಶೀಯವಾಗಿಯೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಕಂಪನಿಯು ಈವರೆಗೆ ಒಟ್ಟು 330 ಎಎಲ್‌ಎಚ್‌ ಹೆಲಿಕಾಪ್ಟರ್‌ಗಳನ್ನು ತಯಾರಿಸಿದೆ. ಬಹು ಉದ್ದೇಶದ  ಈ ಹೆಲಿಕಾಪ್ಟರ್‌ ಈವರೆಗೆ 3.74 ಲಕ್ಷ ಗಂಟೆಗಳಷ್ಟು ಹಾರಾಟ ನಡೆಸಿದೆ ಎಂದು ಎಚ್‌ಎಎಲ್‌ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com