ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಹಾನಿಕಾರಕ ರಾಸಾಯನಿಕಗಳು: ಅಧ್ಯಯನ
ಸಾರ್ವಜನಿಕರಿಗೆ ವಿತರಿಸುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಸ್ಥಿತಿಗತಿಯ ಅಧ್ಯಯನದ ನಂತರ, ಸರ್ಕಾರವು ಗುಣಮಟ್ಟವನ್ನು ಹೇಗೆ ಕಾಪಾಡುತ್ತದೆ ಎಂಬ ಬಗ್ಗೆ ಆತಂಕ ಎದುರಾಗಿದೆ.
Published: 24th November 2022 04:09 PM | Last Updated: 24th November 2022 04:09 PM | A+A A-

ಸ್ಯಾನಿಟರಿ ಪ್ಯಾಡ್
ಬೆಂಗಳೂರು: ಸಾರ್ವಜನಿಕರಿಗೆ ವಿತರಿಸುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಸ್ಥಿತಿಗತಿಯ ಅಧ್ಯಯನದ ನಂತರ, ಸರ್ಕಾರವು ಗುಣಮಟ್ಟವನ್ನು ಹೇಗೆ ಕಾಪಾಡುತ್ತದೆ ಎಂಬ ಬಗ್ಗೆ ಆತಂಕ ಎದುರಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಪ್ಯಾಡ್‌ಗಳನ್ನು ವಿತರಿಸುವ ಶುಚಿ ಯೋಜನೆಯಂತಹ ಸರ್ಕಾರಿ ಕಾರ್ಯಕ್ರಮಗಳು ಸ್ಯಾನಿಟರಿ ಪ್ಯಾಡ್‌ಗಳನ್ನು ಉತ್ಪಾದಿಸಲು ತಮ್ಮದೇ ಆದ ವಿಶೇಷತೆಗಳನ್ನು ಹೊಂದಿವೆ.
'ಸದ್ಯ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಒಂದೇ ಪ್ಯಾಕ್‌ನಲ್ಲಿ 10 ಬರುತ್ತಿದ್ದು, ಅವುಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ವಿತರಿಸಲಾಗುತ್ತದೆ. ಇವುಗಳನ್ನು ಸರ್ಕಾರವೇ ಉತ್ಪಾದಿಸುತ್ತದೆ. ನ್ಯಾಪ್‌ಕಿನ್‌ಗಳ ಉತ್ಪಾದನೆಯಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವ-ಸಹಾಯ ಗುಂಪುಗಳು ಭಾಗವಹಿಸುವಂತೆ ನಾವು ಪ್ರಾಯೋಗಿಕ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ. 16 ರಿಂದ 18 ವರ್ಷ ವಯಸ್ಸಿನ ಬಾಲಕಿಯರಿಗೆ ಎರಡು ಜಿಲ್ಲೆಗಳಲ್ಲಿ ಮುಟ್ಟಿನ ಕಪ್‌ಗಳನ್ನು ವಿತರಿಸಲಾಗುತ್ತಿದೆ' ಎಂದು ಆರೋಗ್ಯ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.
ದೆಹಲಿ ಮೂಲದ ಎನ್‌ಜಿಒ ಟಾಕ್ಸಿಕ್ಸ್ ಲಿಂಕ್ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ, ಬಹುಪಾಲು ಜನಸಂಖ್ಯೆಯು ಬಳಸುವ ಪ್ರಮುಖ ಬ್ರಾಂಡ್‌ಗಳ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಥಾಲೇಟ್‌ಗಳು (ಪ್ಲಾಸ್ಟಿಕ್‌ನ ಬಾಳಿಕೆಗಾಗಿ ಬಳಸಲಾಗುತ್ತದೆ) ಮತ್ತು ಬಾಷ್ಪಶೀಲ ಸಾವಯವ ಸಂಯುಕ್ತಗಳು (ವಿಒಸಿಗಳು) ಹೆಚ್ಚಿನ ಪ್ರಮಾಣದಲ್ಲಿವೆ ಎಂಬುದನ್ನು ಪತ್ತೆಮಾಡಲಾಗಿದೆ. ಇವುಗಳು ಅವುಗಳನ್ನು ಧರಿಸುವವರ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ತಿಳಿಸಿದೆ. ಈ ಅಧ್ಯಯನಕ್ಕಾಗಿ ಎನ್‌ಜಿಒ ಆರು ಅಜೈವಿಕ ಮತ್ತು ನಾಲ್ಕು ಸಾವಯವ ಸ್ಯಾನಿಟರಿ ಪ್ಯಾಡ್ ತಯಾರಕರಿಂದ ಮಾದರಿಗಳನ್ನು ಬಳಸಿಕೊಂಡಿದೆ.
ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಸಮಸ್ಯೆ ಸುಮಾರು 15 ವರ್ಷಗಳಿಂದಲೂ ಇದೆ. ಅವು ದದ್ದುಗಳು ಮತ್ತು ತುರಿಕೆಗಳಿಂದ ಹಿಡಿದು ಎಂಡೋಕ್ರೈನ್ ಸಮಸ್ಯೆಗಳು ಮತ್ತು ನ್ಯಾಪ್‌ಕಿನ್‌ಗಳಲ್ಲಿ ಬಳಸುವ ಸುಗಂಧ ದ್ರವ್ಯಗಳಿಂದ ಅಲರ್ಜಿಗಳಿಗೆ ಕಾರಣವಾಗುತ್ತವೆ. 30 ರಿಂದ 40 ವರ್ಷಗಳ ಬಳಕೆಯ ನಂತರ ಗರ್ಭಕೋಶದ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇದೆ ಎಂದು ನಾನು ನಂಬುತ್ತೇನೆ ಎಂದು ಸ್ತ್ರೀರೋಗತಜ್ಞೆ ಡಾ. ಮೀನಾಕ್ಷಿ ಭರತ್ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಸದ್ಯದ ಮಾನದಂಡಗಳು ಸಾಕಷ್ಟಿಲ್ಲದಿರುವುದರಿಂದ ನೈರ್ಮಲ್ಯ ಉತ್ಪನ್ನಗಳಲ್ಲಿ ಥಾಲೇಟ್‌ಗಳು ಮತ್ತು ವಿಒಸಿಗಳಂತಹ ರಾಸಾಯನಿಕಗಳ ಬಳಕೆಗೆ ಮಾನದಂಡಗಳನ್ನು ರೂಪಿಸುವ ಅಗತ್ಯವಿದೆ ಎಂದು ಸಂಶೋಧಕರು ವರದಿಯಲ್ಲಿ ಹೇಳಿದ್ದಾರೆ.
'ಮಾರುಕಟ್ಟೆಯಲ್ಲಿ ಲಭ್ಯವಿರುವ ಮುಟ್ಟಿನ ಉತ್ಪನ್ನಗಳನ್ನು ಬಳಸಲು ಆಯ್ಕೆ ಮಾಡುವ ಜನರು ಸುರಕ್ಷಿತ ಉತ್ಪನ್ನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಮತ್ತು ಅವರು ಯಾವ ಉತ್ಪನ್ನವನ್ನು ಬಳಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ಥಾಲೇಟ್‌ಗಳು ಮತ್ತು ವಿಒಸಿಗಳಂತಹ ಹಾನಿಕಾರಕ ರಾಸಾಯನಿಕಗಳ ಬಳಕೆಯಲ್ಲಿ ಪರ್ಯಾಯ ಅಥವಾ ಕಡಿತವನ್ನು ಉತ್ತೇಜಿಸಲು ನಿಯಂತ್ರಣ ಮತ್ತು ಯೋಜನೆಗಳು ಇರಬೇಕು' ಎಂದು ವರದಿ ಹೇಳಿದೆ.
ಸದ್ಯ ದೇಶದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸರ್ಕಾರದ ಯೋಜನೆಗಳ ಭಾಗವಾಗಿ ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಬಟ್ಟೆಯ ನ್ಯಾಪ್‌ಕಿನ್‌ಗಳನ್ನು ಬಳಸುವತ್ತ ಪ್ರಚೋದನೆ ಇದೆ ಎಂದು ಡಾ. ಭರತ್ ಹೇಳಿದರು.
ಶಾಲೆಗಳಲ್ಲಿ ಬಟ್ಟೆ ನ್ಯಾಪ್‌ಕಿನ್‌ಗಳನ್ನು ಸೇರಿಸುವ ಯೋಜನೆ ಇದೆ ಎಂದು ರಂದೀಪ್ ಹೇಳಿರುವುದರಿಂದ ಇದು ನಿಜವೆಂದು ತೋರುತ್ತದೆ. ನಾವು ಖಂಡಿತವಾಗಿಯೂ ಬಟ್ಟೆ ನ್ಯಾಪ್‌ಕಿನ್‌ಗಳನ್ನು ಪ್ರಾಯೋಗಿಕ ಬಳಕೆಗೆ ನೀಡಬಹುದು. ಆದಾಗ್ಯೂ, ಇದು ಮಾರುಕಟ್ಟೆಯ ಒಳಹರಿವು ಮತ್ತು ನ್ಯಾಪ್‌ಕಿನ್‌ಗಳನ್ನು ಬಳಸುವಾಗ ಮಕ್ಕಳು ಎಷ್ಟು ಕಂಫರ್ಟ್ ಆಗಿರುತ್ತಾರೆ ಎಂಬುದನ್ನು ಆಧರಿಸಿರುತ್ತದೆ' ಎಂದು ಅವರು ಹೇಳಿದರು.