ವೈಜ್ಞಾನಿಕ ರೀತಿಯಲ್ಲಿ ಹಾವುಗಳ ರಕ್ಷಿಸಲು ಮಾರ್ಗಸೂಚಿ ಬಿಡುಗಡೆಗೊಳಿಸಿದ ಸರ್ಕಾರ!
ಹೆಚ್ಚುತ್ತಿರುವ ಮಾನವ-ಹಾವು ಸಂಘರ್ಷದ ಘಟನೆಗಳನ್ನು ನಿಭಾಯಿಸಲು ಮತ್ತು ನಿಗದಿತ ವೈಜ್ಞಾನಿಕ ರೀತಿಯಲ್ಲಿ ಹಾವುಗಳನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು, ಕರ್ನಾಟಕ ಅರಣ್ಯ ಇಲಾಖೆಯು ಹಾವು ರಕ್ಷಕರಿಗಾಗಿ ಇದೇ ಮೊದಲ ಬಾರಿಗೆ ಕಾರ್ಯಾಚರಣಾ ಕೈಪಿಡಿಯೊಂದನ್ನು ಬಿಡುಗಡೆಗೊಳಿಸಿದೆ.
Published: 29th November 2022 09:24 AM | Last Updated: 29th November 2022 11:57 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಹೆಚ್ಚುತ್ತಿರುವ ಮಾನವ-ಹಾವು ಸಂಘರ್ಷದ ಘಟನೆಗಳನ್ನು ನಿಭಾಯಿಸಲು ಮತ್ತು ನಿಗದಿತ ವೈಜ್ಞಾನಿಕ ರೀತಿಯಲ್ಲಿ ಹಾವುಗಳನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು, ಕರ್ನಾಟಕ ಅರಣ್ಯ ಇಲಾಖೆಯು ಹಾವು ರಕ್ಷಕರಿಗಾಗಿ ಇದೇ ಮೊದಲ ಬಾರಿಗೆ ಕಾರ್ಯಾಚರಣಾ ಕೈಪಿಡಿಯೊಂದನ್ನು ಬಿಡುಗಡೆಗೊಳಿಸಿದೆ.
ಕೇರಳ, ಗುಜರಾತ್ ಮತ್ತು ಮಹಾರಾಷ್ಟ್ರಗಳು ಮಾತ್ರ ಈ ವರೆಗೂ ತಮ್ಮದೇ ಆದ ಮಾರ್ಗಸೂಚಿಗಳನ್ನು ಹೊಂದಿತ್ತು. ಇದೀಗ ರಾಜ್ಯ ಸರ್ಕಾರ ಕೂಡ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
'ಪರಿಣಾಮಕಾರಿ ಮಾನವ-ಹಾವು ಸಂಘರ್ಷ ನಿರ್ವಹಣೆ ಮತ್ತು ತಗ್ಗಿಸುವಿಕೆ-ಪ್ರಮಾಣೀಕೃತ ಹಾವು ರಕ್ಷಕರ ಕಾರ್ಯಾಚರಣೆಯ ಕೈಪಿಡಿ' ಅನ್ನು ಹೆಸರಾಂತ ಹರ್ಪಿಟಾಲಜಿಸ್ಟ್ ರೊಮುಲಸ್ ವಿಟೇಕರ್, ಹರ್ಪಿಟಾಲಜಿಸ್ಟ್ ಮತ್ತು ದಿ ಲಿಯಾನಾ ಟ್ರಸ್ಟ್ ಸಂಸ್ಥಾಪಕ-ಟ್ರಸ್ಟಿ ಗೆರಾರ್ಡ್ ಮಾರ್ಟಿನ್ ಮತ್ತು ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್/ಇಂಡಿಯಾ ಹಿರಿಯ ವ್ಯವಸ್ಥಾಪಕ ಸುಮಂತ್ ಬಿಂದು ರಚಿಸಿದ್ದಾರೆ.
ಇದನ್ನೂ ಓದಿ: ಬಡ್ತಿ, ವರ್ಗಾವಣೆ ಕಡತಗಳ ಕಳುಹಿಸದಿರಿ: ಅರಣ್ಯ ಇಲಾಖೆಗೆ ಮುಖ್ಯಮಂತ್ರಿಗಳ ಕಚೇರಿ ಸೂಚನೆ
100 ಕ್ಕೂ ಹೆಚ್ಚು ಉರಗ ರಕ್ಷಕರು ಕೆಲಸದಲ್ಲಿದ್ದರೂ. ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಭಾಗಗಳಲ್ಲಿ ಯಾವುದೇ ಹಾವುಗಳ ರಕ್ಷಕರಿಲ್ಲ. ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಐವರು ಪ್ರಮಾಣೀಕೃತ ಹಾವು ರಕ್ಷಕರಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಂದು ಮಾಧವ್ ಮಾತನಾಡಿ, ಅನೇಕ ಹಾವಿನ ರಕ್ಷಣೆಗಳು ನಡೆಯುತ್ತಿದ್ದು, ರಕ್ಷಕರು ಹಾವು ಕಡಿತಕ್ಕೆ ಒಳಗಾದ ನಿದರ್ಶನಗಳಿರುವುದು ನಮ್ಮ ಗಮನಕ್ಕೆ ಬಂದಿದೆ. ಅಲ್ಲದೆ ಸಿಕ್ಕಿಬಿದ್ದ ಹಾವುಗಳನ್ನು ಎಲ್ಲಿ ಮತ್ತು ಹೇಗೆ ಬಿಡಬೇಕು ಎಂಬ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಇದೀಗ ಬಿಡುಗಡೆಗೊಂಡಿರುವ "ಮಾರ್ಗಸೂಚಿಗಳು ಇದಕ್ಕೆ ಸಹಾಯ ಮಾಡುತ್ತವೆ. ರಕ್ಷಕರಿಗೆ ಅರಣ್ಯ ಇಲಾಖೆಯಿಂದ ತರಬೇತಿ ನೀಡಿ ಪ್ರಮಾಣೀಕರಿಸಲಾಗುವುದು. ಪ್ರಮಾಣೀಕೃತ ರಕ್ಷಕರ ಹೆಸರು ಮತ್ತು ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಹುಡುಕಲು ನಾಗರಿಕರಿಗೆ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು, ”ಎಂದು ಹೇಳಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿಜಯಕುಮಾರ್ ಗೋಗಿ ಮಾತನಾಡಿ, ಹಾವುಗಳ ರಕ್ಷಕರನ್ನು ಗುರುತಿಸುವುದು, ಮೌಲ್ಯೀಕರಿಸುವುದು ಮತ್ತು ಪ್ರಮಾಣೀಕರಿಸುವುದನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.