ಆಟೋ ರೀಕ್ಷಾಗಳ ದರ ನಿಗದಿ: ಓಲಾ, ಉಬರ್ ಕಂಪನಿಗಳೊಂದಿಗೆ ಸಭೆ ನಡೆಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಆ್ಯಪ್ ಆಧಾರಿತ ಆಟೋ ರಿಕ್ಷಾಗಳ ಸೇವೆ ದರ ನಿಗದಿಯಲ್ಲಿ ಒಮ್ಮತ ಮೂಡಿಸುವ ನಿಟ್ಟಿನಲ್ಲಿ ಟ್ಯಾಕ್ಸಿ ಕಂಪನಿಗಳ ಜೊತೆಗೆ ರಾಜ್ಯ ಸರ್ಕಾರ ನಡೆಸುವಂತೆ ಹೈಕೋರ್ಟ್ ಗುರುವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆ್ಯಪ್ ಆಧಾರಿತ ಆಟೋ ರಿಕ್ಷಾಗಳ ಸೇವೆ ದರ ನಿಗದಿಯಲ್ಲಿ ಒಮ್ಮತ ಮೂಡಿಸುವ ನಿಟ್ಟಿನಲ್ಲಿ ಟ್ಯಾಕ್ಸಿ ಕಂಪನಿಗಳ ಜೊತೆಗೆ ರಾಜ್ಯ ಸರ್ಕಾರ ನಡೆಸುವಂತೆ ಹೈಕೋರ್ಟ್ ಗುರುವಾರ ಹೇಳಿದೆ.

ಈ ವಿಚಾರದ ಬಗ್ಗೆ ಟ್ಯಾಕ್ಸಿ ಕಂಪನಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲು ಅಡ್ವೊಕೇಟ್ ಜನರಲ್ ಒಪ್ಪಿದ ನಂತರ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಈ ನಿರ್ದೇಶನ ನೀಡಿದೆ. ಓಲಾ ಮತ್ತು ಉಬರ್ ಆ್ಯಪ್ ಮೂಲಕ ಸೇವೆ ಒದಗಿಸುವ ಕುರಿತು  ಎಎನ್ ಐ ಟೆಕ್ನಾಲಜೀಸ್ ಪ್ರವೈಟ್ ಲಿಮಿಟೆಡ್ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಈ ಮಧ್ಯೆ ತಮ್ಮ ಆ್ಯಪ್ ಗಳ ಮೂಲಕ ಆಟೋ ರೀಕ್ಷಾ ಸೇವೆ ನೀಡಲ್ಲ ಎಂದು ಸಭೆಯಲ್ಲಿ ಓಲಾ ಮತ್ತು ಉಬರ್ ಕಂಪನಿಗಳು ಒಪ್ಪಿಕೊಂಡಿದ್ದಾರೆ ಎಂದು ಅಡ್ವೊಕೇಟ್ ಜನರಲ್  ಪ್ರಭುಲಿಂಗ ಕೆ ನವಾಡ್ಗಿ ವಾದಿಸಿದರು. ಆದರೆ. ಅರ್ಜಿದಾರರ ಪ್ರತಿನಿಧಿಗಳು ಸಭೆಯಲ್ಲಿ ಸಹಿ ಹಾಕಿಲ್ಲ ಎಂದು ಅರ್ಜಿದಾರರ ಪರ ವಕೀಲರರು ಹೇಳಿದರು. ಕಾರುಗಳಿಗೆ ಮಾತ್ರ ಅವಕಾಶ ನೀಡಿ ಆ್ಯಪ್ ಆಧಾರಿತ ಆಟೋ ರೀಕ್ಷಾ ಸೇವೆಯನ್ನು ನಿಲ್ಲಿಸುವಂತೆ ಸಾರಿಗೆ ಇಲಾಖೆ ಹೊರಡಿಸಿರುವ ಆದೇಶವನ್ನು ಉಭಯ ಕಂಪನಿಗಳು ಪ್ರಶ್ನಿಸಿದ್ದಾರೆ. 

ಓಲಾ ಆಟೋ ರೀಕ್ಷಾ ಸೇವೆಗಳಿಗೆ 19 ರೂಪಾಯಿಯನ್ನು ಸರ್ವೀಸ್ ಶುಲ್ಕವನ್ನು ವಿಧಿಸುತ್ತಿದೆ. ಅದನ್ನು ಆಟೋ ರೀಕ್ಷಾ ಚಾಲಕರಿಗೆ ನೀಡಲಾಗುತ್ತದೆ. ಆದರೆ, ಕಾರಿಗೆ ವಿಧಿಸುವ ಸರ್ವೀಸ್ ಶುಲ್ಕ ಗ್ರಾಹಕರು ಬಯಸುವ ಕಾರನ್ನು ಆಧಾರಿಸಿರುತ್ತೆ ಎಂದು ಓಲಾ ಪರ ಹಿರಿಯ ವಕೀಲರು ವಾದಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com