
ಬೆಂಗಳೂರಿಗೆ ಬಂದಿಳಿದ ವಿಶ್ವದ ಅತೀ ದೊಡ್ಡ ವಾಣಿಜ್ಯ ವಿಮಾನ
ಬೆಂಗಳೂರು: ಇದೇ ಮೊದಲ ಬಾರಿಗೆ ವಿಶ್ವದ ಅತಿ ದೊಡ್ಡ ವಾಣಿಜ್ಯ ವಿಮಾನ ಸೂಪರ್ ಜಂಬೋ ಏರ್ ಬಸ್ ಶುಕ್ರವಾರ ಬೆಂಗಳೂರಿಗೆ ಬಂದಿಳಿದಿದೆ.
ಎಮಿರೇಟ್ಸ್ ಸಂಸ್ಥೆಯ EK 562 ಸಂಖ್ಯೆ ಸೂಪರ್ ಜಂಬೋ ಏರ್ ಬಸ್ ಶುಕ್ರವಾರ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
Kempegowda International Airport, Bengaluru, awaits the historic moment for Airbus A380 to touch down. Emirates flgt EK 562 from Dubai is expected to arr @ 3.34 pm, a few mins b4 schedule #Avgeeks @XpressBengaluru @NewIndianXpress @KannadaPrabha @BLRAirport @emirates @DGCAIndia pic.twitter.com/7MhHQbapkA
— S. Lalitha (@Lolita_TNIE) October 14, 2022
ಎಮಿರೈಟ್ಸ್ ಏರ್‌ಲೈನ್ಸ್‌ನ ಈ ಬೃಹತ್ ವಿಮಾನವೂ ಡಬಲ್ ಡೆಕ್ಕರ್ ವಿಮಾನವಾಗಿದ್ದು, ಬೆಳಿಗ್ಗೆ 10 ಗಂಟೆಗೆ ದುಬೈನಿಂದ ಹೊರಟು, ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಬಂದು ತಲುಪಿದೆ. ಪುನಃ ಮತ್ತೆ ವಿಮಾನವೂ ಬೆಂಗಳೂರಿನಿಂದ ಸಂಜೆ 6.40ಕ್ಕೆ ಹೊರಟು ರಾತ್ರಿ 9ಕ್ಕೆ ದುಬೈ ತಲುಪಲಿದೆ.
The world's largest passenger flight has a touch down @BLRAirport for the first time. Emirates flgt EK 562 arrrived rom Dubai on the South Runway #Avgeeks @XpressBengaluru @NewIndianXpress @KannadaPrabha @BLRAirport @emirates @DGCAIndia pic.twitter.com/7ywttJ5ptb
— S. Lalitha (@Lolita_TNIE) October 14, 2022
ಈ ಹಿಂದೆಯೇ ಎಮಿರೇಟ್ಸ್ ಏರ್‌ಲೈನ್ಸ್ ಘೋಷಿಸಿದಂತೆ, ಜಂಬೋ ಜೆಟ್‌ನ ಮೊದಲ ಹಾರಾಟ ಅಕ್ಟೋಬರ್ 30ರ ರಾತ್ರಿ ದುಬೈನಿಂದ ಟೇಕಾಫ್ ಆಗಿ ಅ.31ಕ್ಕೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಎರಡು ವಾರದ ಮುನ್ನವೇ ಬೃಹತ್ ಲೋಹದ ಹಕ್ಕಿ ಬೆಂಗಳೂರು ತಲುಪಿರುವುದು ವಿಮಾನ ಪ್ರಯಾಣಿಕರಲ್ಲಿ ಸಂತಸ ತಂದಿದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ: ದೆಹಲಿಯಿಂದ ನಗರಕ್ಕೆ ಬಂತು 4,000 ಕೆಜಿ ತೂಕದ ಖಡ್ಗ!
A380 ಸರಣಿಯ ಈ ವಿಮಾನವು ಡಬಲ್ ಡೆಕ್ಕರ್ ವಿಮಾನವಾಗಿದ್ದು, 500ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ವಿಮಾನದಲ್ಲಿ ಫಸ್ಟ್ ಕ್ಲಾಸ್, ಎಕಾನಮಿ ಮತ್ತು ಬ್ಯೂಸಿನೆಸ್ ಟಿಕೆಟ್ ವ್ಯವಸ್ಥೆ ಇದೆ. ಎಕಾನಮಿ ಕ್ಲಾಸ್ ವಿಶಾಲವಾಗಿದ್ದು, ಹೆಚ್ಚುವರಿ ಲೆಗ್‌ರೂಮ್ ಹೊಂದಿದೆ. ಬ್ಯೂಸಿನೆಸ್ ಕ್ಲಾಸ್ನಲ್ಲಿ ಸೀಟ್ ವ್ಯವಸ್ಥೆ ಮಾತ್ರ ಹೊಂದಿದೆ, ಫಸ್ಟ್ ಕ್ಲಾಸ್ನಲ್ಲಿ ಖಾಸಗಿ ಸೂಟ್‌ಗಳು ಮತ್ತು ಶವರ್ ಸ್ಪಾಗಳನ್ನು ಹೊಂದಿದೆ.