ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ: ಸಂಗನಕಲ್ ಗ್ರಾಮದಿಂದ ಪಾದಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ

ಬಳ್ಳಾರಿಗೆ ಕಾಲಿಟ್ಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆ ಭಾನುವಾರ ಸಂಗನಕಲ್ ಗ್ರಾಮದಿಂದ ಮತ್ತೆ ಆರಂಭವಾಯಿತು.
ಭಾರತ್ ಜೋಡೋದಲ್ಲಿ ರಾಹುಲ್ ಗಾಂಧಿ
ಭಾರತ್ ಜೋಡೋದಲ್ಲಿ ರಾಹುಲ್ ಗಾಂಧಿ

ಬಳ್ಳಾರಿ: ಬಳ್ಳಾರಿಗೆ ಕಾಲಿಟ್ಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆ ಭಾನುವಾರ ಸಂಗನಕಲ್ ಗ್ರಾಮದಿಂದ ಮತ್ತೆ ಆರಂಭವಾಯಿತು.

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ಯಾತ್ರೆ’ ಗಣಿನಾಡು ಬಳ್ಳಾರಿ ಪ್ರವೇಶ ಮಾಡಿದ್ದು, ಶುಕ್ರವಾರ ರಾಹುಲ್‌  ಗಾಂಧಿ ಬಳ್ಳಾರಿ ಪ್ರವೇಶಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದ್ದರು. ಈ ಬಾರಿ ಕರ್ನಾಟಕದಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ತರೋ ನಿಟ್ಟಿನಲ್ಲಿ ಬಳ್ಳಾರಿಯಿಂದಲೇ ಚುನಾವಣಾ ರಣಕಹಳೆ ಮೊಳಗಿಸಲು ಕಾಂಗ್ರೆಸ್ ಮುಂದಾಗಿದೆ. ಬಳ್ಳಾರಿಯಲ್ಲಿ ನಡೆಯುವ ಸಮಾವೇಶಕ್ಕೆ ಪ್ರಿಯಾಂಕಾ ಗಾಂಧಿ ಆಗಮಿಸುವ ಸಾಧ್ಯತೆಗಳಿವೆ.

ಇನ್ನು ಇಂದಿನ ಕಾರ್ಯಕ್ರಮದಲ್ಲಿ ಬೆಳಗ್ಗೆ 11 ಗಂಟೆಗೆ ಬಳ್ಳಾರಿಯ ಮೋಕಾ ಹತ್ತಿರ ಇರುವ ಹನಿ ಫಂಕ್ಷನ್ ಹಾಲ್ ನಲ್ಲಿ ನಾಯಕರು ಬೆಳಗಿನ ವಿರಾಮ ಪಡೆಯಲಿದ್ದಾರೆ. ಬಳಿಕ ಅಲ್ಲಿಂದ ಪಾದಾಯಾತ್ರೆ ಸಾಗಿ ಕರ್ನಾಟಕ ಆಂಧ್ರ ಪ್ರದೇಶ ಗಡಿಯಲ್ಲಿ ಸಂಜೆ ವಿರಾಮ ಪಡೆಯಲಿದ್ದಾರೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚತ್ರಗುಡಿ ಹನುಮಾನ್ ದೇಗುಲದಲ್ಲಿ ನಾಯಕರು ವಿರಾಮ ಪಡೆಯಲಿದ್ದಾರೆ. 

ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಕಾಂಗ್ರೆಸ್ ಘಟಕ, 'ಬಳ್ಳಾರಿಯ ಯಶಸ್ವಿ ಸಮಾವೇಶದ ನಂತರ ಭಾರತ ಐಕ್ಯತಾ ಯಾತ್ರೆ ಹೆಚ್ಚಿನ ಹುಮ್ಮಸ್ಸಿನೊಂದಿಗೆ ನಾಳೆ ಮುಂದುವರೆಯಲಿದೆ. 1000 ಕಿಲೋಮೀಟರ್ ನಡಿಗೆ ಪೂರೈಸಿದ ನಂತರವೂ ಉತ್ಸಾಹ ಇಮ್ಮಡಿಯಾಗಿದೆ. ದಣಿವು ಮಾಯವಾಗಿದೆ. ಬನ್ನಿ ಸುಸ್ಥಿರ ಭಾರತಕ್ಕಾಗಿ ನಮ್ಮೊಂದಿಗೆ ಹೆಜ್ಜೆ ಹಾಕಿ ಎಂದು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com