ಬೆಂಗಳೂರಿನಲ್ಲಿ ರೆಕಾರ್ಡ್ ಬ್ರೇಕ್ ಮಾಡಿದ ವರುಣ: ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಅನಾಹುತ; ತಜ್ಞರ ಎಚ್ಚರಿಕೆ-ಎಚ್ಚೆತ್ತುಕೊಳ್ಳುವುದೇ ಸರ್ಕಾರ?

ಬೆಂಗಳೂರು ನಗರದಲ್ಲಿ ಪ್ರತಿದಿನ ಸುರಿಯುತ್ತಿರುವ ಮಳೆ ಎಲ್ಲಾ ವರ್ಷದ ರೆಕಾರ್ಡ್ ಅಳಿಸಿ ಹಾಕಿ, ಹೊಸ ದಾಖಲೆ ಬರೆದಿದೆ.  ವರ್ಷದಲ್ಲಿ ಇಲ್ಲಿಯ ತನಕ ನಗರದಲ್ಲಿ 170.6 ಸೆಂಟಿಮೀಟರ್ ಮಳೆಯಾಗಿದೆ.
ಶೇಷಾದ್ರಿಪುರಂ ನಲ್ಲಿ ಗೋಡೆ ಕುಸಿತ
ಶೇಷಾದ್ರಿಪುರಂ ನಲ್ಲಿ ಗೋಡೆ ಕುಸಿತ
Updated on

ಬೆಂಗಳೂರು: ಬೆಂಗಳೂರು ನಗರದಲ್ಲಿ ಪ್ರತಿದಿನ ಸುರಿಯುತ್ತಿರುವ ಮಳೆ ಎಲ್ಲಾ ವರ್ಷದ ರೆಕಾರ್ಡ್ ಅಳಿಸಿ ಹಾಕಿ, ಹೊಸ ದಾಖಲೆ ಬರೆದಿದೆ.  ವರ್ಷದಲ್ಲಿ ಇಲ್ಲಿಯ ತನಕ ನಗರದಲ್ಲಿ 170.6 ಸೆಂಟಿಮೀಟರ್ ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಅಂಕಿಅಂಶಗಳ ಪ್ರಕಾರ, ನಗರದಲ್ಲಿ ಅಕ್ಟೋಬರ್ 17, 2022 ರವರೆಗೆ 171  ಸೆ.ಮೀ. ಮಳೆ ದಾಖಲಾಗಿದೆ. ಅಕ್ಟೋಬರ್ 18 ರಂದು (ಮಂಗಳವಾರ) 174 ಸೆ.ಮೀ ಮಳೆ ಸುರಿದಿದ್ದು ಹೊಸ ದಾಖಲೆ ಸೃಷ್ಟಿಸಿದೆ, ಇದು ದಶಕದಲ್ಲೇ ಸುರಿದ ಅತಿ ಹೆಚ್ಚು ಮಳೆಯಾಗಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

1901 ರಲ್ಲಿ, ನಗರವು ಗರಿಷ್ಠ ವಾರ್ಷಿಕ ಒಟ್ಟು 94 ಸೆಂ.ಮೀ ಮಳೆಯನ್ನು ದಾಖಲಿಸಿತು. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅನಾಹುತಗಳು ಆಗಲಿವೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಮುಂದಿನ ಎರಡು ದಿನಗಳಲ್ಲಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗುವ  ಸಾಧ್ಯತೆಯಿದ್ದು ಭಾರತೀಯ ಹವಾಮಾನ ಇಲಾಖೆ  ಯೆಲ್ಲೋ ಅಲರ್ಟ್ ಘೋಷಿಸಿದೆ.

ಮುಂದಿನ ಐದು ದಿನಗಳ ಕಾಲ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ. ಮಳೆಯ ಏರಿಳಿತ ಹೊಸದೇನಲ್ಲ ಮತ್ತು ಭಾರತದಾದ್ಯಂತ ಇದು ಶೇ.30-50ರಷ್ಟು ಪ್ರಮಾಣದಲ್ಲಿದೆ. ಮಾನವನ ಹಸ್ತಕ್ಷೇಪ, ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಮಟ್ಟ ಏರಿಕೆ ಹಾಗೂ ತಾಪಮಾನ ಹೆಚ್ಚಳದಿಂದ ಮಳೆಯ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ದಿವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್‌ನ ಪ್ರತಿಷ್ಠಿತ ವಿಜ್ಞಾನಿ ಪ್ರೊ.ಜೆ.ಶ್ರೀನಿವಾಸನ್ ತಿಳಿಸಿದ್ದಾರೆ. ವಾತಾವರಣದಲ್ಲಿ ನೀರಿನ ಆವಿಯ ಪ್ರಮಾಣವು ಜಾಗತಿಕವಾಗಿ ಶೇ. 7ರಷ್ಟು ಹೆಚ್ಚಿರುವುದರಿಂದ ಜಾಗತಿಕ ಸರಾಸರಿ ಮಳೆಯೂ ಹೆಚ್ಚಾಗಿದೆ.

ವಾತಾವರಣದಲ್ಲಿ ನೀರಿನ ಆವಿಯ ಪ್ರಮಾಣ ಹೆಚ್ಚಾದಾಗಲೆಲ್ಲಾ ಮಳೆಯ ಪ್ರಮಾಣ ಹೆಚ್ಚಾಗುತ್ತದೆ, ಅದು ನಿಲ್ಲುವುದಿಲ್ಲ ಎಂದು ಅವರು ಹೇಳಿದರು. ಇದು ಸತತ ಮೂರನೇ ಎಲ್ ನಿನೊ ವರ್ಷ ಎಂದು ತಜ್ಞರು ಗಮನಸೆಳೆದಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣದಲ್ಲಿ ಪ್ರವಾಹ ಪುನರಾವರ್ತನೆಯಾಗುತ್ತಿದ್ದು ಕಳಪೆ ಹಾಗೂ ಕ್ರಮಬದ್ದವಿಲ್ಲದ ಯೋಜನೆಗೆ ಹಿಡಿದ ಕೈ ಗನ್ನಡಿಯಾಗಿದೆ. ರೈತರು ಮತ್ತು ಸ್ಥಳೀಯ ಆಡಳಿತವು ಭಾರಿ ಮಳೆಯನ್ನು ನಿರೀಕ್ಷಿಸದ ಕಾರಣ ಭೂಗತ ನೀರನ್ನು ಪಂಪ್ ಮಾಡಿ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿದೆ.

ಬೆಂಗಳೂರಿನಲ್ಲಿ, ಪ್ರವಾಹದ ಸಮಯದಲ್ಲಿ ಕೆಳಕ್ಕೆ ಪಂಪ್ ಮಾಡಿದ ನೀರನ್ನು ನಿಲ್ಲಿಸುವುದು ಸಹ ಕಳಪೆ ಯೋಜನೆಯಾಗಿದೆ. ಜಪಾನ್‌ನಲ್ಲಿ, ಪಂಪ್ ಮಾಡಿದ ನೀರನ್ನು  ಭೂಗತ ಜಲಾಶಯಗಳಲ್ಲಿ ಸಂಗ್ರಹಿಸಲಾಗುತ್ತದೆ. ಮಳೆಯ ಪ್ರಮಾಣ ಮಾತ್ರ ಹೆಚ್ಚಾಗುವುದರಿಂದ ಇಂತಹ ಯೋಜನೆ ಅಗತ್ಯವಿದೆ,'' ಎಂದು ತಜ್ಞರು ಹೇಳಿದ್ದಾರೆ.

ಬುಧವಾರ ಸಂಜೆಯವರೆಗೂ ಎಡೆಬಿಡದೆ ಸುರಿದ ಮಳೆಗೆ ಬೆಂಗಳೂರಿನ ಅಂಡರ್‌ಪಾಸ್‌ಗಳು, ರಸ್ತೆಗಳು ಮತ್ತು ಮಾರುಕಟ್ಟೆ ಸಂಕೀರ್ಣಗಳು ಜಲಾವೃತಗೊಂಡಿವೆ. ನಗರದಾದ್ಯಂತ ರಾತ್ರಿ 8:30 ರಿಂದ 10:30 ರವರೆಗೆ ನಿರಂತರ ಮಳೆ, ಸಿಡಿಲು ಮತ್ತು ಗುಡುಗು ಸಹಿತ ಮಳೆಗೆ ಶಿವಾನಂದ ವೃತ್ತ ಮತ್ತು ರೈಲ್ವೆ ಕೆಳಸೇತುವೆ, ಸಿಬಿಐ ರಸ್ತೆ ಅಂಡರ್‌ಪಾಸ್, ಆರ್‌ಟಿ ನಗರ, ಶಾಂತಿನಗರ ಬಸ್ ನಿಲ್ದಾಣ, ವಿಲ್ಸನ್ ಗಾರ್ಡನ್, ರಸೆಲ್ ಮಾರುಕಟ್ಟೆ, ದೊಡ್ಡನೆಕ್ಕುಂದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡವು. ಮಳೆಯಿಂದಾಗಿ ಸಂಚಾರ ಕುಂಠಿತಗೊಂಡ ಪರಿಣಾಮ ಮೆಜೆಸ್ಟಿಕ್, ಮಲ್ಲೇಶ್ವರಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂಕುನುಗ್ಗಲು ಉಂಟಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com