ಭಾರೀ ಮಳೆ: ಕಾಂಪೌಂಡ್ ಕುಸಿತಕ್ಕೆ ವಾಹನಗಳು ಜಖಂ, ಪರಿಹಾರ ಭರವಸೆ ನೀಡಿದ 'ನಮ್ಮ ಮೆಟ್ರೋ'

ಭಾರೀ ಮಳೆಗೆ ಸಂಪಿಗೆ ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಕಾಂಪೌಂಡ್ ಕುಸಿದು ವಾಹನಗಳು ಜಖಂಗೊಂಡ ಹಿನ್ನೆಲೆಯಲ್ಲಿ, ಹಾನಿಗೊಳಗಾದ ವಾಹನಗಳ ಮಾಲೀಕರಿಗೆ ಪರಿಹಾರ ನೀಡುವುದಾಗಿ ನಮ್ಮ ಮೆಟ್ರೋ ಹೇಳಿದೆ.
ಕಾಂಪೌಂಡ್ ಕುಸಿತಕ್ಕೆ ವಾಹನ ಜಖಂಗೊಂಡಿರುವುದು.
ಕಾಂಪೌಂಡ್ ಕುಸಿತಕ್ಕೆ ವಾಹನ ಜಖಂಗೊಂಡಿರುವುದು.

ಬೆಂಗಳೂರು: ಭಾರೀ ಮಳೆಗೆ ಸಂಪಿಗೆ ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಕಾಂಪೌಂಡ್ ಕುಸಿದು ವಾಹನಗಳು ಜಖಂಗೊಂಡ ಹಿನ್ನೆಲೆಯಲ್ಲಿ, ಹಾನಿಗೊಳಗಾದ ವಾಹನಗಳ ಮಾಲೀಕರಿಗೆ ಪರಿಹಾರ ನೀಡುವುದಾಗಿ ನಮ್ಮ ಮೆಟ್ರೋ ಹೇಳಿದೆ. 

ವಾಹನಗಳು ಜಖಂಗೊಂಡ ಪರಿಣಾಮ ವಾಹನ ಮಾಲೀಕರು ಪರಿಹಾರ ನೀಡಿದ ನಂತರವೇ ವಾಹನಗಳ ತೆರವುಗೊಳಿಸುವುದಾಗಿ ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಮೆಟ್ರೋ ಎಂಡಿ ಅಂಜುಂ ಪರ್ವೇಜ್ ಅವರು, ವಾಹನಗಳ ಮಾಲೀಕರಿಗೆ ಪರಿಹಾರ ನೀಡುವ ಭರವಸೆ ನೀಡಿದರು. 

ಬಹಳ ಹಿಂದೆಯೇ ಗೋಡೆಯನ್ನು ನಿರ್ಮಾಣ ಮಾಡಲಾಗಿತ್ತು. ಭಾರೀ ಮಳೆಯಿಂದಾಗಿ ಗೋಡೆ ಕುಸಿದು ಬಿದ್ದಿದೆ. ಹಾನಿಗೊಳಗಾಗಿರುವ ಎಲ್ಲಾ ವಾಹನಗಳಿಗೂ ಪರಿಹಾನ ನೀಡಲಾಗುತ್ತದೆ ಎಂದು ಹೇಳಿದರು. 

ಅಲ್ಲದೆ, ಒಂದು ತಿಂಗಳಲ್ಲಿ ಕಾಂಕ್ರಿಟ್ ನಿಂದ ಕಾಂಪೌಂಡ್ ನಿರ್ಮಾಣ ಮಾಡುವ ಭರವಸೆಯನ್ನು ನೀಡಿದರು. ಅತಿಯಾದ ಮಳೆ ಮತ್ತು ಭೂಮಿ ಸಡಿಲಿಕೆಯಿಂದ ಕಾಂಪೌಂಡ್ ಕುಸಿದಿದೆ. ಒಂದು ತಿಂಗಳಿನಲ್ಲಿ ಕಾಂಪೌಂಡ್ ಮರು ನಿರ್ಮಾಣ ಮಾಡಲಾಗುತ್ತದೆ ಎಂದು ಪರ್ವೇಜ್ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com