ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಬಳಿ ತಮ್ಮ ಅಳಲು ತೋಡಿಕೊಂಡ ರೈತರು

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಶುಕ್ರವಾರ ಆಂಧ್ರ ಪ್ರದೇಶದ ಮಂತ್ರಾಲಯದಿಂದ ರಾಯಚೂರು ಜಿಲ್ಲೆಯ ಗಿಲ್ಲೆಸುಗೂರು ಗ್ರಾಮ ತಲುಪಿದ್ದು, ಈ ವೇಳೆ ರಾಹುಲ್ ಅವರು ರಾಯಚೂರು ಮತ್ತು ಉತ್ತರ ಕರ್ನಾಟಕದ ಇತರೆ ಭಾಗಗಳ ರೈತ ಗುಂಪುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ರಾಯಚೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಶುಕ್ರವಾರ ಆಂಧ್ರ ಪ್ರದೇಶದ ಮಂತ್ರಾಲಯದಿಂದ ರಾಯಚೂರು ಜಿಲ್ಲೆಯ ಗಿಲ್ಲೆಸುಗೂರು ಗ್ರಾಮ ತಲುಪಿದ್ದು, ಈ ವೇಳೆ ರಾಹುಲ್ ಅವರು ರಾಯಚೂರು ಮತ್ತು ಉತ್ತರ ಕರ್ನಾಟಕದ ಇತರೆ ಭಾಗಗಳ ರೈತ ಗುಂಪುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 
    
ರೈತ ಮುಖಂಡ ಚಾಮರಾಜ್ ಮಾಲಿಪಾಟೀಲ್ ಮಾತನಾಡಿ, ಕೃಷಿ ಉತ್ಪನ್ನವನ್ನು ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ಮಾರಾಟ ಮಾಡದಂತೆ ಕಾನೂನು ತರಬೇಕು ಎಂದು ಒತ್ತಾಯಿಸಿದರು.

ಸರ್ಕಾರವು ಸಮಯಕ್ಕೆ ಸರಿಯಾಗಿ ಖರೀದಿ ಮಾಡುತ್ತಿಲ್ಲ. ಹೀಗಾಗಿ ರೈತರು ತಮ್ಮ ಉತ್ಪನ್ನಗಳನ್ನು ತಮ್ಮ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮತ್ತು ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಅನಿವಾರ್ಯವಾಗುತ್ತಿದೆ ಎಂದು ಹೇಳಿದರು. 

ತುಂಗಭದ್ರಾ ಅಣೆಕಟ್ಟಿನಲ್ಲಿ ಅದರ ಸಾಮರ್ಥ್ಯಕ್ಕಿಂತ ಶೇ.33 ರಷ್ಟು ಹೂಳು ತುಂಬಿದ್ದು, ಅಣೆಕಟ್ಟಿನ ಹೂಳು ತೆಗೆಯುವ ಮಾರ್ಗವನ್ನು ಸರ್ಕಾರ ಅನ್ವೇಷಿಸಬೇಕು ಎಂದರು.

ಮತ್ತೋರ್ವ ರೈತ ಮುಖಂಡ ಪ್ರಭಾಕರ ಪಾಟೀಲ ಮಾತನಾಡಿ, ಬೇಸಾಯಕ್ಕೆ ಸಾಕಷ್ಟು ವೆಚ್ಚವಾಗುತ್ತಿದ್ದು, ಇದು ಕಷ್ಟಕರವಾಗುತ್ತಿದೆ. ಬೆಳೆ ನಾಶವಾದಾಗ ಖಾಸಗಿ ವಿಮಾ ಕಂಪನಿಗಳು ಪಾವತಿಗಳನ್ನು ಕಡಿಮೆ ಮಾಡಲು ಅಥವಾ ವಿಳಂಬಗೊಳಿಸಲು ಸರ್ಕಾರಿ ಅಧಿಕಾರಿಗಳೊಂದಿಗೆ ಸಹಕರಿಸುತ್ತಿವೆ ಎಂದು ಆರೋಪಿಸಿದರು.

ಇದೇ ವೇಳೆ ಕಳೆದ 10 ವರ್ಷಗಳಲ್ಲಿ ನಿಮ್ಮ ನಿವ್ವಳ ಲಾಭ ಎಷ್ಟು ಎಂಬ ರಾಹುಲ್ ಗಾಂಧಿ ಪ್ರಶ್ನೆಗೆ ಉತ್ತರಿಸಿದ ರೈತರು, ಅಷ್ಟೇನೂ ಲಾಭದಾಯಕವಾಗಿಲ್ಲ ಎಂದರು. 

ಕಾಂಗ್ರೆಸ್ ತನ್ನ 2019 ರ ಚುನಾವಣಾ ಪ್ರಣಾಳಿಕೆಯಲ್ಲಿ ನ್ಯಾಯ್ ಎಂಬ ಯೋಜನೆಯನ್ನು ಪ್ರಸ್ತಾಪಿಸಿದೆ, ಅದು ಪ್ರತಿ ಬಡ ಕುಟುಂಬಕ್ಕೆ ವಾರ್ಷಿಕ 72,000 ರೂ. ರೈತರಿಗೆ ವಿಸ್ತರಿಸಿದರೆ, ಅವರಿಗೆ ಬೆಂಬಲ ವ್ಯವಸ್ಥೆಯನ್ನು ರಚಿಸಬಹುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com