ಧಾರವಾಡ: ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಸಲಿಂಗಕಾಮಿಯನ್ನು ಬಂಧಿಸಿದ ಪೊಲೀಸರು
ಧಾರವಾಡ ನಗರದಲ್ಲಿ ಯುವಕನೊಬ್ಬನ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಸಲಿಂಗಕಾಮಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Published: 22nd October 2022 11:55 AM | Last Updated: 22nd October 2022 12:00 PM | A+A A-

ಪ್ರಾತಿನಿಧಿಕ ಚಿತ್ರ
ಧಾರವಾಡ: ಧಾರವಾಡ ನಗರದಲ್ಲಿ ಯುವಕನೊಬ್ಬನ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಸಲಿಂಗಕಾಮಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಪವನ್ ಬ್ಯಾಲಿ ಎಂದು ಗುರುತಿಸಲಾಗಿದೆ. ಮೃತ ಯಾಸಿನ್ ರೋಟಿವಾಲೆ ಪೋಷಕರ ದೂರಿನ ಮೇರೆಗೆ ಪವನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 12 ರಂದು ಅತ್ತಿಕೊಳ್ಳ ನಿವಾಸಿ ಯಾಸಿನ್ ನಾಪತ್ತೆಯಾಗಿದ್ದು, ನಂತರ ಕೆಲಗೇರಿ ಕೆರೆಯಲ್ಲಿ ಶವ ಪತ್ತೆಯಾಗಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಯಾಸಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪವನ್ ಮತ್ತು ಯಾಸಿನ್ ಎಂಟು ತಿಂಗಳ ಕಾಲ ಸ್ನೇಹಿತರಾಗಿದ್ದರು. ಸಲಿಂಗಕಾಮಿಯಾಗಿದ್ದ ಪವನ್, ಯಾಸಿನ್‌ನನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ ಮತ್ತು ಜನರ ಮುಂದೆ ಆತನನ್ನು ಮದುವೆಯಾಗಿರುವುದಾಗಿ ಘೋಷಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಪವನ್ ಜತೆ ಜಗಳವಾಡಿಕೊಂಡಿರುವುದಾಗಿ ಮೃತ ಯುವಕ ಯಾಸಿನ್ ತನ್ನ ತಂದೆಗೆ ತಿಳಿಸಿದ್ದಾನೆ. ಯಾಸಿನ್ ತಂದೆ ರಫೀಕ್ ಕೂಡ ಪವನ್ ತನ್ನ ಮಗನಿಗೆ ಕಿರುಕುಳ ನೀಡಿ ಕೊಲೆಗೈದಿದ್ದಾನೆ ಎಂದು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬರಬೇಕಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.