ಮಳೆ ಸಮಯದಲ್ಲಿ ಬೆಂಗಳೂರಿನಲ್ಲಿ ರಸ್ತೆ ಪ್ರಯಾಣದ ಸಮಯ ಶೇ.62 ರಷ್ಟು ಹೆಚ್ಚಾಗುತ್ತದೆ: ವರದಿ

ಬೆಂಗಳೂರು ನಗರ ಕುಖ್ಯಾತ ಟ್ರಾಫಿಕ್‌ಗೆ ಹೆಸರುವಾಸಿಯಾಗಿದ್ದರೆ, ಇತ್ತೀಚಿಗೆ ಸುರಿಯುತ್ತಿರುವ ಭಾರಿ ಮಳೆಯು ಅದನ್ನು ಇನ್ನಷ್ಟು ಹದಗೆಡಿಸಿದೆ. ವರದಿ ಪ್ರಕಾರ, ಮಳೆಯಿಂದಾಗಿ ನಗರದ ಪ್ರಯಾಣದ ಸಮಯವು ಶೇ 62 ರಷ್ಟು ಹೆಚ್ಚಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರು ನಗರ ಕುಖ್ಯಾತ ಟ್ರಾಫಿಕ್‌ಗೆ ಹೆಸರುವಾಸಿಯಾಗಿದ್ದರೆ, ಇತ್ತೀಚಿಗೆ ಸುರಿಯುತ್ತಿರುವ ಭಾರಿ ಮಳೆಯು ಅದನ್ನು ಇನ್ನಷ್ಟು ಹದಗೆಡಿಸಿದೆ. ಉದ್ಯೋಗಿಗಳ ಪ್ರಯಾಣದ ಮೇಲೆ ಕೆಲಸ ಮಾಡುವ ಸಾರಿಗೆ ಸ್ಟಾರ್ಟ್ಅಪ್ MoveInSyncನ ವರದಿ ಪ್ರಕಾರ, ಮಳೆಯಿಂದಾಗಿ ನಗರದ ಪ್ರಯಾಣದ ಸಮಯವು ಶೇ 62 ರಷ್ಟು ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಮತ್ತು ಟ್ರಾಫಿಕ್ ಜಾಮ್ ಸಮಸ್ಯೆಗಳು ನಗರದಾದ್ಯಂತ ಸಾಮಾನ್ಯವಾಗಿದೆ.

ವರದಿ ಪ್ರಕಾರ, ಮಳೆಯಿಲ್ಲದ ದಿನಗಳಿಗೆ ಹೋಲಿಸಿದರೆ ಮಳೆಗಾಲದ ದಿನಗಳಲ್ಲಿ ಬೆಂಗಳೂರಿಗರ ಪ್ರಯಾಣದ ಸಮಯವು ಸರಾಸರಿ ಶೇ 30 ರಷ್ಟು ಹೆಚ್ಚಾಗಿದೆ. ಕಳೆದ ವಾರದಲ್ಲಿ ಮಾತ್ರ ಶೇ 11 ರಷ್ಟು ಹೆಚ್ಚಳವಾಗಿದೆ. ಫೆಬ್ರುವರಿಯಲ್ಲಿ ಸುಮಾರು 42 ನಿಮಿಷಗಳಿಂದ ಸರಾಸರಿ 60 ನಿಮಿಷಗಳವರೆಗೆ ಪ್ರಯಾಣಿಕರ ಸಮಯವು ಕ್ರಮೇಣ ಹೆಚ್ಚಳವಾಗಿದ್ದು, ಆಗಸ್ಟ್‌ನಲ್ಲಿ ಪ್ರಯಾಣಿಕರ ಸಮಯವು 72 ನಿಮಿಷಗಳಿಗೆ ಏರಿಕೆಯಾಗಿದೆ.

'ಈ ಸಂಖ್ಯೆಗಳು ಬೆಂಗಳೂರು ನಗರಕ್ಕೆ ಅಶುಭ ಸಂಕೇತಗಳಾಗಿದ್ದರೂ, ನಗರವು ಈಗ ಪೂರ್ವ ಕೋವಿಡ್ ಸ್ಥಿತಿಗೆ ಮರಳುತ್ತಿದೆ ಎಂಬ ಅಂಶವನ್ನೂ ಇದು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಇದು ನಗರದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮಾಡಬೇಕಾದ ಕೆಲಸವನ್ನು ಸಹ ತೋರಿಸುತ್ತದೆ' ಎಂದು ಸ್ಟಾರ್ಟಪ್‌ನ ಸಿಇಒ ದೀಪೇಶ್ ಅಗರ್ವಾಲ್ ಹೇಳಿದ್ದಾರೆ.

ನಿರ್ದಿಷ್ಟವಾಗಿ ಬೆಳ್ಳಂದೂರು ಭಾಗದಲ್ಲಿ ಶೇ 62ರಷ್ಟು ಹೆಚ್ಚಿನ ಮಳೆಯಿಂದಾಗಿ ತೊಂದರೆಗೀಡಾಗಿದ್ದು, ಪ್ರಯಾಣಿಕರ ಪ್ರಯಾಣ ಸಮಯವು 86 ನಿಮಿಷಗಳಿಗೆ ಏರಿಕೆಯಾಗಿದೆ. ಈ ಮೂಲಕ ಶೇ 48ರಷ್ಟು ಏರಿಕೆ ಕಾಣುವ ಮೂಲಕ ವೈಟ್‌ಫೀಲ್ಡ್ ಎರಡನೇ ಸ್ಥಾನದಲ್ಲಿದೆ.

ಈಮಧ್ಯೆ, ಇಂದಿರಾನಗರ, ಎಲೆಕ್ಟ್ರಾನಿಕ್ಸ್ ಸಿಟಿ, ಎಂ.ಜಿ ರಸ್ತೆ ಮತ್ತು ಬಾಗಮನೆಯಂತಹ ಪ್ರದೇಶಗಳು ಮಳೆಯಿಂದಾಗಿ ಹೊಡೆತಕ್ಕೆ ಸಿಲುಕಿಲ್ಲ. ಇಲ್ಲಿ ಸರಾಸರಿ ಶೇ 7 ರಿಂದ 11ರಷ್ಟಿದೆ.

ಕೆಲಸಕ್ಕೆ ಪ್ರಯಾಣಿಸಲು ಉತ್ತಮ ದಿನಗಳು ಯಾವುವು ಎಂಬುದನ್ನು ವರದಿ ಅಧ್ಯಯನ ಮಾಡಿದೆ. ಮಳೆಯಿಂದಾಗಿ ಸೋಮವಾರ ಕನಿಷ್ಠ ಪರಿಣಾಮ ಬೀರಿದ್ದರೆ, ಮಂಗಳವಾರ ಮತ್ತು ಬುಧವಾರ ಸರಾಸರಿ ಪ್ರಯಾಣದ ಸಮಯಕ್ಕೆ ಅಧಿಕವಾಗಿ 20 ನಿಮಿಷ ಹೆಚ್ಚಾಗುತ್ತದೆ. ಆದಾಗ್ಯೂ, ಮಳೆಯ ಕೊರತೆಯಿಂದಾಗಿ ಗುರುವಾರ ಮತ್ತು ಶುಕ್ರವಾರದಂದು ಯಾವುದೇ ತೊಂದರೆ ಉಂಟಾಗಿಲ್ಲ ಎಂಬುದನ್ನು ಗಮನಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com