ಬೆಂಗಳೂರು: ಗಂಡನನ್ನ ಕೊಲೆ ಮಾಡಿ ಸಹಜ ಸಾವು ಎಂದು ಕಥೆ ಕಟ್ಟಿದ್ದ ಪತ್ನಿ ಬಂಧನ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಪೂರಿಗಾಲಿಯ ಮಹೇಶ್, ಬೆಂಗಳೂರಿನ ಕೊಕೊನಟ್ ಗಾರ್ಡನ್‌ ನಲ್ಲಿ ವಾಸವಿದ್ದರು. ಅವರನ್ನು ಸೆ. 1ರಂದು ಕೊಲೆ ಮಾಡಿದ್ದ ಶಿಲ್ಪಾ, ಅಸಹಜ ಸಾವೆಂದು ಹೇಳಿ ನಾಟಕವಾಡಿದ್ದಳು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪತಿಯನ್ನು ಕೊಂದು ಮೂರ್ಛೆ ರೋಗದಿಂದ ಸಾವನ್ನಪ್ಪಿದ್ದಾನೆ ಎಂದು ಕತೆ ಕಟ್ಟಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯ ಮಹೇಶ್, ಬೆಂಗಳೂರಿನ ಕೊಕೊನಟ್ ಗಾರ್ಡನ್‌ ನಲ್ಲಿ ವಾಸವಿದ್ದರು. ಅವರನ್ನು ಸೆ. 1ರಂದು ಕೊಲೆ ಮಾಡಿದ್ದ ಶಿಲ್ಪಾ, ಅಸಹಜ ಸಾವೆಂದು ಹೇಳಿ ನಾಟಕವಾಡಿದ್ದಳು. ಮಹೇಶ್ ಅವರ ಸಹೋದರ ನೀಡಿದ್ದ ದೂರು ಆಧರಿಸಿ, ಶಿಲ್ಪಾ ಹಾಗೂ ಕೃತ್ಯಕ್ಕೆ ಸಹಾಯ ಮಾಡಿದ್ದ ಆರೋಪಿ ಕೆಂಪದೇವಮ್ಮ ಎಂಬುವರನ್ನು ಬಂಧಿಸಲಾಗಿದೆ, ಬಾಲಾಜಿ ಎಂಬುವನು ತಲೆ ಮರೆಸಿಕೊಂಡಿದ್ದಾನೆ.

ಕೃಷಿಕ ಕುಟುಂಬದ ಮಹೇಶ್, ಶಿಲ್ಪಾ ಅವರನ್ನು ಎಂಟು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ 6 ವರ್ಷದ ಗಂಡು ಮಗುವಿದೆ. ಶಿಲ್ಪಾ ಅವರ ತಂದೆ–ತಾಯಿ ಬೆಂಗಳೂರಿನ ಗೌಡನಪಾಳ್ಯದಲ್ಲಿ ನೆಲೆಸಿದ್ದರು. ಮಹೇಶ್‌–ಶಿಲ್ಪಾ ಸಹ ಮೂರು ತಿಂಗಳ ಹಿಂದೆ ಯಷ್ಟೇ ಬೆಂಗಳೂರಿಗೆ ಬಂದು ಕೊಕೊನಟ್ ಗಾರ್ಡನ್‌ ಪ್ರದೇಶ ದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

‘ಮದ್ಯವ್ಯಸನಿ ಆಗಿದ್ದ ಮಹೇಶ್, ನಿತ್ಯವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ, ಶೀಲ ಶಂಕಿಸಿ ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತ ಶಿಲ್ಪಾ, ಪತಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದಳು.

ಸೆ. 1ರಂದು ಮಹೇಶ್ ಮದ್ಯ ಕುಡಿದು ಮನೆಗೆ ಬಂದಿದ್ದರು. ಅವರಿಗೆ ಶಿಲ್ಪಾ, ಕೆಂಪದೇವಮ್ಮ ಹಾಗೂ ಇತರರು ತೀವ್ರವಾಗಿ ಹೊಡೆದಿದ್ದರು. ತೀವ್ರ ಗಾಯದಿಂದ ಮಹೇಶ್ ಮೃತಪಟ್ಟಿದ್ದ. ಮಂಡ್ಯದಲ್ಲಿರುವ ಮಹೇಶ್ ಸಂಬಂಧಿಕರಿಗೆ ಕರೆ ಮಾಡಿದ್ದ ಶಿಲ್ಪಾ, ಬೆಂಗಳೂರಿನಲ್ಲಿ ವಿಪರೀತ ಮಳೆ. ಮದ್ಯ ಕುಡಿದು ಬರುವಾಗ ಪತಿ, ನೀರಿನಲ್ಲಿ ನೆನೆದಿದ್ದಾರೆ. ಅನಾರೋಗ್ಯ ಸಮಸ್ಯೆ ಉಂಟಾಗಿ, ಮೂರ್ಛೆ ಬಂದು ಬಿದ್ದು ಮೃತಪಟ್ಟಿದ್ದಾರೆ’ ಎಂದಿದ್ದರು. ಬಳಿಕ, ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ಮಂಡ್ಯಕ್ಕೆ ತೆಗೆದುಕೊಂಡು ಹೋಗಿದ್ದರು.

‘ಸೆ. 1ರಂದು ರಾತ್ರಿ ಮೃತದೇಹ ಮಂಡ್ಯ ತಲುಪಿತ್ತು. ಕೊಲೆ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ. ಸೆ. 2ರಂದು ಬೆಳಿಗ್ಗೆ ಮೃತದೇಹ ಮೇಲಿನ ಬಟ್ಟೆ ಬಿಚ್ಚಿದ್ದ ಕುಟುಂಬಸ್ಥರಿಗೆ, ಕೈ–ಕಾಲು, ಸೊಂಟ ಹಾಗೂ ಇತರೆ ರಕ್ತ ಹೆಪ್ಪುಗಟ್ಟಿದ ಗಾಯದ ಗುರುತುಗಳು ಕಂಡಿದ್ದವು. ಕುಟುಂಬಸ್ಥರೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿ ಶಿಲ್ಪಾ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದೆ. ಶೀಲ ಶಂಕಿಸುತ್ತಿದ್ದ ಪತಿ, ಪದೇ ಪದೇ ಜಗಳ ಮಾಡುತ್ತಿದ್ದ. ದೈಹಿಕ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಕೊಲೆ ಮಾಡಿರುವುದಾಗಿ ಶಿಲ್ಪಾ ತಪ್ಪೊಪ್ಪಿಕೊಂಡಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com