ಭಾರೀ ಮಳೆ ಅವಾಂತರ: 'ಭಾರತದ ಯಾವುದೇ ನಗರವೂ ಹೊರತಾಗಿಲ್ಲ'; ಬೆಂಗಳೂರು ಬೆನ್ನಿಗೆ ನಿಂತ ತೆಲಂಗಾಣ ಸಚಿವ ಕೆಟಿಆರ್

ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಅದರ ಸಂಬಂಧಿತ ಅವಾಂತರಗಳು ಸಿಲಿಕಾನ್ ಸಿಟಿ ಎಂಬ ಖ್ಯಾತಿ ಪಡೆದಿದ್ದ ಬೆಂಗಳೂರಿಗೆ ಕುಖ್ಯಾತಿ ತರುತ್ತಿರುವ ಹೊತ್ತಿನಲ್ಲೇ ತೆಲಂಗಾಣದ ಸಚಿವ ಕೆಟಿ ರಾಮಾರಾವ್ ಅವರು ಬೆಂಗಳೂರಿನ ಬೆನ್ನಿಗೆ ನಿಂತಿದ್ದಾರೆ.
ಕೆಟಿ ರಾಮಾರಾವ್
ಕೆಟಿ ರಾಮಾರಾವ್

ಹೈದರಾಬಾದ್: ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಅದರ ಸಂಬಂಧಿತ ಅವಾಂತರಗಳು ಸಿಲಿಕಾನ್ ಸಿಟಿ ಎಂಬ ಖ್ಯಾತಿ ಪಡೆದಿದ್ದ ಬೆಂಗಳೂರಿಗೆ ಕುಖ್ಯಾತಿ ತರುತ್ತಿರುವ ಹೊತ್ತಿನಲ್ಲೇ ತೆಲಂಗಾಣದ ಸಚಿವ ಕೆಟಿ ರಾಮಾರಾವ್ ಅವರು ಬೆಂಗಳೂರಿನ ಬೆನ್ನಿಗೆ ನಿಂತಿದ್ದಾರೆ.

ಹೌದು.. ಭಾರಿ ಮಳೆಯಿಂದಾಗಿ ಬೆಂಗಳೂರಿನ ಪ್ರಮುಖ ರಸ್ತೆಗಳು ಜಲಾವೃತ್ತವಾಗಿದ್ದು, ಬೆಂಗಳೂರಿನ ಈ ಪರಿಸ್ಥಿತಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬೆಂಗಳೂರು ಬೆನ್ನಿಗೆ ನಿಂತಿರುವ ತೆಲಂಗಾಣ ಸಚಿವ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿ ರಾಮಾರಾವ್ ಅವರು, ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮಗಳಿಂದ ಭಾರತದ ಯಾವುದೇ ನಗರವು ಹೊರತಾಗಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, "ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮಗಳಿಂದ ಭಾರತದ ಯಾವುದೇ ನಗರವು ನಿರೋಧಕವಾಗಿಲ್ಲ. ಕ್ಷಿಪ್ರ ನಗರೀಕರಣದ ಸವಾಲುಗಳನ್ನು ನಿಭಾಯಿಸಲು ನಗರ ಯೋಜನೆ ಮತ್ತು ಆಡಳಿತದಲ್ಲಿ ದಿಟ್ಟ ಸುಧಾರಣೆಗಳನ್ನು ಯೋಜಿಸಬೇಕು ಎಂದು ಅವರು ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಕರೆ ನೀಡಿದ್ದಾರೆ.

ಅಂತೆಯೇ ಜಲಾವೃತ್ತವಾಗಿರುವ ಬೆಂಗಳೂರನ್ನು ಅಪಹಾಸ್ಯ ಮಾಡುವ ಎಲ್ಲರಿಗೂ: ನಮ್ಮ ನಗರಗಳು ನಮ್ಮ ಪ್ರಾಥಮಿಕ ಆರ್ಥಿಕ ಇಂಜಿನ್ಗಳಾಗಿದ್ದು, ರಾಜ್ಯಗಳ/ದೇಶದ ಬೆಳವಣಿಗೆಯನ್ನು ವೇಗದ ನಗರೀಕರಣ ಮತ್ತು ಉಪ-ನಗರೀಕರಣದೊಂದಿಗೆ, ನಾವು ಉನ್ನತೀಕರಣಕ್ಕೆ ಸಾಕಷ್ಟು ಬಂಡವಾಳವನ್ನು ತುಂಬದ ಕಾರಣ ಮೂಲಸೌಕರ್ಯಗಳು ಕುಸಿಯುತ್ತಿವೆ. ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮಗಳಿಂದ ನನ್ನ ರಾಜ್ಯದ ರಾಜಧಾನಿ ಹೈದರಾಬಾದ್ ಸೇರಿದಂತೆ ಇಂದು ಯಾವುದೇ ಭಾರತೀಯ ನಗರವೂ ಕೂಡ ನಿರೋಧಕ ಅಥವಾ ಹೊರತಾಗಿಲ್ಲ. ಭಾರತವು ಬೆಳೆಯುವುದನ್ನು ಮುಂದುವರೆಸಬೇಕಾದರೆ, ನಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉತ್ತಮವಾದ, ಸಂಘಟಿತ ಬಂಡವಾಳದ ಹಂಚಿಕೆಗಳು ಮೂಲಭೂತ ಸೌಕರ್ಯಗಳಲ್ಲಿ ಮೂಲಭೂತ ಸುಧಾರಣೆಗೆ ಅಗತ್ಯವಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅಲ್ಲದೆ ಈ ಸಮಸ್ಯೆಗಳನ್ನು ಪರಿಹರಿಸಲು ಆಮೂಲಾಗ್ರ ಕ್ರಮಗಳಿಗೆ ಕರೆ ನೀಡಿದ ಅವರು, "ನಮಗೆ ನಗರ ಯೋಜನೆ ಮತ್ತು ಆಡಳಿತದಲ್ಲಿ ದಿಟ್ಟ ಸುಧಾರಣೆಗಳ ಅಗತ್ಯವಿದೆ. ಕೆಲವು ಬೆಂಗಳೂರಿನ ನಾಯಕರು ಈ ಹಿಂದೆ ಇದೇ ರೀತಿಯ ಸನ್ನಿವೇಶಗಳ ಬಗ್ಗೆ ಹೈದರಾಬಾದ್ ನಿವಾಸಿಗಳನ್ನು "ಅಪಹಾಸ್ಯ" ಮಾಡಿದ್ದರು. ಆದರೆ ಇಂತಹ ಸಂದರ್ಭಗಳಲ್ಲಿ "ಪರಸ್ಪರರ ಅನುಭವಗಳಿಂದ ಕಲಿಯುವ ಮತ್ತು ಸಾಮೂಹಿಕ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ" ಅಗತ್ಯವಿದೆ. ಹೈದರಾಬಾದ್‌ನಲ್ಲಿರುವ ಕೆಲವು ಸ್ನೇಹಿತರು ನಾನು ಹೇಳುವುದನ್ನು ಇಷ್ಟಪಡುವುದಿಲ್ಲ ಎಂದು ನನಗೆ ತಿಳಿದಿದೆ. ಏಕೆಂದರೆ ಹಿಂದೆ, ಬೆಂಗಳೂರಿನ ಕೆಲವು ನಾಯಕರು ಇದೇ ಸಂದರ್ಭಗಳಲ್ಲಿ ನಮ್ಮನ್ನು ನಿಂದಿಸಿದ್ದರು. ಆದರೆ ನಾವು ರಾಷ್ಟ್ರವಾಗಿ ಬೆಳೆಯಬೇಕಾದರೆ, ನಾವು ಪರಸ್ಪರ ಕಲಿಯಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com