ಕೆಐಎಡಿಬಿಯಿಂದ ಭೂಮಿ ಹಂಚಿಕೆ' ವ್ಯವಸ್ಥೆ ಸರಳೀಕರಣ: ಸಚಿವ ಮುರುಗೇಶ್ ನಿರಾಣಿ

ಕರ್ನಾಟಕ ಕೈಗಾರಿಕಾ ಇಲಾಖೆ ಭೂಮಿ ಹಂಚಿಕೆವ್ಯವಸ್ಥೆ ಸರಳೀಕರಣಗೊಳಿಸಿದೆ. ‘ಈಸ್ ಆಫ್ ಡುಯಿಂಗ್ ಬಿಸಿನೆಸ್’ ಮಾದರಿಯಲ್ಲಿ ‘ಈಸ್ ಆಫ್ ಲ್ಯಾಂಡ್ ಅಲಾಟ್‌ಮೆಂಟ್’ ಪದ್ದತಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹೊಸ ಆದೇಶದ ಮೂಲಕ ಜಾರಿಗೊಳಿಸಿದೆ.
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ಬೆಂಗಳೂರು: ಕರ್ನಾಟಕ ಕೈಗಾರಿಕಾ ಇಲಾಖೆ ಭೂಮಿ ಹಂಚಿಕೆವ್ಯವಸ್ಥೆ ಸರಳೀಕರಣಗೊಳಿಸಿದೆ. ‘ಈಸ್ ಆಫ್ ಡುಯಿಂಗ್ ಬಿಸಿನೆಸ್’ ಮಾದರಿಯಲ್ಲಿ ‘ಈಸ್ ಆಫ್ ಲ್ಯಾಂಡ್ ಅಲಾಟ್‌ಮೆಂಟ್’ ಪದ್ದತಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹೊಸ ಆದೇಶದ ಮೂಲಕ ಜಾರಿಗೊಳಿಸಿದೆ. ಭೂಪರಿಶೋಧನಾ ಸಮಿತಿಯಲ್ಲಿ 10 ಎಕರೆವರೆಗಿನ ಭೂಮಿಹಂಚಿಕೆಗೆ  ಪರಿಶೀಲನೆ ಅವಶ್ಯವಿಲ್ಲ ಎಂದು ಹೊಸ ಆದೇಶಸ್ಪಷ್ಟಪಡಿಸಿದೆ. ಹೂಡಿಕೆ ಪ್ರಸ್ತಾವನೆಗಳು  ಈಗ ನೇರವಾಗಿ ರಾಜ್ಯಮಟ್ಟದ  ಸಮಿತಿಯ ಮುಂದ ಮಂಡನೆಯಾಗಲಿವೆ.
 
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಗಳಿಗೆ ಅಗತ್ಯವಿರುವ ಭೂಮಿಯನ್ನು ಸುಲಭವಾಗಿ ನೀಡುವುದು ಇದರ ಮುಖ್ಯ ಉದ್ದೇಶ. ಸುಲಲಿತ ವ್ಯವಹಾರದಲ್ಲಿ ದೇಶದಲ್ಲೇ ಮುಂಚೂಣಿ ಸ್ಥಾನದಲ್ಲಿರುವ ರಾಜ್ಯಕ್ಕೆ  ಹೆಚ್ಚು ಉದ್ಯಮಗಳನ್ನು ಆಕರ್ಷಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದೆ. 10 ಎಕರೆಗಿಂತ ಕಡಿಮೆ ವಿಸ್ತೀರ್ಣದ ಭೂಮಿಗಾಗಿ ಜಮೀನು ಪರಿಶೀಲನಾ ಸಮಿತಿಗೆ ಹೋಗುವ ಬದಲು ನೇರವಾಗಿ ಜಿಲ್ಲಾ ಅಥವಾ ರಾಜ್ಯ ಮಟ್ಟದ ಅನುಮೋದನಾ ಸಮಿತಿಯಲ್ಲಿ ಅನುಮೋದನೆನೀಡುವುದರಿಂದ ಪ್ರಸ್ತಾವನೆಗಳಿಗೆ ತ್ವರಿತವಾಗಿ ಅನುಮೋದನೆ ದೊರೆಯುತ್ತದೆ. ಇದರಿಂದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮಉದ್ಯಮದಾರರಿಗೆ ಅನುಕೂಲವಾಗುವುದು ಎಂದು ಬೃಹತ್‌ ಮತ್ತುಮಧ್ಯಮ ಕೈಗಾರಿಕೆಗಳ ಸಚಿವ ಡಾ. ಮುರುಗೇಶ ಆರ್‌. ನಿರಾಣಿ ಹರ್ಷವ್ಯಕ್ತಪಡಿಸಿದರು. 

ಇದನ್ನೂ ಓದಿ: ಭಾರತದ ಸ್ಟಾರ್ಟಪ್ ವಿಭಾಗದಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ
 
ಬರುವ ನವೆಂಬರ್ 2,3 ಮತ್ತು 4 ರಂದು ನಡೆಯಲಿರುವ ಮಹತ್ವಾಕಾಂಕ್ಷೆಯ ಜಾಗತಿಕ ಹೂಡಿಕೆದಾರರ ಸಭೆ (ಜಿಐಎಂ) ಪೂರ್ವಭಾವಿಯಾಗಿ ಈ ನಿರ್ಧಾರವನ್ನು ಇಲಾಖೆ ಕೈಗೊಂಡಿದೆ. ಆದಾಗ್ಯೂ, ಹತ್ತು ಎಕರೆಗಿಂತ ಹೆಚ್ಚಿನ ವಿಸ್ತೀರ್ಣ ಮತ್ತು ರೂ.15 ಕೋಟಿಯಿಂದ ರೂ.500 ಕೋಟಿವರೆಗಿನ ಹೂಡಿಕೆಯ ಪ್ರಸ್ತಾವನೆಗಳನ್ನು ಭೂ ಲೆಕ್ಕ ಪರಿಶೋಧನಾ ಸಮಿತಿಯ ಮುಂದೆ ಮಂಡಿಸಬಹುದು, ಇಲ್ಲಿ ತೆರವುಗೊಳಿಸಿದ ನಂತರ, ಅಂತಿಮಅನುಮೋದನೆಗಾಗಿ ರಾಜ್ಯ ಮಟ್ಟದ ಏಕ ಗವಾಕ್ಷಿ ತೆರವು ಸಮಿತಿಯಮುಂದೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು. 
 
ಹೊಸ ಆದೇಶ ಏಕೆ? 
ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳ ಬೆಳವಣಿಗೆಹಿತದೃಷ್ಟಿಯಿಂದ 10 ಎಕರೆವರೆಗೆ ಜಮೀನು ಮಂಜೂರಾತಿ ಕೋರಿಸಲ್ಲಿಸುವ ಬಂಡವಾಳ ಹೂಡಿಕೆ ಪ್ರಸ್ತಾವನೆಗಳನ್ನು ನೇರವಾಗಿರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯ ಮುಂದೆಅನುಮೋದನೆಗಾಗಿ ಮಂಡಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಭೂಮಿಪರಿಶೋಧನಾ ಸಮಿತಿಯ (LAC) ಅನುಮೋದನೆಗಾಗಿ ಇನ್ನು ಮುಂದೆತಿಂಗಳುಗಟ್ಟಲೆ ಕಾಯಬೇಕಾಗಿಲ್ಲ. ರಾಜ್ಯದಲ್ಲಿ 10 ಎಕರೆ ಜಮೀನು ಮಂಜೂರು ಕೋರುವ ಕೈಗಾರಿಕೆಗಳುಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಾಗಿದ್ದು, ಇವುಗಳನ್ನುತ್ವರಿತಗತಿಯಲ್ಲಿ ಅನುಮೋದನೆ ನೀಡಬೇಕೆಂಬುದು ರಾಜ್ಯದ ಕೈಗಾರಿಕಾಉದ್ದಿಮೆದಾರರ ಸಂಘ ಸಂಸ್ಥೆಗಳ ಬಹುದಿನಗಳ ಬೇಡಿಕೆಯಾಗಿತ್ತು. 
 
ಈವೆರೆಗಿನ ಪ್ರಕ್ರಿಯೆ ಹೇಗಿತ್ತು?
ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ/ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ ಸಭೆಗಳ ಮುಂದೆ ಬಂಡವಾಳ ಹೂಡಿಕೆ ಪ್ರಸ್ತಾವನೆಗಳನ್ನು ಮಂಡಿಸುವ ಮೊದಲು ಜಮೀನು ಪರಿಶೀಲನಾ ಸಮಿತಿ ಮುಂದೆ ಪ್ರಸ್ತಾವನೆ ಮಂಡಿಸಬೇಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com