ಬೆಳಗಾವಿ ಎಸ್‌ಪಿ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ರಚಿಸಿ, ಹಣಕ್ಕೆ ಬೇಡಿಕೆ

ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಅವರ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆಯನ್ನು ನಕಲಿಸಿರುವ ಸೈಬರ್ ವಂಚಕರು, ಡಿಜಿಟಲ್ ವ್ಯಾಲೆಟ್ ಮೂಲಕ ಹಣ ಕಳುಹಿಸುವಂತೆ ವ್ಯಕ್ತಿಗಳನ್ನು ಕೇಳಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಳಗಾವಿ: ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಅವರ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆಯನ್ನು ನಕಲಿಸಿರುವ ಸೈಬರ್ ವಂಚಕರು, ಡಿಜಿಟಲ್ ವ್ಯಾಲೆಟ್ ಮೂಲಕ ಹಣ ಕಳುಹಿಸುವಂತೆ ವ್ಯಕ್ತಿಗಳನ್ನು ಕೇಳಿದ್ದಾರೆ. ತಮ್ಮ ಹೆಸರಿನಲ್ಲಿ ಅಕೌಂಟ್ ಕ್ರಿಯೇಟ್ ಆಗಿರುವುದರಿಂದ ಎಚ್ಚೆತ್ತ ಪಾಟೀಲ್, ತಕ್ಷಣವೇ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ. ಅಂತಹ ನಕಲಿ ಖಾತೆಗಳನ್ನು ಹೇಗೆ ನಿರ್ಬಂಧಿಸುವುದು ಎಂಬುದರ ಕುರಿತು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ಆಗಿದ್ದ ಪಾಟೀಲ್ ಅವರು, ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದೇ ಖಾತೆಯನ್ನು ಹೊಂದಿಲ್ಲ. ಇದನ್ನೇ ಬಳಸಿಕೊಂಡ ಸೈಬರ್ ಖದೀಮರು ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ್ ಹೆಸರು ಹಾಗೂ ಫೋಟೊ‌ ಬಳಸಿ ಇನ್‌ಸ್ಟಾಗ್ರಾಂನಲ್ಲಿ Dr.Sanjeev M Patil, IPS dcpwestbengaluru_ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ 7500 ರೂಪಾಯಿ ಹಣ ವರ್ಗಾವಣೆ ಮಾಡುವಂತೆ ಫಾಲೋವರ್ಸ್ ಬಳಿ ಕೇಳಿದ್ದಾರೆ.

ಹೀಗಾಗಿ ಆ ಖಾತೆಯ ಹಿಂಬಾಲಕರಿಗೆ ಖಾತೆಯನ್ನು ಬ್ಲಾಕ್ ಮಾಡುವಂತೆಯೂ ಹೇಳಿದ್ದಾರೆ.

ಪಾಟೀಲ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ, ತಮ್ಮ ಹೆಸರು ಮತ್ತು ಫೋಟೊ ಬಳಸಿ ನಕಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ರಚಿಸಲಾಗಿದೆ ಮತ್ತು ವಂಚಕರು ಹಣಕ್ಕಾಗಿ ಬೇಡಿಕೆಯಿಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಣಕ್ಕೆ ಬೇಡಿಕೆ ಇಡುವ ಖಾತೆಗಳ ಬಗ್ಗೆ ನಾಗರಿಕರು ಎಚ್ಚರ ವಹಿಸಬೇಕು ಮತ್ತು ಅವುಗಳನ್ನು ನಿರ್ಬಂಧಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com