'ನೆಹರೂನೆ ಕನ್ನಡ ಮಾತಾಡಿ ಬರಲಿ ಅಂದವರು ನಾವು.. ಇನ್ನು..': ಭಾರತ್ ಜೋಡೋ ಪೋಸ್ಟರ್ ಗಳ ಮೇಲೆ ಕನ್ನಡ ಬಳಸಿ ಬರವಣಿಗೆ ವೈರಲ್!
ಕರ್ನಾಟಕ ಪ್ರವೇಶ ಮಾಡಿರುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಗೆ ಕನ್ನಡಪರ ಹೋರಾಟಗಾರರು ಶಾಕ್ ನೀಡಿದ್ದು, ಭಾರತ್ ಜೋಡೋ ಯಾತ್ರೆ ಪೋಸ್ಟರ್ ಗಳ ಮೇಲೆ 'ಕನ್ನಡ ಬಳಸಿ' ಎಂಬ ಪದಗಳನ್ನು ಬರೆದು ಪರಭಾಷಾ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
Published: 30th September 2022 12:16 PM | Last Updated: 30th September 2022 12:16 PM | A+A A-

ಭಾರತ್ ಜೋಡೋ ಪೋಸ್ಟರ್ ಮೇಲೆ ಕನ್ನಡ ಬಳಸಿ ಬರಹ
ಚಾಮರಾಜನಗರ: ಕರ್ನಾಟಕ ಪ್ರವೇಶ ಮಾಡಿರುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಗೆ ಕನ್ನಡಪರ ಹೋರಾಟಗಾರರು ಶಾಕ್ ನೀಡಿದ್ದು, ಭಾರತ್ ಜೋಡೋ ಯಾತ್ರೆ ಪೋಸ್ಟರ್ ಗಳ ಮೇಲೆ 'ಕನ್ನಡ ಬಳಸಿ' ಎಂಬ ಪದಗಳನ್ನು ಬರೆದು ಪರಭಾಷಾ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಭಾರತ್ ಜೋಡೊ ಯಾತ್ರೆಯು ತಮಿಳುನಾಡು, ಕೇರಳ ಸಂಚಾರ ಮುಗಿಸಿ ಇಂದು ರಾಜ್ಯ ಪ್ರವೇಶಿಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ‘ಭಾರತ್ ಜೋಡೊ ಯಾತ್ರೆ’ ಇಂದು ರಾಜ್ಯ ಪ್ರವೇಶಿಸಿದ್ದು, ರಾಜ್ಯದ ‘ಕೈ’ ನಾಯಕರು ಅದ್ದೂರಿ ಸ್ವಾಗತ ನೀಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಸುಮಾರು 511 ಕಿ.ಮೀಯಷ್ಟು ನಡೆಯಲಿದ್ದಾರೆ. ಒಟ್ಟು 21 ದಿನಗಳ ಕಾಲ ರಾಜ್ಯದಲ್ಲಿ ಯಾತ್ರೆ ಇರಲಿದೆ.
ಇದರರ ನಡುವೆಯೇ ಚಾಮರಾಜನಗರದಲ್ಲಿ ಭಾರತ್ ಜೋಡೋ ಯಾತ್ರೆ ನಿಮಿತ್ತ ಹಾಕಲಾಗಿದ್ದ ಬೃಹತ್ ಫ್ಲೆಕ್ಸ್ ಮತ್ತು ಬ್ಯಾನರ್ ಗಳ ಮೇಲೆ ಕನ್ನಡಪರ ಹೋರಾಟಗಾರರು ಕಪ್ಪು ಇಂಕ್ ಮೂಲಕ ಕನ್ನಡ ಬಳಸಿ ಎಂಬ ಬರಹಗಳನ್ನು ಬರೆದು ಪರಭಾಷಾ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, 'ನೆಹರೂನೆ ಕನ್ನಡ ಮಾತಾಡಿ ಕರ್ನಾಟಕಕ್ಕೆ ಬರಲಿ ಅಂದವರು ನಾವು..ಇನ್ನು ಅವರ ಮರಿಮಗ ಹಿಂದಿ ಹೇರಿಕೆ ಮಾಡೋಕ್ಕೆ ಬಂದ್ರೆ ಬಿಡುತ್ತಿವಾ?.. ಕರ್ನಾಟಕ ಕಾಂಗ್ರೆಸ್ ನಲ್ಲಿ ಸಿದ್ದಣ್ಣ ಬಿಟ್ಟರೆ ಉಳಿದವರೆಲ್ಲ ಕನ್ನಡದ ಬಗ್ಗೆ ಮಾತಾಡಿದ್ದು ಇಲ್ಲ. ಅದರಲ್ಲಿ ಜಿಸಿ ಚಂದ್ರಶೇಖರ್ ಯಾವಾಗಲೂ ಮತ್ತು ಪ್ರಿಯಾಂಕ್ ಖರ್ಗೆ ಕೆಲವೇ ಬಾರಿ ಕನ್ನಡ ಅಂದಿದ್ದು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಪ್ರವೇಶಿಸಿದ 'ಭಾರತ್ ಜೋಡೋ' ಯಾತ್ರೆ: ಬಂಡೀಪುರದಲ್ಲಿ ಕೈ ನಾಯಕರಿಂದ ರಾಹುಲ್ ಗಾಂಧಿಗೆ ಸ್ವಾಗತ
ಅಂತೆಯೇ 'ನಾವು ನಿಮ್ಮ ಕನ್ನಡ ಪರ ಕೆಲಸಗಳನ್ನ ಇಷ್ಟಪಡ್ತೀವಿ. ರಾಜಕೀಯ ವಿಷಯ ಬೇಡ ಅಂತ ಒಂದಷ್ಟು ಜನ ಹೇಳ್ತಾರೆ. ಆದರೆ ಕನ್ನಡ ಕನ್ನಡಿಗ ಕರ್ನಾಟಕದ ಹಿತಾಸಕ್ತಿ ರಕ್ಷಣೆಗೆ ರಾಜಕೀಯ ನಿಲುವುಗಳು ಅತ್ಯಗತ್ಯ. ಇವೆರಡನ್ನು ಬೇರ್ಪಡಿಸಿ ಕೆಲಸ ಮಾಡಲು ಸಾಧ್ಯವಿಲ್ಲ. ಕನ್ನಡಕ್ಕೆ ರಾಜಕೀಯ ಮಾಡೋದು ಬೇಡ, ರಾಜಕೀಯದಲ್ಲಿ ಕನ್ನಡ ಬರಲಿ ಎಂದು ಆಗ್ರಹಿಸಿದ್ದಾರೆ.