ದೇಶದ ಅತೀ ದೊಡ್ಡ ಡಾಟಾಗೆ ಕನ್ನ: ಸುಮಾರು 66.9 ಕೋಟಿ ಭಾರತೀಯರ ಮಾಹಿತಿ ಕದ್ದಿದ್ದ ವ್ಯಕ್ತಿಯ ಬಂಧನ!

ಹೈದರಾಬಾದ್‌ನ 56 ಲಕ್ಷ ಜನರು ಸೇರಿದಂತೆ ಎಂಟು ಮೆಟ್ರೋ ನಗರಗಳು, 24 ರಾಜ್ಯಗಳ 44 ವಿಭಾಗಗಳಲ್ಲಿ 66.9 ಕೋಟಿ ಜನರ ಮಾಹಿತಿಯನ್ನು ಕಳ್ಳತನ ಮಾಡಿರುವ ದೇಶದ ಅತೀ ದೊಡ್ಡ ಡಾಟಾ ಕಳವು ಪ್ರಕರಣವೊಂದನ್ನು ಸೈಬರಾಬಾದ್ ಪೊಲೀಸರು ಪತ್ತೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹೈದರಾಬಾದ್: ಹೈದರಾಬಾದ್‌ನ 56 ಲಕ್ಷ ಜನರು ಸೇರಿದಂತೆ ಎಂಟು ಮೆಟ್ರೋ ನಗರಗಳು, 24 ರಾಜ್ಯಗಳ 44 ವಿಭಾಗಗಳಲ್ಲಿ 66.9 ಕೋಟಿ ಜನರ ಮಾಹಿತಿಯನ್ನು ಕಳ್ಳತನ ಮಾಡಿರುವ ದೇಶದ ಅತೀ ದೊಡ್ಡ ಡಾಟಾ ಕಳವು ಪ್ರಕರಣವೊಂದನ್ನು ಸೈಬರಾಬಾದ್ ಪೊಲೀಸರು ಪತ್ತೆ ಮಾಡಿದ್ದಾರೆ.

66.9 ಕೋಟಿ ಜನರ ಮತ್ತು ಖಾಸಗಿ ಸಂಸ್ಥೆಗಳ ವೈಯಕ್ತಿಕ ಮತ್ತು ಗೌಪ್ಯ ಮಾಹಿತಿಯನ್ನು ಕದ್ದಿದ್ದ ವ್ಯಕ್ತಿಯೊಬ್ಬನನ್ನು ಸೈಬರಾಬಾದ್ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿನಯ್ ಭಾರದ್ವಾಜ್‌ ಎಂದು ಗುರ್ತಿಸಲಾಗಿದೆ. ಈತನಿಂದ ಶಿಕ್ಷಣ-ತಂತ್ರಜ್ಞಾನ ಸಂಸ್ಥೆಗಳ ವಿದ್ಯಾರ್ಥಿಗಳ ದತ್ತಾಂಶವನ್ನು ಪಡೆಯಲಾಗಿದೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದರಲ್ಲಿ ಜಿಎಸ್'ಟಿ, ವಿವಿಧ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳು, ಪ್ರಮುಖ ಇ-ಕಾಮರ್ಸ್ ಪೋರ್ಟಲ್‌ಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಫಿನ್‌ಟೆಕ್ ಕಂಪನಿಗಳಂತಹ ಪ್ರಮುಖ ಸಂಸ್ಥೆಗಳ ಗ್ರಾಹಕರ ಮಾಹಿತಿಗಳೂ ಇವೆ ಎಂದು ಹೇಳಿದೆ.

ಬಂಧಿತ ಆರೋಪಿಗಳು 104 ವಿಭಾಗಗಳಲ್ಲಿ ಇರಿಸಲಾದ ಸುಮಾರು 66.9 ಕೋಟಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಖಾಸಗಿ ಮತ್ತು ಗೌಪ್ಯ ಡೇಟಾವನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.

ಆರೋಪಿ ಬಳಿ ಇರುವ ಕೆಲವು ಪ್ರಮುಖ ಮಾಹಿತಿಗಳಲ್ಲಿ ರಕ್ಷಣಾ ಸಿಬ್ಬಂದಿ, ಸರ್ಕಾರಿ ನೌಕರರು, ಪ್ಯಾನ್ ಕಾರ್ಡ್ ಹೊಂದಿರುವವರು, 9, 10, 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಡಿ-ಮ್ಯಾಟ್ ಖಾತೆದಾರರು, ವಿವಿಧ ವ್ಯಕ್ತಿಗಳ ವಿವರಗಳು ಸೇರಿವೆ.

ನೀಟ್ ವಿದ್ಯಾರ್ಥಿಗಳು, ಶ್ರೀಮಂತ ವ್ಯಕ್ತಿಗಳು, ವಿಮಾದಾರರು, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರ ಡೇಟಾ ಮತ್ತು ಮೊಬೈಲ್ ಸಂಖ್ಯೆಗಳು ಕೂಡ ಆರೋಪಿ ಬಳಿ ಇರುವುದು ಕಂಡು ಬಂದಿದೆ.

ಆರೋಪಿಯಿಂದ ಪೊಲೀಸರು ಎರಡು ಮೊಬೈಲ್ ಫೋನ್‌ಗಳು ಮತ್ತು ಎರಡು ಲ್ಯಾಪ್‌ಟಾಪ್‌ಗಳು ಮತ್ತು ಸರ್ಕಾರಿ, ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರುವ ನೂರಕ್ಕೂ ಹೆಚ್ಚು ವಿಭಾಗಗಳ ಡೇಟಾವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಹರಿಯಾಣದ ಫರಿದಾಬಾದ್‌ನಲ್ಲಿ “InspireWebz” ವೆಬ್‌ಸೈಟ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಕ್ಲೌಡ್ ಡ್ರೈವ್ ಲಿಂಕ್ ಗಳ ಮೂಲಕ ಗ್ರಾಹಕರಿಗೆ ಡೇಟಾವನ್ನು ಮಾರಾಟ ಮಾಡುತ್ತಿದ್ದ. ಪೊಲೀಸರು ಎರಡು ಮೊಬೈಲ್ ಫೋನ್ ಗಳು, ಎರಡು ಲ್ಯಾಪ್ ಟಾಪ್ ಹಾಗೂ ಸರಕಾರಿ, ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಸೂಕ್ಷ್ಮ ಮಾಹಿತಿಯನ್ನು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com