ಅಪರೂಪದ ಕಣ್ಣಿನ ಕಾಯಿಲೆ: ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಕೀನ್ಯಾದ ಮಹಿಳೆಗೆ ಮರಳಿ ದೃಷ್ಟಿ ನೀಡಿದ ನಗರದ ವೈದ್ಯರು!

ಅಪರೂಪದ ಕಣ್ಣಿನ ಕಾಯಿಲೆಯಿಂದ ಬಳಲುತ್ತಿದ್ದ ಕೀನ್ಯಾದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುವಲ್ಲಿ  ನಗರದ ವೈದ್ಯರು ಯಶಸ್ವಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಪರೂಪದ ಕಣ್ಣಿನ ಕಾಯಿಲೆಯಿಂದ ಬಳಲುತ್ತಿದ್ದ ಕೀನ್ಯಾದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುವಲ್ಲಿ  ನಗರದ ವೈದ್ಯರು ಯಶಸ್ವಿಯಾಗಿದ್ದಾರೆ.

ಕೀನ್ಯಾ ಮೂಲದ ರೋಗಿಯೊಬ್ಬರು ಸಂಪೂರ್ಣ ದೃಷ್ಟಿ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದರು. 3 ವಾರಗಳಿಂದ ಬಲಗಣ್ಣಿನ ಚಲನೆ ಸಂಪೂರ್ಣವಾಗಿ ಹೋಗಿತ್ತು. ಅತೀವ್ರ ಕಣ್ಣು ಹಾಗೂ ತಲೆನೋವಿನಿಂದ ರೋಗಿ ಬಳಲುತ್ತಿದ್ದರು. ಸಮಸ್ಯೆ ಗಂಭೀರವಾದ ಹಿನ್ನೆಲೆಯಲ್ಲಿ ರೋಗಿಯು ಕೀನ್ಯಾ ಹಾಗೂ ಅಮೆರಿಕಾದ ಸಾಕಷ್ಟು ಆಸ್ಪತ್ರೆಗಳ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ. ಆದರೆ, ಎಲ್ಲಿಯೂ ಚಿಕಿತ್ಸೆ ಯಶಸ್ವಿಯಾಗಿರಲಿಲ್ಲ.

ಅಂತಿಮವಾಗಿ ರೋಗಿಯು ನಗರದ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಬಂದಿದ್ದು, ಇಲ್ಲಿ ರೋಗಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ

ರೋಗಿಯು ಇಡಿಯೋಪಥಿಕ್ ಇನ್‌ಫ್ಲಮೇಟರಿ ಆರ್ಬಿಟಲ್ ಸೆಲ್ಯುಲೈಟಿಸ್ ಎಂಬ ಅಪರೂಪದ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದರು, ಈ ಸಮಸ್ಯೆಯು ಕಣ್ಣು ಮತ್ತು ಆಪ್ಟಿಕ್ ನರದಲ್ಲಿ ಊತವನ್ನು ಉಂಟುಮಾಡುತ್ತದೆ. ಊತವನ್ನು ಕಡಿಮೆ ಮಾಡಲು, ಕಣ್ಣಿನಲ್ಲಿನ ದ್ರವ ಮತ್ತು ರಕ್ತದ ಹರಿವನ್ನು ಸುಧಾರಿಸಲು ಝೀರೋ-ಕಟ್ ಎಂಡೋಸ್ಕೋಪಿಕ್ ಆಪ್ಟಿಕ್ ನರ್ವ್ ಡಿಕಂಪ್ರೆಷನ್ ಸರ್ಜರಿಯನ್ನು ಮಾಡಲಾಯಿತು. ಇದು ಮಹಿಳೆಯ ದೃಷ್ಟಿ ಮರಳಿ ಬರಲು ಸಹಾಯ ಮಾಡಿತು. ಎರಡೇ ದಿನಗಳಲ್ಲಿ ಮಹಿಳೆ ಸಂಪೂರ್ಣವಾಗಿ ಗುಣಮುಖರಾದರು ಎಂದು ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಮುಖ್ಯ ಇಎನ್‌ಟಿ ಮತ್ತು ಎಂಡೋಸ್ಕೋಪಿಕ್ ಸ್ಕಲ್ ಬೇಸ್ ಸರ್ಜನ್ ಡಾ ಪ್ರಶಾಂತ್ ಆರ್ ರೆಡ್ಡಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com