ಅಮುಲ್‌ನಿಂದ ಕೆಎಂಎಫ್‌ಗೆ ಯಾವುದೇ ಅಪಾಯವಿಲ್ಲ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಗುಜರಾತ್‌ನಿಂದ ರಾಜ್ಯಕ್ಕೆ ಅಮೂಲ್‌ ಬಂದರೆ ನಂದಿನಿ ಬ್ರ್ಯಾಂಡ್‌ಗೆ ಯಾವುದೇ ತೊಂದರೆ ಇಲ್ಲ. ಸಿದ್ದರಾಮಯ್ಯ ಹಾಗೂ ಸಿಎಂ ಇಬ್ರಾಹಿಂ ರಾಜಕೀಯಕ್ಕಾಗಿ ರೈತರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭಾನುವಾರ ಹೇಳಿದ್ದಾರೆ.
ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಉಡುಪಿ: ಗುಜರಾತ್‌ನಿಂದ ರಾಜ್ಯಕ್ಕೆ ಅಮೂಲ್‌ ಬಂದರೆ ನಂದಿನಿ ಬ್ರ್ಯಾಂಡ್‌ಗೆ ಯಾವುದೇ ತೊಂದರೆ ಇಲ್ಲ. ಸಿದ್ದರಾಮಯ್ಯ ಹಾಗೂ ಸಿಎಂ ಇಬ್ರಾಹಿಂ ರಾಜಕೀಯಕ್ಕಾಗಿ ರೈತರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭಾನುವಾರ ಹೇಳಿದ್ದಾರೆ.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಪ್ರತಿ ದಿನ 1 ಕೋಟಿ ಲೀಟರ್ ಹಾಲಿನ ಅಗತ್ಯವಿದ್ದು, ಪೂರೈಕೆಯಾಗುತ್ತಿರುವುದು ಕೇವಲ 74 ಲಕ್ಷ ಲೀಟರ್ ಗಳಷ್ಟೇ. ಈ ಬೇಡಿಕೆಯನ್ನು ಪೂರೈಸಲು, ಇತರ ಹಾಲಿನ ಬ್ರಾಂಡ್‌ಗಳು ಕರ್ನಾಟಕದಲ್ಲಿ ಮಾರುಕಟ್ಟೆ ಪ್ರವೇಶಿಸಿವೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಮಾರಾಟವಾಗುವ ಬ್ರ್ಯಾಂಡ್‌ ನಂದಿನಿಯ ನಮ್ಮ ರಾಜ್ಯದಲ್ಲಿ ಅಗಾಧ ವ್ಯವಹಾರ ನಡೆಸುತ್ತಿದೆ. ಜೊತೆಗೆ ಬೇರೆ 8 ರಾಜ್ಯಗಳ ಬ್ರ್ಯಾಂಡ್‌ಗಳು ನಮ್ಮಲ್ಲಿ ಮಾರಾಟ ಆಗುತ್ತಿವೆ, ಆದರೂ ನಂದಿನಿಗೆ ಸರಿಗಟ್ಟಲಾಗಿಲ್ಲ. ಅಮೂಲ್‌ ಅಥವಾ ಬೇರೆ ಯಾವುದೇ ಬ್ರ್ಯಾಂಡ್‌ ಬಂದರೂ ನಮ್ಮ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ. ನಂದಿನಿ ಬ್ರ್ಯಾಂಡ್‌ ಮೇಲೆ ಯಾವುದೇ ಪರಿಣಾಮ ಆಗದು ಎಂದು ಹೇಳಿದರು.

ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದೆ. ನಂದಿನಿ ದೇಶಾದ್ಯಂತ ಪ್ರಮುಖ ಬ್ರಾಂಡ್ ಆಗಿ ಮುಂದುವರಿಯಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು 60,000 ಹಾಲು ಖರೀದಿ ಕೇಂದ್ರಗಳೊಂದಿಗೆ 14 ಕೆಎಂಎಫ್ ಸಂಸ್ಥೆಗಳನ್ನು ಹೊಂದಿದ್ದೇವೆ. “ಗುಜರಾತ್ ಹೆಸರು ಕೇಳಿದರೆ ಕೆಲವರಿಗೆ ಸಿಟ್ಟು ಬರುತ್ತದೆ. ಗುಜರಾತ್ ಮಾದರಿ ರಾಜ್ಯವಾಗಿ ಅಭಿವೃದ್ಧಿ ಹೊಂದುತ್ತಿರುವುದು ಸತ್ಯ. ಗುಜರಾತ್ ನಮ್ಮ ರಾಷ್ಟ್ರದ ಭಾಗವಾಗಿರುವುದು ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com