ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶೋಷಿತ ವರ್ಗಗಳು ಉತ್ತಮವಾಗಿದ್ದವು: ಸಿದ್ದರಾಮಯ್ಯ

ಬಿಜೆಪಿ ಆಡಳಿತಕ್ಕಿಂತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ದಮನಿತ ವರ್ಗಗಳು ಉತ್ತಮವಾಗಿದ್ದವು ಎಂದು  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ಭಾನುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ಬೆಂಗಳೂರು: ಬಿಜೆಪಿ ಆಡಳಿತಕ್ಕಿಂತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ದಮನಿತ ವರ್ಗಗಳು ಉತ್ತಮವಾಗಿದ್ದವು ಎಂದು  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಕಲ್ಪ ಅಧಿವೇಶನ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಕಿಡಿಕಾರಿದರು.

“ನಾವು ನಮ್ಮ ಕೊನೆಯ ಬಜೆಟ್ ಅನ್ನು 2.02 ಲಕ್ಷ ಕೋಟಿ ರೂ.ಗಳನ್ನು ಮಂಡಿಸಿದಾಗ, ಎಸ್‌ಸಿ, ಎಸ್‌ಟಿ ಮತ್ತು ಶೋಷಿತ ವರ್ಗಗಳಿಗೆ 30,000 ಕೋಟಿ ರೂಗಳನ್ನು ಮೀಸಲಿಟ್ಟೆದ್ದವು. ಬಿಜೆಪಿ ಬಜೆಟ್ ಗಾತ್ರ ಶೇ.50ರಷ್ಟು ಹೆಚ್ಚಾಗಿದ್ದು, ಸುಮಾರು 3.10 ಲಕ್ಷ ಕೋಟಿ ರೂ.ಗಳಷ್ಟು ಬಜೆಟ್ ಇರುವಾಗ ಎಸ್ಸಿಗಳಂತಹ ಶೋಷಿತ ವರ್ಗಗಳಿಗೆ 30,000 ಕೋಟಿ ರೂ.ಗಳನ್ನು ಏಕೆ ಮೀಸಲಿಡಲಾಗಿದೆ? ಇದು ನ್ಯಾಯವೇ?’’ ಎಂದು ಪ್ರಶ್ನಿಸಿದರು.

“ಬಿಜೆಪಿ ಸರ್ಕಾರದಿಂದ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯನ್ನು ಹೆಚ್ಚಿಸಲಾಗಿದೆ, ಆದರೆ ಅದನ್ನು ಇನ್ನೂ ಮಾನ್ಯ ಮಾಡಿಲ್ಲ. ಬಿಜೆಪಿ ಆಡಳಿತದಲ್ಲಿ ಕೊಟ್ಟ ಆಶ್ವಾಸನೆಗಳು ಹಾಗೆಯೇ ಉಳಿದಿವೆ. ಎಸ್‌ಸಿ/ಪಿ/ಟಿಎಸ್‌ಪಿ ಕಾಯ್ದೆಯ 7ಡಿಯನ್ನು ತೆಗೆದುಹಾಕಬೇಕು ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿತ್ತು. ಬಿಜೆಪಿಯಲ್ಲಿರುವ ದಲಿತ ಮುಖಂಡರು ಕಾಯ್ದೆಯನ್ನು ಸಹಿಸಿಕೊಂಡಿದ್ದು, ಎಸ್‌ಸಿ/ಎಸ್‌ಟಿಗಳ ಹಣವನ್ನು ನೀರಾವರಿಗೆ ಖರ್ಚು ಮಾಡಲಾಗಿದೆ ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆಂದು ಆರೋಪಿಸಿದರು.

ನಾವು 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದರೆ ಬಿಜೆಪಿಯವರು ಇದನ್ನು ನಂಬಬೇಡಿ, ಅವರಿಂದ 10 ಕೆ.ಜಿ ಕೊಡೋಕಾಗಲ್ಲ ಎನ್ನುತ್ತಾರೆ. ಹಿಂದೆ 7 ಕೆ.ಜಿ ಅಕ್ಕಿ ಕೊಟ್ಟವರಿಗೆ ಈಗ 10 ಕೆ.ಜಿ ಅಕ್ಕಿ ಕೋಡೋಕಾಗಲ್ವಾ? ಇದಕ್ಕೆ ಎರಡು ಮೂರು ಸಾವಿರ ಕೋಟಿ ಹಣ ಹೆಚ್ಚು ಖರ್ಚಾಗಬಹುದು ಅಷ್ಟೆ. ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಖಂಡಿತಾ ಜಾರಿಗೆ ಕೊಡಲು ಸಾಧ್ಯವಿದೆ. ಅಪಪ್ರಚಾರ ಮಾಡುವವರ ಮಾತಿಗೆ ಬೆಲೆ ಕೊಡದೆ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಎಂದು ತಿಳಿಸಿದರು.

ರೂ. 2013ರಲ್ಲಿ 414 ರೂಪಾಯಿ ಇದ್ದ ಎಲ್‌ಪಿಜಿ ಬೆಲೆ ಇಂದು 1150 ರೂಪಾಯಿ. ಇಂತಹ ಖರ್ಚುಗಳನ್ನು ನಿಭಾಯಿಸಲು ಪ್ರತಿ ಮನೆಯ ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ.ಗಳನ್ನು ನೀಡುವುದಾಗಿ ನಾವು ಭರವಸೆ ನೀಡಿದ್ದೇವೆ, ಆದರೆ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಸಾಲವನ್ನು ಕಡಿಮೆ ಮಾಡುವುದರ ಮೂಲಕ, ಅನಗತ್ಯ ಖರ್ಚುಗಳನ್ನು ಕಡಿತಗೊಳಿಸುವುದರ ಮೂಲಕ ಮತ್ತು ತೆರಿಗೆಗಳನ್ನು ಸರಿಯಾಗಿ ಸಂಗ್ರಹಿಸುವ ಮೂಲಕ ಇದನ್ನು ಮಾಡಬಹುದು. ಪ್ರತಿ ವರ್ಷ, ಬಜೆಟ್ ಗಾತ್ರವು 25,000 ರಿಂದ 30,000 ಕೋಟಿ ರೂ.ಗಳಷ್ಟು ಹೆಚ್ಚುತ್ತಿದೆ. ಿದರಿಂದ ಜನರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಬಹುದು. ಬಿಜೆಪಿ ಸೈದ್ಧಾಂತಿಕವಾಗಿ ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭಾದ ಶಾಖೆಯಾಗಿದ್ದು, ಈ ಬಗ್ಗೆ ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com