ಚುನಾವಣೆ: ಬಂದೂಕು ವಶದಲ್ಲಿ ಇರಿಸುವಂತೆ ಪೊಲೀಸರ ಸೂಚನೆ; ಪರವಾನಗಿ ಪಡೆದ ರಿವಾಲ್ವರ್ ಕಳ್ಳತನವಾಗಿದೆ ಎಂದ ಉದ್ಯಮಿ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಂದೂಕು ಹೊಂದಿರುವವರು ಕಡ್ಡಾಯವಾಗಿ ಪೊಲೀಸ್ ಠಾಣೆಯ ವಶದಲ್ಲಿ ಇರಿಸಬೇಕು. 55 ವರ್ಷದ ಉದ್ಯಮಿಯೊಬ್ಬರು ತಮ್ಮ ಬಂದೂಕನ್ನು ವಶಕ್ಕೆ ನೀಡುವಂತೆ ಪೊಲೀಸರು ಕೇಳಿದಾಗ, ಅವರ ಪರವಾನಗಿ ಪಡೆದ ರಿವಾಲ್ವರ್ ಕಳ್ಳತನವಾಗಿರುವುದನ್ನು ಕಂಡು ಆಘಾತಕ್ಕೊಳಗಾದರು.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಂದೂಕು ಹೊಂದಿರುವವರು ಕಡ್ಡಾಯವಾಗಿ ಪೊಲೀಸ್ ಠಾಣೆಯ ವಶದಲ್ಲಿ ಇರಿಸಬೇಕು. 55 ವರ್ಷದ ಉದ್ಯಮಿಯೊಬ್ಬರು ತಮ್ಮ ಬಂದೂಕನ್ನು ವಶಕ್ಕೆ ನೀಡುವಂತೆ ಪೊಲೀಸರು ಕೇಳಿದಾಗ, ಅವರ ಪರವಾನಗಿ ಪಡೆದ ರಿವಾಲ್ವರ್ ಕಳ್ಳತನವಾಗಿರುವುದನ್ನು ಕಂಡು ಆಘಾತಕ್ಕೊಳಗಾದರು.

ಕೋರಮಂಗಲದಲ್ಲಿ ನೆಲೆಸಿರುವ ಉದ್ಯಮಿ ಬಿ ಬವದೀಪ್ ರೆಡ್ಡಿ ಅವರು ಸುಮಾರು 1.25 ಲಕ್ಷ ರೂ. ಮೌಲ್ಯದ NP BORE .32 ಜರ್ಮನ್ ನಿರ್ಮಿತ ರಿವಾಲ್ವರ್ ಅನ್ನು ಹೊಂದಿದ್ದಾರೆ. ಗನ್ ಹೊಂದಲು 2015ರ ಆಗಸ್ಟ್‌ ತಿಂಗಳಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಿಂದ ಅನುಮತಿ ಪಡೆದಿದ್ದ ಅವರು, ಅಂದಿನಿಂದ ಗನ್ ಲೈಸೆನ್ಸ್ ನವೀಕರಿಸುತ್ತಿದ್ದರು. ಅವರು ಆ ವೇಳೆ ಬಸವನಗುಡಿಯಲ್ಲಿ ವಾಸಿಸುತ್ತಿದ್ದು. ಬಳಿಕ 2016 ರಲ್ಲಿ ಕೋರಮಂಗಲ 3ನೇ ಬ್ಲಾಕ್‌ಗೆ ಸ್ಥಳಾಂತರಗೊಂಡಿದ್ದರು.

ರಿವಾಲ್ವರ್ ಕಳೆದುಕೊಂಡ ರೆಡ್ಡಿ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಗಸ್ಟ್ 2021ರಲ್ಲಿ ಅವರು ತಮ್ಮ ನಿವಾಸದಲ್ಲಿ ಸ್ನಾನಗೃಹವನ್ನು ನವೀಕರಣ ಮಾಡುವಾಗ ತಮ್ಮ ಬಂದೂಕನ್ನು ಕಳೆದುಕೊಂಡಿರುವುದಾಗಿ ಶಂಕಿಸಿದ್ದಾರೆ.

ಬಸವನಗುಡಿ ಪೊಲೀಸರಿಂದ ರೆಡ್ಡಿಗೆ ಕರೆ ಬಂದಿದ್ದು, ರಿವಾಲ್ವರ್ ಅನ್ನು ಪೊಲೀಸ್ ವಶದಲ್ಲಿ ಇರಿಸುವಂತೆ ಕೇಳಿದ್ದಾರೆ. ಇಡೀ ಮನೆಯಲ್ಲಿ ಹುಡುಕಾಡಿದಾಗ ಅದು ಕಾಣೆಯಾಗಿರುವುದನ್ನು ಅರಿತು ತನ್ನ ತಾಯಿ, ಹೆಂಡತಿ ಮತ್ತು ಇತರ ಕುಟುಂಬ ಸದಸ್ಯರನ್ನು ಸಹ ವಿಚಾರಿಸಿದ್ದಾರೆ. ತನ್ನ ಮನೆಯ ಸ್ನಾನಗೃಹವನ್ನು ನವೀಕರಿಸಲು ಕೂಲಿಗೆಂದು ಬಂದಿದ್ದ ನಾಲ್ವರು ಕಾರ್ಮಿಕರು ಭಾಗಿಯಾಗಿರುವ ಶಂಕೆಯಿಂದ ಅವರು ದೂರು ದಾಖಲಿಸಿದ್ದಾರೆ.

'ಈ ಹಿಂದೆ ಬಂದೂಕು ಪರವಾನಗಿ ಪಡೆದಾಗ ಬಸವನಗುಡಿಯ ಆರ್‌ವಿ ರಸ್ತೆಯಲ್ಲಿ ತಂಗಿದ್ದೆ' ಎಂದು ದೂರುದಾರರು ಹೇಳಿಕೊಂಡಿದ್ದಾರೆ. 

'ಮತದಾನದ ವೇಳೆ ಬಂದೂಕನ್ನು ಬಸವನಗುಡಿ ಪೊಲೀಸ್ ಠಾಣೆಯ ವಶದಲ್ಲಿ ಇರಿಸಬೇಕು. ಅವರು ಆಗಸ್ಟ್ 2015 ರಲ್ಲಿ ಆತ್ಮರಕ್ಷಣೆಗಾಗಿ ಪರವಾನಗಿ ಪಡೆದಿದ್ದರು. ಅಂದಿನಿಂದ, ಅವರು ಅದನ್ನು ನವೀಕರಿಸುವ ಮೂಲಕ ಪರವಾನಗಿ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸುತ್ತಿದ್ದಾರೆ' ಎಂದು ಅಧಿಕಾರಿಯೊಬ್ಬರು ಹೇಳಿದರು.

ರೆಡ್ಡಿ 1996 ರಿಂದ 2016 ರವರೆಗೆ ಬಸವನಗುಡಿಯಲ್ಲಿ ತಂಗಿದ್ದರು ಮತ್ತು ನಂತರ ಕೋರಮಂಗಲಕ್ಕೆ ಸ್ಥಳಾಂತರಗೊಂಡರು ಎಂಬುದನ್ನು ಗಮನಿಸಬೇಕು. 2020ರಲ್ಲಿ ಸಾಂಕ್ರಾಮಿಕ ರೋಗದಿಂದ, ಅವರು ಅದನ್ನು ತಮ್ಮ ಮಲಗುವ ಕೋಣೆಯ ಬೀರುವಿನಲ್ಲಿ ಇಟ್ಟುಕೊಂಡಿದ್ದರು.

ರೆಡ್ಡಿಯವರ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 380 ರ ಅಡಿಯಲ್ಲಿ ಕಳ್ಳತನದ ಪ್ರಕರಣವನ್ನು ದಾಖಲಿಸಲಾಗಿದೆ. ಬಂದೂಕನ್ನು ಕಳೆದುಕೊಳ್ಳಲು ದೂರುದಾರರ ಸಂಪೂರ್ಣ ನಿರ್ಲಕ್ಷ್ಯವೇ ಕಾರಣ ಎಂದು ಅಧಿಕಾರಿ ಹೇಳಿದರು. ಈ ಸಂಬಂಧ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com