ಸೋನಿಯಾ ಸೂಚನೆ ಮೇರೆಗೆ ಖರ್ಗೆ ಪ್ರಧಾನಿ ಮೋದಿಯನ್ನು ನಿಂದಿಸಿದ್ದಾರೆ: ಸ್ಮೃತಿ ಇರಾನಿ

ಕಾಂಗ್ರೆಸ್ ನಾಯಕಿ ಸೋನಿಯಾ ಸೂಚನೆ ಮೇರೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ‘ವಿಷಪೂರಿತ ಹಾವು’ ಎಂದು ನಿಂದಿಸಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಸ್ಮೃತಿ ಇರಾನಿ
ಸ್ಮೃತಿ ಇರಾನಿ

ಬೆಳಗಾವಿ: ಕಾಂಗ್ರೆಸ್ ನಾಯಕಿ ಸೋನಿಯಾ ಸೂಚನೆ ಮೇರೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ‘ವಿಷಪೂರಿತ ಹಾವು’ ಎಂದು ನಿಂದಿಸಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಪರದ ಪ್ರಚಾರದ ವೇಳೆ ಮಾತನಾಡಿರುವ ಅವರು, ಕಾಂಗ್ರೆಸ್ ನಾಚಿಕೆಗೇಡಿನ ಪಕ್ಷವಾಗಿದ್ದು, ಮೋದಿಯವರ 100 ವರ್ಷದ ತಾಯಿಗೂ ಅವಮಾನ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

'ಕಾಂಗ್ರೆಸ್‌ನ ದಲಿತ ನಾಯಕರನ್ನು ರಾಹುಲ್ ಗಾಂಧಿ ಅವರ ಪಾದರಕ್ಷೆ ಹಿಡಿದುಕೊಂಡು ಹೋಗುವಂತೆ ಮಾಡಲಾಗಿದೆ ಎಂಬುದನ್ನು ಖರ್ಗೆ ತಿಳಿದುಕೊಳ್ಳಬೇಕು. ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದಾಗ, ಕಾಂಗ್ರೆಸ್ ನಾಯಕರು ಅವರ ಬಗ್ಗೆ ಅಸಭ್ಯ ಟೀಕೆಗಳನ್ನು ಮಾಡಿದ್ದರು.

"ಗಾಂಧಿ ಕುಟುಂಬವು ಮೋದಿಯವರ ನಿಧನಕ್ಕಾಗಿ ಪ್ರಾರ್ಥಿಸಬಹುದು, ಆದರೆ, ರಾಜ್ಯದ ಜನರು ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ, ನಾವೆಲ್ಲರೂ ಮೋದಿಯವರ ಕೈ ಬಲಪಡಿಸಲು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಪಣ ತೊಡಬೇಕು ಎಂದು ಕರೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com