ಟೆಲಿಗ್ರಾಂ ಮೂಲಕ ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ದಂಧೆ; ಮತಾಂತರಗೊಳ್ಳುವಂತೆ ಬೆದರಿಸುತ್ತಿದ್ದ ಗ್ಯಾಂಗ್ ಬಂಧನ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂದು ಖತರ್ನಾಕ್ ಹನಿಟ್ರ್ಯಾಪ್ ದಂಧೆಯೊಂದು ಶುರುವಾಗಿದ್ದು, ಟೆಲಿಗ್ರಾಂ ಮೂಲಕ ಯುವಕರನ್ನ ಬಲೆಗೆ ಬೀಳಿಸಿಕೊಂಡು, ಮತಾಂತರಗೊಳ್ಳುವಂತೆ ಬೆದರಿಕೆ ಹಾಕುತ್ತಿದ್ದ ಗ್ಯಾಂಗ್'ವೊಂದನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂದು ಖತರ್ನಾಕ್ ಹನಿಟ್ರ್ಯಾಪ್ ದಂಧೆಯೊಂದು ಶುರುವಾಗಿದ್ದು, ಟೆಲಿಗ್ರಾಂ ಮೂಲಕ ಯುವಕರನ್ನ ಬಲೆಗೆ ಬೀಳಿಸಿಕೊಂಡು, ಮತಾಂತರಗೊಳ್ಳುವಂತೆ ಬೆದರಿಕೆ ಹಾಕುತ್ತಿದ್ದ ಗ್ಯಾಂಗ್'ವೊಂದನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್ ಮತ್ತು ಯಾಸೀನ್ ಎಂದು ಗುರ್ತಿಸಲಾಗಿದೆ. ಪ್ರಕರಣ ಸಂಬಂಧ ಮುಂಬೈನ ಮಾಡೆಲ್ ನೇಹಾ ಅಕಾ ಮೆಹರ್ ಮತ್ತು ಮತ್ತೋರ್ವ ಆರೋಪಿ ನದೀಮ್ ಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಆರೋಪಿಗಳು ಮುಂಬೈ ಮೂಲಕ ಮಾಡೆಲ್ ನೇಹಾ ಫೋಟೋ ಡಿಪಿ ಬಳಸಿಕೊಂಡು ಟೆಲಿಗ್ರಾಂನಲ್ಲಿ ಚಾಟಿಂಗ್ ಶುರು ಮಾಡುತ್ತಿದ್ದರು. ನನ್ನ ಗಂಡ ದುಬೈನಲ್ಲಿದ್ದಾನೆ. ನಾನು ಒಬ್ಬಳೇ ಮನೆಯಲ್ಲಿದ್ದೇನೆಂದು ಹೇಳಿ, ಯುವಕರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದರು.

ಯುವಕ ಬಲೆಗೆ ಬೀಳುತ್ತಿದ್ದಂತೆಯೇ ಮಾಡೆಲ್ ನನ್ನು ನಗರಕ್ಕೆ ಕರೆಸಿಕೊಳ್ಳುತ್ತಿದ್ದ ಆರೋಪಿಗಳು, ಮಾಡೆಲ್ ಇರುವ ರೂಮಿಗೆ ಯುವಕ ಬರುವಂತೆ ಮಾಡುತ್ತಾರೆ. ನಂತರ ಮೂವರು ಆರೋಪಿಗಳು ರೂಮಿಗೆ ನುಗ್ಗಿ. ಯುವಕನಿಗೆ ಬೆದರಿಕೆ ಹಾಗೂ ಯುವತಿಯ ಜೊತೆಗೆ ಬೆತ್ತಲೆಯಾಗಿ ನಿಲ್ಲಿಸಿ ಫೋಟೋ ತೆಗೆದು, ಆತನ ಬಳಿಯಿರುವ ಚಿನ್ನಾಭರಣ, ಮೊಬೈಲ್, ಪರ್ಸ್ ಕಸಿದುಕೊಂಡು ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಡುತ್ತಾರೆ. ಒಂದು ವೇಳೆ ಯುವಕನ ಬಳಿ ಹಣವಿಲ್ಲವೆಂದು ತಿಳಿದು ಬಂದರೆ, ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದರು.

ಈ ಸಂಬಂಧ ಯುವಕನೋರ್ವ ದೂರು ನೀಡಿದ ಬಳಿಕ, ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣದ ಪ್ರಾಥಮಿಕ ತನಿಖೆಯ ಅನ್ವಯ, ಆರೋಪಿಗಳು ಈ ವರೆಗು 12 ಮಂದಿಯನ್ನು ಸುಲಿಗೆ ಮಾಡಿದ್ದಾರೆಂದು ತಿಳಿದುಬಂದಿದೆ.

ಈ ಗ್ಯಾಂಗ್ ಇನ್ನಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆಗಳು ವ್ಯಕ್ತವಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com