ಮಂಗಳೂರು: ನೆರೆಮನೆಯಲ್ಲಿ ಮಹಿಳೆ ಸ್ನಾನ ಮಾಡುತ್ತಿದ್ದುದ್ದನ್ನು ಚಿತ್ರೀಕರಿಸಿದ ಸಂಘಪರಿವಾರದ ಕಾರ್ಯಕರ್ತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸುಮಂತ್ ಪೂಜಾರಿ (22) ಬಂಧಿತ ಆರೋಪಿಯಾಗಿದ್ದು, ಬುಧವಾರ ರಾತ್ರಿ 11 ಗಂಟೆ ವೇಳೆಯಲ್ಲಿ ಮಹಿಳೆ ತನ್ನ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಮೊಬೈಲ್ ಕಾಮರಾದಲ್ಲಿ ಚಿತ್ರೀಕರಣವಾಗುತ್ತಿದ್ದುದ್ದನ್ನು ಗಮನಿಸಿ ಕೂಗಿಕೊಂಡಿದ್ದಾರೆ.
ಪಕ್ಷಿಕೆರೆಯ ಹೊಸಕಾಡು ನಿವಾಸಿಯಾಗಿರುವ ಸುಮಂತ್ ಹಿಂದೂ ಜಾಗರಣ ವೇದಿಕೆಯ ಪಕ್ಷಿಕೆರೆ ವಿಭಾಗದ ಸಕ್ರಿಯ ಸದಸ್ಯನಾಗಿದ್ದಾನೆ ಎಂದು ತಿಳಿದುಬಂದಿದೆ. ತನಿಖೆ ವೇಳೆ, ಬಂಧಿತ ಆರೋಪಿಯ ಮೊಬೈಲ್ ನಲ್ಲಿ ಹಲವು ಹಲವಾರು ಅಶ್ಲೀಲ ವೀಡಿಯೊಗಳು ಮತ್ತು ಫೋಟೋಗಳು ಪತ್ತೆಯಾಗಿವೆ.
ಆತನ ಆಪ್ತರು 50,000 ರೂಪಾಯಿ ಶೂರಿಟಿ ಬಾಂಡ್ ನೀಡಿದ ಬಳಿಕ ಸುಮಂತ್ ನನ್ನು ಪೊಲೀಸ್ ಠಾಣೆಯಿಂದ ಬಿಡುಗಡೆ ಮಾಡಲಾಗಿದೆ.
Advertisement