ಇನ್ಫೋಸಿಸ್ ನಿರ್ಮಿಸಿದ್ದ 'ಹೃದಯ ಚಿಕಿತ್ಸಾ ಕೇಂದ್ರ' ಕಾರ್ಯಾರಂಭ ವಿಳಂಬ: ಬಿಜೆಪಿ ವಿರುದ್ಧ ಸಚಿವರ ಆರೋಪ

ಬೆಂಗಳೂರು ಪೂರ್ವ ವಲಯದ ಜನತೆಯ ಅಗತ್ಯತೆಗಳನ್ನು ಪೂರೈಸಲು ಹಾಗೂ ಜಯದೇವ ಆಸ್ಪತ್ರೆಯ ಹೊರೆಯ್ನು ಕಡಿಮೆ ಮಾಡುವ ಉದ್ದೇಶದಿಂದ ಇನ್ಫೋಸಿಸ್ ಸಂಸ್ಥೆ ಚರಕ ಆಸ್ಪತ್ರೆಯಲ್ಲಿ ನಿರ್ಮಿಸಿದ್ದ ಹೃದಯ ಚಿಕಿತ್ಸಾ ಕೇಂದ್ರ' ಇನ್ನೂ ಕಾರ್ಯಾರಂಭಗೊಂಡಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ಪೂರ್ವ ವಲಯದ ಜನತೆಯ ಅಗತ್ಯತೆಗಳನ್ನು ಪೂರೈಸಲು ಹಾಗೂ ಜಯದೇವ ಆಸ್ಪತ್ರೆಯ ಹೊರೆಯ್ನು ಕಡಿಮೆ ಮಾಡುವ ಉದ್ದೇಶದಿಂದ ಇನ್ಫೋಸಿಸ್ ಸಂಸ್ಥೆ ಚರಕ ಆಸ್ಪತ್ರೆಯಲ್ಲಿ ನಿರ್ಮಿಸಿದ್ದ ಹೃದಯ ಚಿಕಿತ್ಸಾ ಕೇಂದ್ರ' ಇನ್ನೂ ಕಾರ್ಯಾರಂಭಗೊಂಡಿಲ್ಲ.

ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿ ರುವ ಚರಕ ಆಸ್ಪತ್ರೆಯಲ್ಲಿ 2020ರಲ್ಲಿ 10.50 ಕೋಟಿ ರೂಪಾಯಿ ವೆಚ್ಚದಲ್ಲಿ 140 ಹಾಸಿಗೆಗಳುಳ್ಳ ಹೃದಯ ಚಿಕಿತ್ಸಾ ಕೇಂದ್ರ ವನ್ನು ಇನ್ಫೋಸಿಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ಈ ಕೇಂದ್ರದಲ್ಲಿ 2 ಆಪರೇಷನ್ ಥಿಯೇಟರ್ ಗಳು, ಒಂದು ಕ್ಯಾಥ್‌ಲ್ಯಾಬ್, ಹಾಸಿಗೆಗಳು ಮತ್ತು ಇತರ ಉಪಕರಣಗಳನ್ನು ಒದಗಿಸಿತ್ತು.

ಈ ಕೇಂದ್ರವನ್ನು ಕೋವಿಡ್ ಮೊದಲ ಮತ್ತು 2ನೇ ಅಲೆ ವೇಳೆ ಕೋವಿಡ್ ಚಿಕಿತ್ಸೆಗಾಗಿ ಬಳಕೆ ಮಾಡಿಕೊಳ್ಳಲಾಗಿತ್ತು. ಈ ವೇಳೆ ಕೋವಿಡ್ ರೋಗಿಗಳಿಗೆ ಹಾಸಿಗೆಗಳನ್ನು ಹಂಚಿಕೆ ಮಾಡಲಾಗುತ್ತಿತ್ತು. ಆದರೆ, ನಂತರ ಕಾಲ ಕಳೆದಂತೆ ಆಸ್ಪತ್ರೆಯ ಬಳಕೆ ಕಡಿಮೆಯಾಗ ತೊಡಗಿತು. ಇದೀಗ ಆಸ್ಪತ್ರೆಯಲ್ಲಿ ಯಾವುದೇ ಕಾರ್ಯ ಚಟುವಟಿಕೆಗಳೂ ನಡೆಯುತ್ತಿಲ್ಲ ಎಂದು ತಿಳಿದುಬಂದಿದೆ.

ಆಸ್ಪತ್ರೆಯ ಔಟ್ ಪೇಷಂಟ್ ವಿಭಾಗದಲ್ಲಿ ಪರ್ಯಾಯ ದಿನಗಳಲ್ಲಿ ಮನೋವೈದ್ಯರು 1 ಅಥವಾ 2 ಎರಡು ಕೊಠಡಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಆದರೆ, ಆಗಲೂ 10 ರೋಗಿಗಳೂ ಕೂಡ ಬರುವುದಿಲ್ಲ ಎಂದು ಭದ್ರತಾ ಸಿಬ್ಬಂದಿ ಹಾಗೂ ಶುಶ್ರೂಷಾ ಸಿಬ್ಬಂದಿಗಳು ಹೇಳಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಈ ಬೆಳವಣಿಗೆಗಳ ಬಗ್ಗೆ ತಿಳಿದೇ ಇದೆ. ಸಾರ್ವಜನಿಕರಿಗೆ ಆರೋಗ್ಯ ಮೂಲಸೌಕರ್ಯವನ್ನು ಬಳಸಿಕೊಳ್ಳುವಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅಸಮರ್ಥವಾಗಿತ್ತು ಎಂದು ಹೇಳಿದ್ದಾರೆ.

ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳುವುದಿಲ್ಲ. ಇರುವ ಸಿಬ್ಬಂದಿಗಳನ್ನೇ ಬಳಸಿಕೊಂಡು ಕೆಲವು ತಿಂಗಳುಗಳಲ್ಲೇ ಆಸ್ಪತ್ರೆ ಕಾರ್ಯಾರಂಭ ಮಾಡುವಂತೆ ಮಾಡುತ್ತೇವೆ. ಈ ವಿಚಾರ ಕುರಿತು ಇತ್ತೀಚೆಗಿನ ಸಂಪುಟ ಸಭೆಯಲ್ಲೂ ಚರ್ಚಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಕಮ್ ನಿರ್ದೇಶಕ ಡಾ ಮನೋಜ್ ಕುಮಾರ್ ಅವರು ಮಾತನಾಡಿ, 3-4 ತಿಂಗಳ ಬಳಿಕ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ದುಬಾರಿ ಉಪಕರಣಗಳ ಸ್ಥಾಪನೆ ಮಾಡಿದ್ದ ಹಿನ್ನೆಲೆಯಲ್ಲಿ ಸಂಬಂಧ ಪಟ್ಟಂತಹ ಸಂಸ್ಥೆಗಳು ಕಾಲಕಾಲಕ್ಕೆ ಬಂದು ಸರ್ವಿಸ್ ಮಾಡಿವೆ. ಹೀಗಾಗಿ ಉಪಕರಣಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರ ಹೊರತಾಗಿ ಸಿಟಿ ಸ್ಕ್ಯಾನ್, ಎಕ್ಸ್-ರೇ ಮತ್ತು ಇತರ ಸೌಲಭ್ಯಗಳನ್ನೂ ಆಸ್ಪತ್ರೆಯಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ. ಕಟ್ಟಡದಲ್ಲಿಯೂ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com