ಕುಡಿದ ಮತ್ತಿನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ: ಎಸ್‌ಯುವಿ ಕಸಿದು 45 ನಿಮಿಷ ಅಡ್ಡಾದಿಡ್ಡಿ ಚಲಾಯಿಸಿದ ದುಷ್ಕರ್ಮಿಗಳು!

ಪಾನಮತ್ತರಾಗಿದ್ದ ಇಬ್ಬರು ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಎಸ್‌ಯುವಿ ಕಸಿದುಕೊಂಡು 45 ನಿಮಿಷ ಅಡ್ಡಾದಿಡ್ಡಿ ಓಡಿಸಿ, ಹಣ ಕಸಿದುಕೊಂಡು ಪರಾರಿಯಾಗಿರುವ ಘಟನೆಯೊಂದು ಇಂದಿರಾನಗರ ಮುಖ್ಯರಸ್ತೆಯಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪಾನಮತ್ತರಾಗಿದ್ದ ಇಬ್ಬರು ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಎಸ್‌ಯುವಿ ಕಸಿದುಕೊಂಡು 45 ನಿಮಿಷ ಅಡ್ಡಾದಿಡ್ಡಿ ಓಡಿಸಿ, ಹಣ ಕಸಿದುಕೊಂಡು ಪರಾರಿಯಾಗಿರುವ ಘಟನೆಯೊಂದು ಇಂದಿರಾನಗರ ಮುಖ್ಯರಸ್ತೆಯಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಂಕಿತ್ ಬುಬ್ನಾ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ತಮ್ಮ ಕಾರಿಗೆ ಡಿಕ್ಕಿ ಹೊಡೆದೆ, ಹಾರ್ನ್ ಮಾಡಿದೆ ಎಂದು ಹೇಳಿ ದಾಳಿಕೋರರು ಮಾತಿನ ಚಕಮಕಿ ನಡೆಸಿದರು. ಕಾರಿಗೆ ಡಿಕ್ಕಿ ಹೊಡೆದಿದ್ದರೆ ಪೊಲೀಸರಿಗೆ ದೂರು ನೀಡಿ ಎಂದು ಹೇಳಿದೆ. ಆದರೆ, ನನ್ನ ಮಾತನ್ನು ಕೇಳದೆ, ಮಾತಿನ ಚಕಮಕಿ ಮುಂದುವರೆಸಿದರು. ಈ ವೇಳೆ ನಾನು ಕಾರನ್ನು ತೆಗೆದುಕೊಂಡು ಮುಂದಕ್ಕೆ ಸಾಗಿದೆ. ಆದರೆ, ದಾಳಿಕೋರರು ನನ್ನನ್ನು ಹಿಂಬಾಲಿಸಿಕೊಂಡು ಬಂದರು, ಸಿಗ್ನಲ್ ಇದ್ದ ಕಾರಣ ಕಾರನ್ನು ನಿಲ್ಲಿಸಲೇಬೇಕಾಯಿತು.

ಈ ವೇಳೆ ದುಷ್ಕರ್ಮಿಗಳು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದರು. ಅಲ್ಲದೆ, ಕಾರಿನ ಡೋರ್ ಓಪನ್ ಮಾಡಿಸಿ, ಬಾಟಲ್ ಗಳನ್ನು ನನ್ನ ಮುಖ ಹಾಗೂ ತಲೆಯ ಮೇಲೆ ಎಸೆದರು. ಬಳಿಕ ನನ್ನನ್ನು ಬದಿಗೆ ತಳ್ಳಿ, ನನ್ನ ಕಾರನ್ನು ಚಲಾಯಿಸಿದರು. ಇಬ್ಬರು ದುಷ್ಕರ್ಮಿಗಳು ಎಸ್'ಯುವಿಯನ್ನು ಚಲಾಯಿಸಿದರೆ, ಮತ್ತೊಂದು ಕಾರನ್ನು ಮತ್ತಿಬ್ಬರು ಆರೋಪಿಗಳು ಚಲಾಯಿಸಿದರು. ಓರ್ವ ಆರೋಪಿ ನನ್ನ ಫೋನ್ ಕಸಿದುಕೊಂಡು, ಗ್ಯಾಲರಿಗೆ ಹೋಗಿ ಸುಂದರ ಮಹಿಳೆಯರ ಕುರಿತು ಮಾಹಿತಿಗಳನ್ನು ಕೇಳುತ್ತಿದ್ದ. ಬಳಿಕ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳಿದರು.

ನನ್ನ ಖಾತೆಯಲ್ಲಿದ್ದ 31,000 ಹಣವನ್ನು ಎರಡು ಖಾತೆಗಳಿಗೆ ರೂ.25,000 ಮತ್ತು ರೂ.6,000ರಂತೆ ವರ್ಗಾಯಿಸಿಕೊಂಡರು. ಅಲ್ಲದೆ, ಪೊಲೀಸರಿಗೆ ದೂರು ನೀಡಿದರೆ ಮನೆಗೆ ನುಗ್ಗಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದರು. ರಾತ್ರಿ 9.30ರ ಸುಮಾರಿಗೆ ಕಸ್ತೂರಿನಗರದ ಸರ್ವಿಸ್ ರಸ್ತೆಯಲ್ಲಿ ಕಾರು ಬಿಟ್ಟು ಹೋದರು.

ಘಟನೆಯಿಂದ ತೀವ್ರವಾಗಿ ಭಯಭೀತನಾಗಿದ್ದೆ. ಹೀಗಾಗಿ ಭಾನುವಾರ ರಾತ್ರಿ ದೂರು ನೀಡಲಿಲ್ಲ. ಸ್ನೇಹಿತರೊಂದಿಗೆ ನಡೆದ ವಿಚಾರ ತಿಳಿಸಿದಾಗ ದೂರು ನೀಡುವಂತೆ ಧೈರ್ಯ ಹೇಳಿದರು. ಬಳಿಕ ರಾಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಬುಬ್ನಾ ಅವರು ಹೇಳಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಆರೋಪಿಗಳ ಪತ್ತೆಗಾಗಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ ಆರೋಪಿಗಳು ಹಣ ವರ್ಗಾವಣೆ ಮಾಡಿಕೊಡ ಖಾತೆಯ ವಿವರಗಳನ್ನೂ ಸಂಗ್ರಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com