ಕೊಪ್ಪಳ: ಜಮೀನು ವಿವಾದ, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಪತಿಗೆ ಥಳಿತ!

ಜಮೀನು ವಿವಾದ ಸಂಬಂಧ ಗುಂಪೊಂದು 46 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಆಕೆಯ ಪತಿಯನ್ನು ಥಳಿಸಿರುವ ಆಘಾತಕಾರಿ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿದೆ. ಜುಲೈ 25 ರಂದು ಈ ಘಟನೆ ನಡೆದಿದ್ದು,  16 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆರೋಪಿಗಳಲ್ಲಿ ಹಲವರು ಮಹಿಳೆಯ ಸಂಬಂಧಿಕರಾಗಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ಜಮೀನು ವಿವಾದ ಸಂಬಂಧ ಗುಂಪೊಂದು 46 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಆಕೆಯ ಪತಿಯನ್ನು ಥಳಿಸಿರುವ ಆಘಾತಕಾರಿ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿದೆ. ಜುಲೈ 25 ರಂದು ಈ ಘಟನೆ ನಡೆದಿದ್ದು,  16 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆರೋಪಿಗಳಲ್ಲಿ ಹಲವರು ಮಹಿಳೆಯ ಸಂಬಂಧಿಕರಾಗಿದ್ದಾರೆ. 

ಸಂತ್ರಸ್ತರ ಕುಟುಂಬ ಸದಸ್ಯರು ಆಗಸ್ಟ್ 8 ರಂದು ನೀಡಿದ ದೂರಿನ ಪ್ರಕಾರ, ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಗುಂಪು ಅವರ ಮೇಲೆ ದಾಳಿ ಮಾಡಿದೆ. ಆರೋಪಿಗಳು ತನ್ನನ್ನು ವಿವಸ್ತ್ರಗೊಳಿಸಿ, ತನ್ನ ಮೇಲಿನ ಹಲ್ಲೆಯ ವೀಡಿಯೊಗಳನ್ನು ಚಿತ್ರೀಕರಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ.  ನಂತರ ಆಕೆಯನ್ನು ಅರೆಬೆತ್ತಲೆಯಾಗಿ ರಸ್ತೆ ಬದಿ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹಾಡ ಹಾಗಲೇ ಈ ದಾಳಿ ನಡೆದಿದೆ. 

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಹಿಳೆ ಮತ್ತು ಆಕೆಯ ಕುಟುಂಬಸ್ಥರು, ವಾರದ ಹಿಂದೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.ವೀಡಿಯೋ ವೈರಲ್ ಆದ ನಂತರ ಗ್ರಾಮದ ಜನರು ಆಘಾತಕ್ಕೊಳಗಾಗಿದ್ದಾರೆ, ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತೇವೆ,  ನ್ಯಾಯ ದೊರಕಿಸಿಕೊಡುವಂತೆ ಸಂಬಂಧಪಟ್ಟ ಸಚಿವರಲ್ಲಿ ಮನವಿ ಮಾಡುತ್ತೇವೆ, ಇಂತಹ ಅವಮಾನದಿಂದ ನಾವು ಗ್ರಾಮದಲ್ಲಿ ಹೇಗೆ ವಾಸಿಸುತ್ತೇವೆ  ಎಂದು ಸಂತ್ರಸ್ತೆಯ ಪತಿ ಹೇಳಿದರು.

ಗ್ರಾಮದಲ್ಲಿನ ತುಂಡು ಭೂಮಿಗೆ ಸಂಬಂಧಿಸಿದಂತೆ ಆರೋಪಿಗಳು ಮತ್ತು ದಂಪತಿ ನಡುವೆ ವಿವಾದವೇರ್ಪಟ್ಟಿತ್ತು. ಜಮೀನು ಸಾಗುವಳಿ ಮಾಡದಂತೆ ಆರೋಪಿಗಳು ದಂಪತಿಗೆ ಎಚ್ಚರಿಕೆ ನೀಡಿದ್ದರು. ಆದರೆ ಮಹಿಳೆ ಮತ್ತು ಆಕೆಯ ಪತಿ ಜಮೀನು ತಮಗೆ ಸೇರಿದ್ದು ಎಂದು ಹೇಳಿದ್ದರು ಎಂದು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ದೂರು ದಾಖಲಾದ ನಂತರ ಆರೋಪಿಗಳು ತಮ್ಮ ಗ್ರಾಮದಿಂದ ಪರಾರಿಯಾಗಿದ್ದು, ತನಿಖೆ ನಡೆಯುತ್ತಿದೆ ಎಂದು  ಗಂಗಾವತಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com