ನಗರದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಜ್ವರ: ಇದು ಸಾಮಾನ್ಯ ಜ್ವರದ ಹಾಗಲ್ಲ, ಜೀವಕ್ಕೆ ಕುತ್ತು ತರಬಹುದು... ಎಚ್ಚರ!

ಡೆಂಗ್ಯೂ ಜ್ವರವನ್ನು ಸಾಮಾನ್ಯ ಜ್ವರ ಎಂದು ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಇದರಿಂದ ನರಳುವುದು ಮಾತ್ರವಲ್ಲದೆ, ಉಸಿರು ಚೆಲ್ಲುವ ಸಾಧ್ಯತೆಗಳೂ ಕೂಡ ಹೆಚ್ಚಾಗಿರುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಡೆಂಗ್ಯೂ ಜ್ವರವನ್ನು ಸಾಮಾನ್ಯ ಜ್ವರ ಎಂದು ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಇದರಿಂದ ನರಳುವುದು ಮಾತ್ರವಲ್ಲದೆ, ಉಸಿರು ಚೆಲ್ಲುವ ಸಾಧ್ಯತೆಗಳೂ ಕೂಡ ಹೆಚ್ಚಾಗಿರುತ್ತದೆ.

ಬೇಸಿಗೆ ಕಾಲ ಹೋಗಿ ಮಳೆಗಾಲ ಬಂದರೆ ಪ್ರಕೃತಿಯಲ್ಲಿ ವಾತಾವರಣ ಸಂಪೂರ್ಣವಾಗಿ ಬದಲಾಗುತ್ತದೆ. ಈ ಸಂದರ್ಭದಲ್ಲಿ ಮನುಷ್ಯ ಇದಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಹೊರಗಿನ ವಾತಾವರಣ ಬದಲಾಗುವುದರಿಂದ ದೇಹದ ಒಳಗಿನ ತಾಪಮಾನ ಕೂಡ ಏರುಪೇರಾಗುತ್ತದೆ. ಇದರಿಂದಲೂ ಜ್ವರ ಬರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ. ಮೊದಲು ಕೇವಲ ಮಲೆನಾಡಿನ ಪ್ರದೇಶಗಳಲ್ಲಿ ಹರಡುತ್ತಿದ್ದ ಡೆಂಗ್ಯೂ ಈಗ ಎಲ್ಲಾ ಕಡೆ ಹರಡುತ್ತಿದೆ.

ಡೆಂಗೆ ಜ್ವರ ಪೀಡಿತರು ಶಾಕ್‌ ಸಿಂಡ್ರೋಮ್‌ ಮತ್ತು ಹೆಮರಾಜಿಕ್‌ (ರಕ್ತನಾಳ ಒಡೆದು ರಕ್ತ ಸೋರುವಿಕೆ) ಹಂತಕ್ಕೆ ತಲುಪಿದರೂ ಎಚ್ಚರವಹಿಸದಿದ್ದರೆ ಇವು ಜೀವಕ್ಕೆ ಕುತ್ತು ತರಲಿವೆ.

ಡೆಂಗ್ಯೂ ಜ್ವರ ಪೀಡಿತರು ಶಾಕ್‌ ಸಿಂಡ್ರೋಮ್‌ ಮತ್ತು ಹೆಮರಾಜಿಕ್‌ (ರಕ್ತನಾಳ ಒಡೆದು ರಕ್ತ ಸೋರುವಿಕೆ) ಹಂತಕ್ಕೆ ತಲುಪುವ ಸಾಧ್ಯತೆಗಳಿದ್ದು, ಈ ಹಂತದಲ್ಲಿ ಎಚ್ಚರವಹಿಸದಿದ್ದರೆ ಇವು ಜೀವಕ್ಕೆ ಕುತ್ತು ತರಲಿವೆ.

ನಗರದ 26 ವರ್ಷದ ಯುವತಿಯೊಬ್ಬಳು ಡೆಂಗ್ಯೂ ಹೆಮರಾಜಿಕ್ ಶಾಕ್'ಗೆ ಒಳಗಾಗಿ, ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವುದು ಪ್ರಕರಣವೊಂದು ನಗರದಲ್ಲಿ ವರದಿಯಾಗಿದೆ.

ಜುಲೈ ತಿಂಗಳಿನಲ್ಲಿ ಯುವತಿಗೆ ಡೆಂಗ್ಯೂ ಜ್ವರ ಕಾಳಿಸಿಕೊಂಡಿದೆ. ಪ್ಲೇಟ್ ಲೆಟ್ ಸಂಖ್ಯೆ 15,000ಕ್ಕೆ ಇಳಿದ ಪರಿಣಾಮ ಯುವತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಯುವತಿಗೆ ಜ್ವರ ಕಡಿಮೆಯಾಗಿದೆ. ನಂತರ ಪ್ಲೇಟ್ ಲೆಟ್ ಇಳಿಕೆ ಜೊತೆಗೆ ರಕ್ತದೊತ್ತಡ ಸಮಸ್ಯೆ ಕಂಡು ಬಂದಿದೆ. ಪ್ರಜ್ಞೆ ತಪ್ಪುವ ಸಮಸ್ಯೆ ಕೂಡ ಕಾಣಿಸಿಕೊಂಡಿದೆ. ಜೊತೆಗೆ ಬಾಯಿ ಮತ್ತು ಖಾಸಗಿ ಅಂಗಗಳಿಂದ ರಕ್ತಸ್ರಾವ ಶುರುವಾಗಿದೆ. ಈ ಹಂತದಲ್ಲಿ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆಗಳ ಪಡೆದುಕೊಳ್ಳುವುದು ಅತ್ಯಗತ್ಯವಿರುತ್ತದೆ.

ಸಮಸ್ಯೆ ಉಲ್ಭಣಗೊಳ್ಳುತ್ತಿದಂತೆಯೇ ಯುವತಿಯನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಯುವತಿಯಲ್ಲಿ ಡೆಂಗ್ಯೂ ಹೆಮರಾಜಿಕ್ ಶಾಕ್ ಮತ್ತು ಬಹು ಅಂಗಾಂಗ ವೈಫಲ್ಯ ಇರುವುದು ಪತ್ತೆಯಾಗಿದೆ.

ಇದು ಗಂಭೀರ ಹಂತವಾಗಿದೆ. ರಕ್ತನಾಳ ಒಡೆದು ರಕ್ತ ಸೋರುವಿಕೆಗೆ ಕಾರಣವಾಗಿರುತ್ತದೆ. ಇದರಿಂದ ಉಸಿರಾಟ ಸಮಸ್ಯೆ, ಕಡಿಮೆ ರಕ್ತದೊತ್ತಡ, ಕಿಬ್ಬೊಟ್ಟೆಯಲ್ಲಿ ನೋವಿನಂತರ ರೋಗಲಕ್ಷಣಗಳು ಕಂಡು ಬರುತ್ತವೆ. ಅಲ್ಲದೆ, ರಕ್ತಸ್ರಾವ, ಪಿತ್ತಜನಕಾಂಗದ ಹಾನಿ, ಹೃದಯದ ಸಮಸ್ಯೆಗಳೂ ಕಂಡು ಬರುತ್ತವೆ.

ಈ ಹಂತ ತಲುಪಿದ್ದ ಯುವತಿಯನ್ನು 2 ವಾರಗಳ ಕಾಲ ವೆಂಟಿಲೇಟರ್ ಸಪೋರ್ಟ್ ನಲ್ಲಿ ಇರಿಸಲಾಗಿತ್ತು. ನಂತರ ವೈದ್ಯರು ಆಕೆಗೆ ಟ್ರಾಕಿಯೊಸ್ಟೊಮಿ ಮತ್ತು ಅಂಗಾಂಗ ಕಸಿಯನ್ನು ಯಶಸ್ವಿಯಾಗಿ ನಡೆಸಿದರು. ಇದೀಗ ಯುವತಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ, ಸಂಪೂರ್ಣ ಶಕ್ತಿಯನ್ನು ಮರಳಿ ಪಡೆಯಲು 3 ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com