ಬೆಂಗಳೂರು: ಪುರುಷರೊಂದಿಗೆ ಲೈಂಗಿಕ ಸಂಬಂಧ, ಸಲಿಂಗಕಾಮಿ ಟೆಕ್ಕಿ ವಿರುದ್ಧ ಕಿರುಕುಳದ ದೂರು ದಾಖಲಿಸಿದ ಪತ್ನಿ!

ಟೆಕ್ಕಿ ಪತಿ ಸಲಿಂಗಕಾಮಿ ಮತ್ತು ಪುರುಷರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಸಾಫ್ಟ್‌ವೇರ್ ಇಂಜಿನಿಯರ್‌ನ ಪತ್ನಿ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ. ಎಂಬಿಎ ಪದವೀಧರೆಯಾಗಿರುವ ಪತ್ನಿ ಬೆಂಗಳೂರಿನ ಪ್ರತಿಷ್ಠಿತ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಟೆಕ್ಕಿ ಪತಿ ಸಲಿಂಗಕಾಮಿ ಮತ್ತು ಪುರುಷರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಸಾಫ್ಟ್‌ವೇರ್ ಇಂಜಿನಿಯರ್‌ನ ಪತ್ನಿ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ. ಎಂಬಿಎ ಪದವೀಧರೆಯಾಗಿರುವ ಪತ್ನಿ ಬೆಂಗಳೂರಿನ ಪ್ರತಿಷ್ಠಿತ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. 

ಆಕೆ 2020 ರಲ್ಲಿ ಆರೋಪಿಯನ್ನು ಮದುವೆಯಾಗಿದ್ದಳು. ಪತಿ ಮತ್ತು ಆತನ ತಂದೆ ತಾಯಿ ಕೆಲಸ ಬಿಡುವಂತೆ ಆಕೆಯನ್ನು ಒತ್ತಾಯಿಸುತ್ತಿದ್ದರು. ಮದುವೆಯಾಗಿ ಎರಡು ವರ್ಷವಾದರೂ ತನ್ನ ಮದುವೆ ಸುಖಕರವಾಗಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ. ಆರೋಪಿಯ ಸಹೋದರನಿಗೆ ಮದುವೆಯಾಗಿ ಒಂದು ವರ್ಷದ ಆದ ಮೇಲೆ ಮಗುವಾದ ನಂತರ ಆಕೆಯ ಕುಟುಂಬ ಮತ್ತು ಸಂಬಂಧಿಕರು ಮಕ್ಕಳ ಬಗ್ಗೆ ಆಕೆಯನ್ನು ಪ್ರಶ್ನಿಸುತ್ತಿದ್ದರು. ವೈವಾಹಿಕ ಜೀವನದಲ್ಲಿ ನಿರಾಸಕ್ತಿ ತೋರುತ್ತಿರುವ ಬಗ್ಗೆ ಪತಿಯನ್ನು ಪ್ರಶ್ನಿಸಿದಾಗ ಆರೋಪಿಗಳು ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಐವಿಎಫ್ ಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳುವಂತೆ ಹೇಳಿ ಆಕೆಯನ್ನು ದಾರಿ ತಪ್ಪಿಸಿ ಆಸ್ಪತ್ರೆಗೆ ಕರೆದೊಯ್ದಿದ್ದರು.ತನಗೆ ಹೊಂದಾಣಿಕೆ ಇಲ್ಲ ಎಂಬ ಭಾವನೆ ಮೂಡಿಸಲು ಆರೋಪಿಗಳು ಯತ್ನಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಇದರಿಂದ ಅನುಮಾನಗೊಂಡ ಪತ್ನಿ ಆರೋಪಿಯ ಫೋನ್ ಪರಿಶೀಲಿಸಿದಾಗ ಆತ ಇತರ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಫೋಟೋ ಹಾಗೂ ವಿಡಿಯೋ ಪತ್ತೆಯಾಗಿದೆ. ಇದನ್ನು ಕುರಿತು ವಿಚಾರಿಸಿದಾಗ ಆರೋಪಿಗಳು ಮಾನಸಿಕ ಮತ್ತು ದೈಹಿಕವಾಗಿ ಹಿಂಸಿಸಲು ಪ್ರಾರಂಭಿಸಿದರು ಎಂದು ಪತ್ನಿ ಆರೋಪಿಸಿದ್ದಾರೆ. ಪತಿಯ ಚಿತ್ರಹಿಂಸೆ ಸಹಿಸಲಾಗದೆ ಆಕೆ ಮತ್ತೆ ಪೋಷಕರ ಮನೆಗೆ ತೆರಳಿದ್ದಳು. ನಂತರ ಆರೋಪಿ ಪದೇ ಪದೇ ಆಕೆಗೆ ಮೆಸೇಜ್ ಮತ್ತು ಕರೆ ಮಾಡಲು ಪ್ರಾರಂಭಿಸಿದ್ದು, ಮತ್ತು ಇನ್ನು ಮುಂದೆ ಇಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮನವಿ ಮಾಡಿದ್ದಾನೆ. ತನ್ನ ಬಳಿಗೆ ಬರದಿದ್ದರೆ ಆತ್ಮಹತ್ಯೆ ಮಾಡಿ ಕೊಳ್ಳುವುದಾಗಿ  ಬೆದರಿಕೆ ಹಾಕಿದ್ದಾನೆ.

ಇಬ್ಬರ ನಡುವಿನ ಜಗಳವನ್ನು ಬಗೆಹರಿಸಲು ಕುಟುಂಬಸ್ಥರು ಪ್ರಯತ್ನಿಸಿದ್ದರು. ಆದರೆ ಪತ್ನಿ ಆತನೊಂದಿಗೆ ವಾಸಿಸಲು ಒಪ್ಪಿಲ್ಲ. ಟೆಕ್ಕಿ ಮತ್ತು ಅವರ ಪೋಷಕರ ವಿರುದ್ಧ ದೂರು ದಾಖಲಿಸಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com