ಕೆಎಸ್ ಆರ್ ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಅವಘಡ: ತನಿಖೆ ಪ್ರಗತಿಯಲ್ಲಿ, ಪೊಲೀಸರು ಹೇಳುವುದೇನು?

ರಾಜಧಾನಿ ಬೆಂಗಳೂರಿನ ಮಜೆಸ್ಟಿಕ್ ಪ್ರದೇಶದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಉದ್ಯಾನ್ ಎಕ್ಸ್ ಪ್ರೆಸ್ ರೈಲು ಸಂಖ್ಯೆ 11301 ರ ಬೋಗಿ 1 ಮತ್ತು 2ರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬೆಂಕಿಯನ್ನು ನಂದಿಸುವ ಕಾರ್ಯ
ಬೆಂಕಿಯನ್ನು ನಂದಿಸುವ ಕಾರ್ಯ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಜೆಸ್ಟಿಕ್ ಪ್ರದೇಶದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಉದ್ಯಾನ್ ಎಕ್ಸ್ ಪ್ರೆಸ್ ರೈಲು ಸಂಖ್ಯೆ 11301 ರ ಬೋಗಿ 1 ಮತ್ತು 2ರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸ್ಥಳಕ್ಕೆ ಶ್ವಾನದಳವನ್ನು ತರಿಸಿ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ರೈಲ್ವೆ ಇಲಾಖೆ ಪೊಲೀಸರು ಪೊಲೀಸ್ ಇಲಾಖೆ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ಈ ಬಗ್ಗೆ ತನಿಖೆ ಮಾಡುತ್ತದೆ. ಎಸಿ ಕೋಚ್ ಗೆ ಬೆಂಕಿ ತಗುಲಿದ್ದು, ಇದು ಎಲೆಕ್ಟ್ರಿಕ್ ನಿಂದ ಬೆಂಕಿ ಹತ್ತಿಕೊಂಡಿದೆಯೇ ಅಥವಾ ಬೇರೆ ಸಿಗರೇಟ್ ಎಳೆದು ಯಾರಾದರೂ ಬಿಸಾಕಿದ್ದರಿಂದ ಆಗಿದೆಯೇ ಅಥವಾ ರೈಲಿನ ಎಂಜಿನ್ ನ ಆಂತರಿಕ ದೋಷದಿಂದ ಆಗಿದೆಯೇ ಎಂದು ತನಿಖೆ ಮಾಡಲಿದ್ದೇವೆ ಎಂದು ಎಡಿಜಿಪಿ ಹರಿಶೇಖರನ್ ಹೇಳಿದ್ದಾರೆ.

ರೈಲ್ವೆ ಎಸ್ಪಿ ಸುಮಲತಾ ಮಾಹಿತಿ ನೀಡಿ, ನಿಖರ ಕಾರಣ ದುರ್ಘಟನೆಗೆ ಇನ್ನೂ ಗೊತ್ತಾಗಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ ನಂತರ ಗೊತ್ತಾಗಲಿದೆ ಎಂದರು. ದುರ್ಘಟನೆಯಲ್ಲಿ ಒಂದು ಬೋಗಿಗೆ ಹಾನಿಯಾಗಿದೆ ಎಂದರು. 

ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿ ಮತ್ತು ರೈಲಲ್ಲಿದ್ದ ಸಿಬ್ಬಂದಿಯಿಂದ ಮಾಹಿತಿ ತಿಳಿದುಕೊಂಡು ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ತಿಳಿಸಿದರು. 

ಇದೇ ನಿಲ್ದಾಣದಲ್ಲಿ ರೈಲ್ವೆ ಇಲಾಖೆಯ ಉದ್ಯೋಗಿಯಾಗಿರುವ ಮಹಿಳೆ ಹೇಳುವ ಪ್ರಕಾರ ರೈಲು ಇಂದು ನಿಗದಿತ ಸಮಯಕ್ಕಿಂತ ಮೊದಲೇ ಬೆಂಗಳೂರು ನಗರಕ್ಕೆ ಆಗಮಿಸಿದೆ. ಪ್ರಯಾಣಿಕರೆಲ್ಲ ಇಳಿದ ಬಳಿಕ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಲಾಗಿದೆಯಾದರೂ ಫೈರ್ ಎಂಜಿನ್ ಸ್ಥಳಕ್ಕೆ ತಲುಪುವುದು ಕೊಚ ತಡವಾಗಿದ್ದರಿಂದ ಬೋಗಿಯಿಡೀ ಹತ್ತಿಕೊಂಡು ಉರಿಯಲಾರಂಭಿಸಿತು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಮೊದಲು ನಿಲ್ದಾಣದಲ್ಲಿದ್ದ ರೈಲು  ಸಿಬ್ಬಂದಿ ಮತ್ತು ಬೇರೆ ಜನರು ಬಕೆಟ್ ಗಳಿಂದ ನೀರು ಎಸೆದು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಬೆಂಕಿ ಅರಿದ ಬಳಿಕ ಪ್ಲಾಟ್ ಫಾರ್ಮ್ ನ್ನು ಹೊಗೆ ಆವರಿಸಿಕೊಂಡಿತು ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com