'ಬಂಡೀಪುರ ಯುವ ಮಿತ್ರ' ಕಾರ್ಯಕ್ರಮಕ್ಕೆ ಅರಣ್ಯವಾಸಿಗಳಿಂದ ಉತ್ತಮ ಪ್ರತಿಕ್ರಿಯೆ

ಅರಣ್ಯ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ಬಂಡೀಪುರ ಯುವ ಮಿತ್ರ ಕಾರ್ಯಕ್ರಮಕ್ಕೆ ಅರಣ್ಯವಾಸಿಗಳಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅರಣ್ಯ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ಬಂಡೀಪುರ ಯುವ ಮಿತ್ರ ಕಾರ್ಯಕ್ರಮಕ್ಕೆ ಅರಣ್ಯವಾಸಿಗಳಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಅರಣ್ಯ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು, ಮಾನವ-ಪ್ರಾಣಿ ಸಂಘರ್ಷ ಮತ್ತು ಅತಿಕ್ರಮಣವನ್ನು ಕಡಿಮೆ ಮಾಡಲು ಸಲುವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಡೀಪುರ ಯುವ ಮಿತ್ರ ಕಾರ್ಯಕ್ರಮವನ್ನು ಆರಂಭಿಸಿದೆ. 72 ದಿನಗಳಿ ಹಿಂದೆ ಈ ಕಾರ್ಯಕ್ರಮ ಆರಂಭವಾಗಿದ್ದು, ಇದೂವರೆಗೆ 3,900 ಮಂದಿ ಪಾಲ್ಗೊಂಡಿದ್ದಾರೆಂದು ತಿಳಿದುಬಂದಿದೆ.

ಈ ಕಾರ್ಯಕ್ರಮವು ಒಂದು ದಿನದ ಕಾರ್ಯಾಗಾರವಾಗಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗೆ 3 ಗಂಟೆಗಳ ಸಮಿನಾರ್ ಮತ್ತು ಮೂರು ಗಂಟೆಗಳ ಕ್ಷೇತ್ರ ಭೇಟಿ ಹಾಗೂ ಸಫಾರಿಗೆ ಕರೆದುಕೊಂಡು ಹೋಗಲಾಗುತ್ತದೆ. ದಿನದ ಅಂತ್ಯದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ರಸಪ್ರಶ್ನೆಗಳನ್ನು ನಡೆಸಲಾಗುತ್ತದೆ. ನಂತರ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಬಿಟಿಆರ್ ನಿರ್ದೇಶಕ ರಮೇಶ್ ಕುಮಾರ್ ಪಿ ಅವರು ಹೇಳಿದ್ದಾರೆ.

ಕಾರ್ಯಕ್ರಮದಿಂದ ಅರಣ್ಯದ ಸುತ್ತಮುತ್ತ ಇರುವ ಶೇ.90ರಷ್ಟು ಜನರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ (ಬಿಟಿಆರ್‌) ಅಥವಾ ಜಂಗಲ್‌ ಸಫಾರಿಗೆ ಹೋಗಿಲ್ಲ ಎಂಬುದು ತಿಳಿದುಬಂದಿದೆ.

ಅರಣ್ಯದ ಸುತ್ತಮುತ್ತಿನ ಚಾಮರಾಜನಗರ, ಗುಂಡ್ಲುಪೇಟೆ, ನಂಜನಗೂಡು ಮತ್ತು ಸರಗು ಸೇರಿದಂತೆ 5 ತಾಲೂಗಳ ನಿವಾಸಿಗಳನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಇತರೆ ಆಸಕ್ತರು ಕೂಡ ಭಾಗವಹಿಸಬಹುದು. ಸೆಮಿನಾರ್ ನಲ್ಲಿ ಶೇ.90ರಷ್ಟು ಜನರು ಅರಣ್ಯಕ್ಕೆ ಹೋಗಿಲ್ಲ ಎಂಬುದು ತಿಳಿದುಬಂದಿದೆ. ಅರಣ್ಯದ ಸುತ್ತಮುತ್ತಲಿನ ಜನರು ಅರಣ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಹೀಗಾಗಿ ಅರಣ್ಯ ರಕ್ಷಣೆಯಲ್ಲಿ ಅವರ ಪಾತ್ರ, ಯಾವರ ರೀತಿಯಲ್ಲಿ ರಕ್ಷಣೆ ಮಾಡಬಹುದು ಎಂಬುದನ್ನು ತಿಳಿಸಲು ಕಾರ್ಯಕ್ರಮದ ಮೂಲಕ ಅರಣ್ಯದೊಳಗೆ ಅವರನ್ನು ಕರೆದೊಯ್ಯಲು ನಿರ್ಧರಿಸಲಾಯಿತು.

ಬಂಡೀಪುರದಲ್ಲಿ ಹುಲಿ, ಆನೆ ಮತ್ತು ಚಿರತೆಗಳ ಸಂಖ್ಯೆ ಹೆಚ್ಚಾಗಿದ್ದು, ಇವು ಪ್ರವಾಸಿಗರು, ಸರ್ಕಾರಿ ಅಧಿಕಾರಿಗಳು ಮತ್ತು ಸಂರಕ್ಷಣಾ ತಜ್ಞರ ಗಮನವನ್ನು ಸೆಳೆದಿದೆ. ಕಾರ್ಯಕ್ರಮದ ಮೂಲಕ ವಾರ್ಷಿಕ ಕನಿಷ್ಠ 15,000 ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ರಮವು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (UNDP) ಗಮನವನ್ನೂ ಸೆಳೆದಿದೆ. ಕಾರ್ಯಕ್ರಮವನ್ನು ಅವರು ಗುರುತಿಸಿದ್ದಾರೆ ಮತ್ತು ಕಾರ್ಯಕ್ರಮದ ಪಾಲುದಾರರಾಗಲು ಆಸಕ್ತಿ ತೋರಿಸಿದ್ದಾರೆ. ಅನೇಕ ಸರ್ಕಾರಿ ಶಾಲೆಗಳು ಇಲಾಖೆಯೊಂದಿಗೆ ಪಾಲುದಾರಿಕೆಗೆ ಆಸಕ್ತಿ ತೋರಿಸಿವೆ ಎಂದು ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com