
ಬೆಂಗಳೂರು: ಬೇಕರಿಯೊಂದಕ್ಕೆ ನುಗ್ಗಿದ ಮುಸುಕುಧಾರಿ ದುಷ್ಕರ್ಮಿಗಳ ತಂಡವೊಂದು, ದಾಂಧಲೆ ನಡೆಸಿರುವ ಘಟನೆಯೊಂದು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತುಂಗಾನಗರದಲ್ಲಿ ನಡೆದಿದೆ.
ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಬೇಕರಿ ಶ್ರೀ ಮಂಜುನಾಥ ಕೇಕ್ ಕಾರ್ನರ್ & ಸ್ವೀಟ್ಸ್ ಮೇಲೆ ನಾಲ್ವರು ದುಷ್ಕರ್ಮಿಗಳ ತಂಡ ದಾಳಿ ನಡೆದಿದೆ.
ಈ ವೇಳೆ ಕಲ್ಲು, ದೊಣ್ಣೆಗಳಿಂದ ಬೇಕರಿಯ ಶೋಕೇಸ್ ಒಡೆದು ಹಾಕಿದ್ದಾರೆ. ಆಹಾರ ಪದಾರ್ಥಗಳನ್ನು ನಾಶಪಡಿಸಿದ್ದಾರೆ. ಈ ವೇಳೆ ಬೇಕರಿ ಮಾಲೀಕ ಚಂದ್ರಶೇಖರ್ ಅವರು ತಡೆಯಲು ಯತ್ನ ನಡೆಸಿದ್ದರೂ, ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ದುಷ್ಕರ್ಮಿಗಳ ದಾಳಿಯಿಂದಾಗಿ ರೂ.30,000ರಿಂದ 35,000 ನಷ್ಟವಾಗಿದ್ದು, ಈ ಸಂಬಂಧ ಮಾಲೀಕ ಚಂದ್ರಶೇಖರ್ ಅವರು ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ಬಳಿಕ ಆರೋಪಿಗಳು ತರೆಮರೆಸಿಕೊಂಡಿದ್ದು, ಇವರ ಪತ್ತೆಗಾಗಿ ತಂಡ ರಚಿಸಿರುವ ಪೊಲೀಸರು, ಹುಡುಕಾಟ ಆರಂಭಿಸಿದ್ದಾರೆ.
Advertisement