ಬೇಕರಿಯಲ್ಲಿ ದಾಂಧಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬೇಕರಿಯಲ್ಲಿ ದಾಂಧಲೆ ನಡೆಸಿ, ಇಬ್ಬರು ನೌಕರರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೇಕರಿಯಲ್ಲಿ ದಾಂಧಲೆ ನಡೆಸಿ, ಇಬ್ಬರು ನೌಕರರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿಗಳನ್ನು ಬಸವರಾಜ (33) ಮತ್ತು ಭರತ್ (25) ಎಂದು ಗುರುತಿಸಲಾಗಿದೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಹೇಳಇದ್ದಾರೆ.

ಆಗಸ್ಟ್ 16 ರಂದು ಆರೋಪಿಗಳು ಬ್ಯಾಡರಹಳ್ಳಿಯ ತುಂಗಾನಗರ ಮುಖ್ಯರಸ್ತೆಯಲ್ಲಿರುವ ಶ್ರೀ ಮಂಜುನಾಥ ಕೇಕ್ ಕಾರ್ನರ್ ಮತ್ತು ಬೇಕರಿಯನ್ನು ಧ್ವಂಸಗೊಳಿಸಿದ್ದರು. ಈ ವೇಲೆ ಇಬ್ಬರು ನೌಕರರ ಮೇಲೆ ಹಲ್ಲೆ ನಡೆಸಿದ್ದರು.

ಘಟನೆ ನಡೆಯುವುದಕ್ಕೂ ಮೂರು ದಿನಗಳ ಹಿಂದೆ ಪಫ್ ಖರೀದಿಸಲು ಹೋಗಿದ್ದ ಬಸವರಾಜ್ ಎಂಬಾತನೊಂದಿಗೆ ಬೇಕರಿ ಮಾಲೀಕ ಚಂದ್ರಶೇಖರ್ ವಾಗ್ವಾದ ನಡೆಸಿದ್ದರು. ಹೀಗಾಗಿ ಮಾಲೀಕನಿಗೆ ತಕ್ಕ ಪಾಠ ಕಲಿಸಲು ಬಸವರಾಜ್ ಮೂವರು ಸ್ನೇಹಿತರೊಂದಿಗೆ ಸೇರಿಕೊಂಡು ಬೇಕರಿಯಲ್ಲಿ ದಾಂಧಲೆ ನಡೆಸದ್ದ ಎಂದು ಪೊಲೀಸು ಮಾಹಿತಿ ನೀಡಿದ್ದಾರೆ.

ಎರಡು ಬೈಕ್ ಗಳಲ್ಲಿ ತೆರಳಿದ್ದ ಆರೋಪಿಗಳು ಹೆಲ್ಮೆಟ್ ಹಾಗೂ ಮಾಸ್ಕ್ ಧರಿಸಿ, ದಾಂಧನೆ ನಡೆಸಿದ್ದರು. ಅಲ್ಲದೆ, ಬೈಕ್‌ಗಳ ನೋಂದಣಿ ಸಂಖ್ಯೆಗೂ ಕಪ್ಪು ಬಣ್ಣ ಬಳಿದಿದ್ದರು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com