ಬೆಂಗಳೂರು: ಮೆಟ್ರೋ ರೈಲುಗಳಲ್ಲಿ ಯುವಕ-ಯುವತಿಯರ ಹುಚ್ಚಾಟ ಮುಂದುವರೆದಿದ್ದು, ಚುಂಬನ, ಆಲಿಂಗನ, ಸೀಟಿಗಾಗಿ ಗಲಾಟೆಯಂತಹ ಪ್ರಕರಣಗಳು ವರದಿಯಾಗುತ್ತಿರುವಾಗಲೇ ಇಲ್ಲೊಬ್ಬ ಯುವತಿ ಚಲಿಸುತ್ತಿರುವ ಮೆಟ್ರೋ ರೈಲಿನಲ್ಲಿ ಪಲ್ಟಿ ಹೊಡೆಯುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಮೆಟ್ರೋ ರೈಲಿನಲ್ಲಿ ಯಾವುದೇ ರೀತಿಯ ಹುಚ್ಚಾಟಗಳು ನಡೆಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ಕೂಡ ಯುವತಿ ಮೆಟ್ರೋ ಅಧಿಕಾರಿಗಳ ಪುನರಾವರ್ತಿತ ಎಚ್ಚರಿಕೆಯ ಹೊರತಾಗಿಯೂ, ಚಲಿಸುತ್ತಿರುವ ಮೆಟ್ರೋ ರೈಲಿನಲ್ಲಿ ಪಲ್ಟಿ ಹೊಡೆಯುವ ಸಾಹಸ ಮಾಡಿ ಅದನ್ನು ವಿಡಿಯೋ ಮಾಡಿದ್ದಾಳೆ. ಅಲ್ಲದೆ ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಮಿಶಾ ಶರ್ಮಾ ಎಂಬ ಅಥ್ಲೀಟ್ ಈ ವಿಡಿಯೋ ಮಾಡಿದ್ದು, ಈ ವಿಡಿಯೋ ಸಹ ಪ್ರಯಾಣಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮಿಶಾ ಅವರಂತಹ ವ್ಯಕ್ತಿಗಳ ಈ ಕ್ರಮಗಳು ಇತರ ಪ್ರಯಾಣಿಕರ ಪ್ರಯಾಣದ ಅನುಭವಕ್ಕೆ ಅಡ್ಡಿಪಡಿಸುತ್ತಿವೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement