ಮದುವೆಯಾಗುವುದಾಗಿ ಹೇಳಿ ವಂಚನೆ: 70 ವರ್ಷದ ವೃದ್ಧನ ಮೇಲೆ 63ರ ವೃದ್ಧೆಯಿಂದ ದೂರು ದಾಖಲು!

ಐದು ವರ್ಷಗಳಿಂದ ಜೊತೆಗೆ ಸುತ್ತಾಡಿ, ಮದುವೆಯಾಗುವುದಾಗಿ ನಂಬಿಸಿ ಇದೀಗ ಮೋಸ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ 70 ವರ್ಷದ ವೃದ್ಧನ ಮೇಲೆ 63 ವರ್ಷದ ವೃದ್ಧೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಐದು ವರ್ಷಗಳಿಂದ ಜೊತೆಗೆ ಸುತ್ತಾಡಿ, ಮದುವೆಯಾಗುವುದಾಗಿ ನಂಬಿಸಿ ಇದೀಗ ಮೋಸ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ 70 ವರ್ಷದ ವೃದ್ಧನ ಮೇಲೆ 63 ವರ್ಷದ ವೃದ್ಧೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಲಸೂರು ನಿವಾಸಿ ದಯಾವಾಣಿ ದೂರು ನೀಡಿದ ವೃದ್ಧ ಮಹಿಳೆಯಾಗಿದ್ದಾರೆ. ದೂರು ಹಿನ್ನೆಲೆಯಲ್ಲಿ ಹಲಸೂರು ನಿವಾಸಿ ಲೋಕನಾಥನ್ ವಿರುದ್ಧ ಪ್ರಕಱಣ ದಾಖಲಿಸಿಕೊಂಡ, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಧವೆಯಾಗಿರುವ ವೃದ್ಧ ಮಹಿಳೆ ಹಾಗೂ ವೃದ್ಧ ಒಂದೇ ಪ್ರದೇಶದ ನಿವಾಸಿಗಳಾಗಿದ್ದು, ಬೆಳಗಿನ ವಾಕಿಂಗ್ ವೇಳೆ ಇಬ್ಬರೂ ಭೇಟಿಯಾಗುತ್ತಿದ್ದರು. ವೃದ್ಧ ವ್ಯಕ್ತಿ ತನ್ನ ವಿಚ್ಛೇದಿತ ಮಗನಿಗೆ ವಿವಾಹ ಮಾಡಲು ಹುಡುಗಿಗಾಗಿ ಹುಡುಕಾಟ ನಡೆಸಿದ್ದ. ಇದರಂತೆ ವೃದ್ಧ ಮಹಿಳೆಯ ಸಹಾಯವನ್ನು ಕೇಳಿದ್ದಾನೆ. ಇದಾದ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದು ಅದು ಪ್ರೀತಿಗೆ ತಿರುಗಿದೆ. ನಂತರ ಇಬ್ಬರೂ ಜೊತೆಯಾಗಿ ಮುರುಡೇಶ್ವರ, ಸಿಂಗಂದೂರು, ಶ್ರೀರಂಗಪಟ್ಟಣ ಸೇರಿದಂತೆ ಹಲವೆಡೆ ಪ್ರವಾಸ ಮಾಡಿದ್ದಾರೆ.

ಇವರಿಬ್ಬರು ಕೆಲ ಸಮಯದಿಂದ ಸಂಬಂಧದಲ್ಲಿದ್ದಾರೆ ಎನ್ನಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಮಗನ ಮದುವೆಗೆ ಲೋಗನಾಥನ್ ಸಿದ್ಧತೆ ನಡೆಸಿದ್ದರು.

ಇದೇ ಸಂದರ್ಭದಲ್ಲಿ ತನ್ನನ್ನು ಮದುವೆಯಾಗುವಂತೆ ದಯಾವಾಣಿ ಕೇಳಿದ್ದು, ಲೋಕನಾಥನ್ ಇದಕ್ಕೆ ನಿರಾಕರಿಸಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ವಇಚ್ಛೆಯಿಂದ ಇಬ್ಬರೂ ಸಂಬಂಧದಲ್ಲಿದ್ದರು. ಪ್ರಕರಣ ಸಂಬಂಧ ಯಾರ ಬಂಧನವೂ ಆಗಿಲ್ಲ. ವೃದ್ಧ ವ್ಯಕ್ತಿಯ ಹೇಳಿಕೆ ದಾಖಲಿಸಿಕೊಳ್ಳಲು ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪೂರ್ವ ವಲಯ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com