ಬೆಂಗಳೂರು: ಇಂದಿನಿಂದ ನಗರದಲ್ಲಿ 3 ದಿನ ವಿದ್ಯುತ್ ವ್ಯತ್ಯಯ, ಎಲ್ಲೆಲ್ಲಿ... ಇಲ್ಲಿದೆ ಮಾಹಿತಿ

ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ನಗರದಲ್ಲಿ ಆಗಸ್ಟ್ 22 ರಿಂದ 24 ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ನಗರದಲ್ಲಿ ಆಗಸ್ಟ್ 22 ರಿಂದ 24 ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಆಗಸ್ಟ್ 22 ರಂದು ಲಕ್ಷ್ಮಿ ಲೇಔಟ್, ಕಮ್ಮನಹಳ್ಳಿ, ಶಾಂತಿನಿಕೇತನ, ದೊಡ್ಡಮ್ಮ ಲೇಔಟ್, ಪಾಂಡುರಂಗನಗರ ಲೇಔಟ್, ಬಿಡಬ್ಲ್ಯುಎಸ್ಎಸ್'ಬಿ ಕೊತ್ತನೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಆಗಸ್ಟ್ 23 ರಂದು ಯಲಹಂಕ ನ್ಯೂ ಟೌನ್, ವಿದ್ಯಾರಣ್ಯಪುರ, ನ್ಯಾಯಾಂಗ ಬಡಾವಣೆ, ಉಣ್ಣಿಕೃಷ್ಣ ಡಬಲ್ ರೋಡ್, ಶೇಷಾದ್ರಿಪುರಂ, ಡೈರಿ ಸರ್ಕಲ್, ಸೋಮೇಶ್ವರ ನಗರ, ಚೌಡೇಶ್ವರಿ ಲೇಔಟ್, ಜಿಕೆವಿಕೆ, ಎನ್‌ಸಿಬಿಎಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ.

ಆಗಸ್ಟ್ 24 ರಂದು ಸಹಕಾರನಗರ, ಬ್ಯಾಟರಾಯನಪುರ, ತಲಕಾವೇರಿ ಲೇಔಟ್, ಅಮೃತಹಳ್ಳಿ, ಜಕ್ಕೂರು, ಭುವನೇಶ್ವರಿನಗರ, ಅಮೃತನಗರ, ಶಿವರಾಮ ಕಾರಂತನಗರ, ನವ್ಯನಗರ, ಕೊಡಿಗೇಹಳ್ಳಿ ಮುಖ್ಯರಸ್ತೆ, ಡಿಫೆನ್ಸ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ವಿದ್ಯುತ್ ಇರುವುದಿಲ್ಲ.

ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಎಚ್‌ಎಸ್‌ಆರ್ ಲೇಔಟ್, ಜಕ್ಕಸಂದ್ರ, ಸಿಪಿಡಬ್ಲ್ಯೂಡಿ ಕ್ವಾರ್ಟರ್ಸ್, ಟೀಚರ್ಸ್ ಕಾಲೋನಿ, ವೆಂಕಟಾಪುರ, ಕೆಎಸ್‌ಆರ್‌ಪಿ ಕ್ವಾರ್ಟರ್ಸ್, ಎಂಎಲ್‌ಎ ಲೇಔಟ್, ಸೋಮಸುಂದರಪಾಳ್ಯ, ಹರಳೂರು ರಸ್ತೆ, ಅಗರ ಫ್ಲೈಓವರ್, ಹೊಸೂರು ಮುಖ್ಯರಸ್ತೆ, ಅಂಬೇಡ್ಕರ್ ನಗರ, ಐಟಿಐ ಲೇಔಟ್, ಬೇಗೂರುಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೊಮ್ಮನಹಳ್ಳಿ, ಕೂಡ್ಲು, ವಾಸ್ತು ಲೇಔಟ್, ಮಾರುತಿ ಲೇಔಟ್, ಕೋರಮಂಗಲ, ವೀವರ್ಸ್ ಕಾಲೋನಿ, ಮಾರುತಿ ನಗರ, ಪಿಲ್ಲಗಾನಹಳ್ಳಿ, ಗೊಟ್ಟಿಗೆರೆ, ಎಂಎಲ್‌ಎ ಲೇಔಟ್, ಕಮ್ಮನಹಳ್ಳಿ, ಬಾಲಾಜಿ ಗಾರ್ಡನ್ ಲೇಔಟ್, ಬಸವನಪುರ, ತೇಜಶ್ವಿನಿನಗರ ಹಂತ-2, ಮೈಲಸಂದರ, ಹೊಮ್ಮೇದಡ್ಡಹಳ್ಳಿ, ಪ್ರಭಾವನ ರೆಡ್ಡಿ ಬೇಟದಾಸಪುರ, ಹುಲ್ಲಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಇರುವುದಿಲ್ಲ.

ವಿದ್ಯುತ್‌ ವ್ಯತ್ಯಯ ಹಾಗೂ ಅಡಚಣೆಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ಸಲ್ಲಿಸಲು ನೀವು 1912 ಅನ್ನು ಡಯಲ್ ಮಾಡಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com