ಕೈ ಕೊಟ್ಟ ಮುಂಗಾರು; ಆಕಾಶದತ್ತ ರೈತರ ಚಿತ್ತ; ಮಳೆಗಾಗಿ ಪ್ರಾರ್ಥನೆ

ಮುಂಗಾರು ಹಂಗಾಮಿನ ಬಿತ್ತನೆಗಾಗಿ ಭೂಮಿ ಹದ ಮಾಡಿಕೊಂಡು ರೈತರು ಕಾಯುತ್ತಿದ್ದು, ಸಕಾಲಕ್ಕೆ ಮಳೆ ಬರದೇ ಇರುವುದರಿಂದ ರೈತರು ಮುಂಗಾರು ಕೈಕೊಡುವ ಆತಂಕದಲ್ಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಮುಂಗಾರು ಹಂಗಾಮಿನ ಬಿತ್ತನೆಗಾಗಿ ಭೂಮಿ ಹದ ಮಾಡಿಕೊಂಡು ರೈತರು ಕಾಯುತ್ತಿದ್ದು, ಸಕಾಲಕ್ಕೆ ಮಳೆ ಬರದೇ ಇರುವುದರಿಂದ ರೈತರು ಮುಂಗಾರು ಕೈಕೊಡುವ ಆತಂಕದಲ್ಲಿದ್ದಾರೆ.

ನೈಋತ್ಯ ಮುಂಗಾರು ಅಂತ್ಯಗೊಳ್ಳಲು ಇನ್ನು 45 ದಿನಗಳು ಬಾಕಿ ಉಳಿದಿದ್ದು, ರಾಜ್ಯದ ದೇವಸ್ಥಾನ, ಮಸೀದಿಗಳು ಮತ್ತು ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆಗಲ್ಲಿ ವಿಶೇಷ ಪ್ರಾಥನೆಗಳನ್ನು ಸಲ್ಲಿಸಲಾಗುತ್ತಿದೆ.

ಬೆಳೆಗಳಿಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಮಳೆಯ ಮೇಲೆ ಅವಲಂಬಿತವಾಗಿದ್ದು, ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಈಗಾಗಲೇ ಕೋಲಾರದ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಆರಂಭವಾಗಿದವೆ. ಪೂಜೆ ಸಂದರ್ಭದಲ್ಲಿ ಮಳೆಗಾಗಿ ಸಲ್ಲಿಸಲಾಗುವ ವಿಶೇಷ ಪೂಜೆಗೆ ಆಗಮಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ ಕೋಲಾರದ ಕುರುಡುಮಲೆ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಎಸ್.ವಿಶ್ವನಾಥ ದೀಕ್ಷಿತ್ ಅವರು ಹೇಳಿದ್ದಾರೆ.

ಮಳೆಗಾಗಿ ಮಸೀದಿಗಳು ಮತ್ತು ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುವುದು. ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಮೌಲಾನಾ ಮಕ್ಸೂದ್ ರಶಾದಿ ಅವರು ಹೇಳಿದ್ದಾರೆ.

‘ನಮಾಜ್-ಎ-ಇಸ್ತಿಸ್ಕಾ’ವನ್ನು ಸಲ್ಲಿಸಲಾಗುವುದು. ರಾಜ್ಯದ 12,000 ಮಸೀದಿಗಳಲ್ಲಿ ಈ ಕುರಿತು ಪ್ರವಚನಗಳನ್ನು ನಡೆಸಲಾಗುತ್ತದೆ. ಬೆಳೆಗಳಿಗೆ “ಮಳೆ ಬಹಳ ಅವಶ್ಯಕ. ರೈತರು ಸಂಕಷ್ಟದಲ್ಲಿದ್ದು, ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಶುಕ್ರವಾರದ ಪ್ರವಚನದಲ್ಲಿ ಪಾಲ್ಗೊಳ್ಳುವ ಸಮುದಾಯದವರು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ, ”ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಸೇಂಟ್ ಮೇರಿಸ್ ಬೆಸಿಲಿಕಾದ ಪ್ಯಾರಿಷ್ ಪಾದ್ರಿ ಫಾದರ್ ಮಾರ್ಟಿನ್ ಕುಮಾರ್ ಮಾತನಾಡಿ, ಮಳೆಯು "ದೇವರ ಕೊಡುಗೆ" ಎಂದು ಸಮುದಾಯದ ಸದಸ್ಯರಿಗೆ ತಿಳಿಸಲಾಗಿದೆ. ಮಾನವನ ತಪ್ಪುಗಳ ಪರಿಣಾಮವಾಗಿ ಬರ ಸೃಷ್ಟಿಯಾಗುತ್ತಿದೆ. ಭಾನುವಾರದ ಪ್ರಾರ್ಥನೆ ಸಮಯದಲ್ಲಿ ಜನರು ಸಲ್ಲಿಸುವ ಪ್ರಾರ್ಥನೆಯಿಂದ ದೇವರು ಸಂತೋಷಗೊಂಡರೆ, ಮಳೆಯ ಮೂಲಕ ಆಶೀರ್ವಾದ ನೀಡುತ್ತಾನೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com