ಬಾಗಲಕೋಟೆ: 17 ದಿನ ಮಗು ಸೇರಿ ಮೂರು ಮಕ್ಕಳೊಂದಿಗೆ ಬಾವಿಗೆ ಹಾರಿದ್ದ ತಾಯಿ ರಕ್ಷಣೆ, ಮಕ್ಕಳು ನೀರುಪಾಲು!

ಮೂವರು ಮಕ್ಕಳೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ: ಮೂವರು ಮಕ್ಕಳೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ನಡೆದಿದೆ.  

ಬಾಗಲಕೋಟೆ ಜಿಲ್ಲೆಯ ಕುಂಬಾರಹಳ್ಳ ಗ್ರಾಮದ ತೋಟದ ಮನೆಯಲ್ಲಿ ಈ ದುರ್ಘಟನೆ ನಡೆದಿದ್ದು ಈ ವೇಳೆ ಕುಂಬಾರಹಳ್ಳ ಗ್ರಾಮದ 28 ವರ್ಷದ ಸಂಗೀತಾ ಬದುಕುಳಿದಿದ್ದಾಳೆ. ಆದರೆ ಮೂವರು ಮಕ್ಕಳೂ ನೀರುಪಾಲಾಗಿದ್ದಾರೆ. 

ಮೃತ ಮಕ್ಕಳಲ್ಲಿ 17 ದಿನದ ಹೆಣ್ಣುಮಗೂವು ಸೇರಿದೆ. ಇನ್ನುಳಿದಂತೆ 6 ವರ್ಷದ ಮಗ ಶ್ರೀಶೈಲ ಹಾಗೂ ನಾಲ್ಕು ವರ್ಷದ ಹೆಣ್ಣುಮಗು ಶ್ರಾವಣಿ ಮೃತಪಟ್ಟಿದ್ದಾಳೆ.

ಈ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಸಿಪಿಐ ಮಲ್ಲಪ್ಪ‌ ಮಡ್ಡಿ ಭೇಟಿ ನೀಡಿದ್ದರು. ಸದ್ಯ ಮೃತ ಮಕ್ಕಳ ಮೃತದೇಹವನ್ನು ಹೊರತೆಗೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com